ಚಾರಣಕ್ಕೆ ಬಂದು ದಾರಿ ತಪ್ಪಿ ಕಾಡಿನಲ್ಲಿ ಅಲೆದಾಟ; ಬೆಂಗಳೂರಿನ 6 ಜನ ಹುಡುಗಿಯರ ರಕ್ಷಣೆ
ಚಾರಣಕ್ಕೆ ಆರು ಜನ ಯುವತಿಯರು ವಾಪಸ್ ಆಗುವಾಗ ದಾರಿ ತಪ್ಪಿ ಕಾಡಿನಲ್ಲಿ ಅಲೆದಾಡಿದ ಘಟನೆ ರಾಮನಗರದಲ್ಲಿ ನಡೆದಿದೆ.
ರಾಮನಗರ (ಡಿ.17): ಚಾರಣಕ್ಕೆ ಆರು ಜನ ಯುವತಿಯರು ವಾಪಸ್ ಆಗುವಾಗ ದಾರಿ ತಪ್ಪಿ ಕಾಡಿನಲ್ಲಿ ಅಲೆದಾಡಿದ ಘಟನೆ ರಾಮನಗರದಲ್ಲಿ ನಡೆದಿದೆ.
ಬೆಂಗಳೂರಿನಿಂದ ರಾಮನಗರದ ಹಂದಿಗೊಂದಿ ಬೆಟ್ಟಕ್ಕೆ ಬಂದಿದ್ದ ಆರು ಜನ ಹುಡುಗಿಯರು. ಚಾರಣ ಮುಗಿಸಿ ವಾಪಸ್ ಹೋಗುವಾಗ ಕಾಡಿನ ಮಧ್ಯೆ ದಾರಿ ತಪ್ಪಿದ್ದಾರೆ. ಹೊರಹೋಗಲು ದಾರಿ ಸಿಗದೆ ಕಾಡಿನಲ್ಲಿ ಅಲೆದಾಡಿದ್ದಾರೆ. ಕೊನೆಗೆ 112ಗೆ ಕರೆ ಮಾಡಿ ದಾರಿ ತಪ್ಪಿದ ಬಗ್ಗೆ ಮಾಹಿತಿ ನೀಡಿರುವ ಹುಡುಗಿಯರು.
ತಕ್ಷಣ ಕಾರ್ಯಪ್ರವೃತ್ತರಾದ ರಾಮನಗರ ಐನೂರು ಪೊಲೀಸರು. ಕರೆ ಮಾಡಿದ ಜಾಡುಹಿಡಿದು ಹುಡುಗಿಯರ ರಕ್ಷಣೆಗೆ ಮುಂದಾದ ಪೊಲೀಸರು. ಬಸವನಪುರ ಗ್ರಾಮದ ಸುಮಾರು ಹತ್ತಕ್ಕೂ ಹೆಚ್ಚು ಜನರನ್ನು ಬಳಸಿಕೊಂಡು ಪೊಲೀಸರು ಕಾರ್ಯಾಚರಣೆ ರಾತ್ರಿ ಸುಮಾರು 9 ಗಂಟೆಗೆ ಪತ್ತೆ ಮಾಡಿದ ಪೊಲೀಸರು. ದಾರಿ ತಪ್ಪಿದ್ದ ಹುಡುಗಿಯರ ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದು ಬೆಂಗಳೂರಿಗೆ ಕಳುಹಿಸಿಕೊಟ್ಟ ಪೊಲೀಸರು.
ನಾಡಪ್ರಭು ಕೆಂಪೇಗೌಡರ ಬಗ್ಗೆ ಅವಹೇಳನಕಾರಿ ಪೋಸ್ಟ್; ನಟ ಚೇತನ್ ಅಹಿಂಸಾ ವಿರುದ್ಧ ದೂರು
ರಾಮನಗರ ವ್ಯಾಪ್ತಿ ಕಾಡುಪ್ರಾಣಿಗಳ ಹಾವಳಿಯೂ ಹೆಚ್ಚಾಗಿದೆ ಇಂಥ ಪರಿಸ್ಥಿತಿಯಲ್ಲಿ ಯುವತಿಯರು ದಾರಿ ತಪ್ಪಿ ಕಾಡಿನಲ್ಲಿ ಅಲೆದಾಡಿದ್ದು ಪೊಲೀಸರಿಗೂ ಟೆನ್ಷನ್ ತರಿಸಿದ್ದು ಸುಳ್ಳಲ್ಲ. ಕೊನೆಗೆ ಗ್ರಾಮಸ್ಥರು, ಪೊಲೀಸರ ಪ್ರಯತ್ನದಿಂದ ದಾರಿತಪ್ಪಿದ್ದ ಹುಡುಗಿಯರ ಪತ್ತೆ ಮಾಡಿ ಸುರಕ್ಷಿತವಾಗಿ ಬೆಂಗಳೂರಿಗೆ ಕಳಿಸಿಕೊಟ್ಟ ಬಳಿಕವೇ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.
ಬೆಂಗಳೂರಲ್ಲಿ ಇನ್ಸ್ ಪೆಕ್ಟರ್ ಹಣ ದುರುಪಯೋಗ ಪ್ರಕರಣ; ಆಪ್ತನ ಮೊಬೈಲ್‌ನಲ್ಲಿ ರೈಸ್ ಪುಲ್ಲಿಂಗ್ ಡೀಲ್ ವಿಡಿಯೋ ಪತ್ತೆ!