ಆಪರೇಶನ್‌ ಹಸ್ತ ಮಾಡುವ ಅನಿವಾರ್ಯತೆ ಕಾಂಗ್ರೆಸ್ಸಿಗಿಲ್ಲ, ​ಅನ್ಯ ಪಕ್ಷದ ಮುಖಂಡ​ರನ್ನು ಕರೆ ತರುವಂತೆ ಯಾರಿಗೂ ಟಾಸ್ಕ್ ಕೊಟ್ಟಿಲ್ಲ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ತಿಳಿಸಿದರು.

 ರಾಯಚೂರು (ಆ.19) :  ಆಪರೇಶನ್‌ ಹಸ್ತ ಮಾಡುವ ಅನಿವಾರ್ಯತೆ ಕಾಂಗ್ರೆಸ್ಸಿಗಿಲ್ಲ, ​ಅನ್ಯ ಪಕ್ಷದ ಮುಖಂಡ​ರನ್ನು ಕರೆ ತರುವಂತೆ ಯಾರಿಗೂ ಟಾಸ್ಕ್ ಕೊಟ್ಟಿಲ್ಲ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ತಿಳಿಸಿದರು.

ಈ ಸಂಬಂಧ ಶುಕ್ರವಾರ ಮಾತನಾಡಿದ ಅವ​ರು, ಬೇರೆ ಪಕ್ಷಗಳ ಪ್ರಮುಖ ನಾಯಕರೇ ಕಾಂಗ್ರೆ​ಸ್‌ಗೆ ಸೇರ​ಲು ಮುಂಚೂಣಿಯಲ್ಲಿದ್ದಾರೆ. ಕಾಂಗ್ರೆಸ್‌ ಬಿಟ್ಟು ಹೋದ​ವರೇ ತಾವು ಹಿಂದೆ ಮಾಡಿದ ತಪ್ಪಿನ ಅರಿ​ವಾಗಿ ಮತ್ತೆ ಕೈ ಪಕ್ಷಕ್ಕೆ ಬರು​ತ್ತಿ​ರ​ಬ​ಹುದು.

ಮುಜರಾಯಿ ದೇಗುಲಗಳಿಗೆ ಹಣ ಬಿಡುಗಡೆಗೆ ಸರ್ಕಾರ ಅಸ್ತು; ಅನುದಾನಕ್ಕೆ ತಡೆ ನೀಡಿದ್ದ ಆದೇಶ ವಾಪಸ್‌

ಕಾಂಗ್ರೆಸ್‌ನ ಸಿದ್ಧಾಂತವನ್ನು ಒಪ್ಪಿಕೊಂಡು ಯಾರು ನಮ್ಮ ಪಕ್ಷಕ್ಕೆ ಆಗಮಿಸುತ್ತಾರೊ ಅವರೆಲ್ಲರಿಗೂ ಸ್ವಾಗತವಿದೆ. ಅನೇಕ ಜನರು ಈಗಾಗಲೇ ಪಕ್ಷದ ರಾಜ್ಯ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಯಾರು ಸಂಪರ್ಕದಲ್ಲಿದ್ದಾರೆ ಎಂದು ನಾನು ಬಹಿರಂಗಪಡಿ​ಸ​ಲು ಆಗಲ್ಲ. ಪಕ್ಷ ಸಿದ್ಧಾಂತಕ್ಕೆ ಬದ್ದರಾದವರು ಯಾರು ಪಕ್ಷಾಂತರ ಮಾಡಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನಗೂ ಬೇರೆ ಪಕ್ಷಗಳಿಂದ ಕರೆಗಳು ಬಂದವು. ಆದರೆ, ನಾನು ಹೋಗಲಿಲ್ಲ. ಕಾಂಗ್ರೆಸ್‌ನಲ್ಲಿ ಲೋಕಸಭೆ ಚುನಾವಣೆಗೆ ಒಂದೊಂದು ಕ್ಷೇತ್ರದಲ್ಲಿ ಮೂರ್ನಾಲ್ಕು ಅಭ್ಯರ್ಥಿಗಳು ಸಿದ್ಧರಿದ್ದಾರೆ. ಅಲ್ಲದೇ, ಕಾಂಗ್ರೆಸ್‌ಗೆ ಆಪರೇಶನ್‌ ಮಾಡುವ ಪರಿಸ್ಥಿತಿ ಬಂದಿಲ್ಲ ಎಂದು ತಿಳಿ​ಸಿದರು.

ಕಲ್ಯಾಣ ಕರ್ನಾಟಕ ಭಾಗ, ಮುಂಬೈ ಕರ್ನಾಟಕ, ಮೈಸೂರು ಭಾಗದಲ್ಲೂ ಸಾಕಷ್ಟುನಾಯಕರು ಕಾಂಗ್ರೆಸ್‌ ಸೇರುವ ತವಕದಲ್ಲಿದ್ದಾರೆ. ಯಾರು ಎಂದು ನಾನು ಹೇಳಲು ಬರುವುದಿಲ್ಲ. ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಯಾರೇ ಬಂದರೂ ಸ್ವಾಗತ ಕೋರುತ್ತೇವೆ. ಆದರೆ, ಬೇರೆ ಪಕ್ಷಗಳಿಂದ ಕರೆ ತರಲು ಸಿಎಂ, ಡಿಸಿಎಂ ನಮಗೆ ಯಾವುದೇ ಟಾಸ್‌್ಕಗಳನ್ನು ನೀಡಿಲ್ಲ ಎಂದು ತಿಳಿಸಿದರು.

Shakti scheme: 41 ಕೋಟಿ ಸ್ತ್ರೀಯರಿಂದ ಉಚಿತ ಬಸ್ ಪ್ರಯಾಣ: ಸಿದ್ದರಾಮಯ್ಯ

ಡಿ.ಕೆ.​ಸು​ರೇಶ, ಬಿ.ವಿ.​ನಾ​ಯಕ ಅವರು ಭೇಟಿ​ಯಾ​ಗಿ​ರು​ವು​ದರ ಬಗ್ಗೆ ಮಾಹಿ​ತಿಲ್ಲ, ಅವ​ರಿ​ಬ್ಬರು ಸಂಸ​ದ​ರಾ​ಗಿ​ದ್ದರು ಯಾವ ಸಮ​ಯ​ದಲ್ಲಿ ಭೇಟಿ​ಯಾ​ಗಿ​ದ್ದಾ​ರೆಯೋ ಗೊತ್ತಿಲ್ಲ, ರಾಜ​ಕೀಯ ನಿಂತ ನೀರಲ್ಲ, ಹೋಗು​ತ್ತಿ​ರು​ತ್ತದೆ ಸಮಯ ಸಂದರ್ಭ ಬಂದಾಗ ಕಾಂಗ್ರೆಸ್‌ ತತ್ವ ಸಿದ್ದಾಂತಕ್ಕೆ ಯಾರು ವಿಶ್ವಾ​ಸ​ವಿಟ್ಟು ಬರು​ತ್ತಾ​ರೆಯೋ ಅಂತ​ವ​ರಿಗೆ ಅವ​ಕಾ​ಶ​ವಿದ್ದು, ಆಯಾ ಜಿಲ್ಲೆ ರಾಜ​ಕೀಯ ಪರಿ​ಸ್ಥಿ​ತಿ ನೋಡಿ​ಕೊಂಡು ಹೈಕ​ಮಾಂಡ್‌ ಸೂಕ್ತ ತೀರ್ಮಾನ ಕೈಗೊ​ಳ್ಳ​ಲಿ​ದೆ. ಮಾಜಿ ಸಂಸದ ಹಾಗೂ ಬಿಜೆಪಿ ಮುಖಂಡ ಬಿ.ವಿ ನಾಯಕ ಹಾಗೂ ಮಾಜಿ ಶಾಸಕ ಪ್ರತಾಪಗೌಡ ಅವರು ಕಾಂಗ್ರೆಸ್‌ ಸೇರ್ಪಡೆ ವಿಚಾರವೂ ನನ್ನ ಮಾಹಿತಿಗಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು.