Asianet Suvarna News Asianet Suvarna News

ಎಚ್‌ಡಿ ರೇವಣ್ಣ ಆಪ್ತ, ಗುತ್ತಿಗೆದಾರನ ಕೊಲೆಗೆ ಯತ್ನ; ಕೂದಲೆಳೆ ಅಂತರದಲ್ಲಿ ಪಾರು!

ಜೆಡಿಎಸ್ ಮಾಜಿ ಸಚಿವ ಎಚ್‌ಡಿ ರೇವಣ್ಣ ಆಪ್ತ, ಗುತ್ತಿಗೆದಾರನ ಮೇಲೆ ಅಪರಿಚಿತ ವ್ಯಕ್ತಿಗಳು ಕೊಲೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿ ಗ್ರಾಮದ ಬಳಿ ನಡೆದಿದೆ.

The miscreants tried to kill the contractor Ashwath at hassan rav
Author
First Published Oct 11, 2023, 12:03 AM IST

ಹಾಸನ (ಅ.11) : ಜೆಡಿಎಸ್ ಮಾಜಿ ಸಚಿವ ಎಚ್‌ಡಿ ರೇವಣ್ಣ ಆಪ್ತ, ಗುತ್ತಿಗೆದಾರನ ಮೇಲೆ ಅಪರಿಚಿತ ವ್ಯಕ್ತಿಗಳು ಕೊಲೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿ ಗ್ರಾಮದ ಬಳಿ ನಡೆದಿದೆ.

ಕೂದಲೆಳೆ ಅಂತರದಲ್ಲಿ ಪಾರಾಗಿ ಪ್ರಾಣ ಉಳಿಸಿಕೊಂಡ ಗುತ್ತಿಗೆದಾರ ಅಶ್ವಥ್. ಸಂಜೆ ಹಾಸನದಿಂದ ಎಚ್.ಡಿ.ರೇವಣ್ಣ ಅವರ ಜೊತೆ ಹೊಳೆನರಸೀಪುರದ ಮನೆಗೆ ತೆರಳಿದ್ದ ಅಶ್ವಥ್. ಕೆಲಕಾಲ ಎಚ್.ಡಿ.ರೇವಣ್ಣ ಅವರ ನಿವಾಸದಲ್ಲಿದ್ದರು. ಬಳಿಕ ಚನ್ನರಾಯಪಟ್ಟಣದ ತಮ್ಮ ನಿವಾಸಕ್ಕೆ KA-53 MF 5555 ನಂಬರ್ ಫಾರ್ಚುನರ್ ಕಾರಿನಲ್ಲಿ ಹೊರಟಿದ್ದರು.

ಖಾಲಿ ಇಂಜೆಕ್ಷನ್‌ ಚುಚ್ಚಿ ಆಸ್ಪತ್ರೆಯಲ್ಲೇ ಬಾಣಂತಿಯ ಸಾಯಿಸಲು ಯತ್ನಿಸಿದ ನಕಲಿ ನರ್ಸ್‌ ಬಂಧನ!

ಅಶ್ವಥ್ ಮನೆಗೆ ಹೊರಟಿರುವ ಬಗ್ಗೆ ಮಾಹಿತಿ ಪಡೆದು ಸೂರನಹಳ್ಳಿ ಹಂಪ್ಸ್ ಬಳಿ ಕಾರಿನ ಮೇಲೆ ಅಟ್ಯಾಕ್ ಮಾಡಿದ ಅಪರಿಚಿತ ವ್ಯಕ್ತಿಗಳು. ಕಾರಿನ ಗ್ಲಾಸ್ ಮೇಲೆ ಕಲ್ಲು ಎತ್ತಿಹಾಕಿ ಮಾರಕಾಸ್ತ್ರಗಳಿಂದ ಕೊಲೆ ಮಾಡಲು ಮುಂದಾದ ಐದಾರು ಮಂದಿ ದುಷ್ಕರ್ಮಿಗಳು. ಕೂಡಲೇ ಕಾರು ರಿವರ್ಸ್ ತೆಗೆದು 150 ಸ್ಪೀಡಲ್ಲಿ  ಕಾರು ಮುಂದೆ ಓಡಿಸಿಕೊಂಡು ಹೋಗಿ ಎಸ್ಕೇಪ್ ಆದ ಅಶ್ವಥ್. ಅಷ್ಟಕ್ಕೆ ಬಿಡದೆ ದುಷ್ಕರ್ಮಿಗಳು ಮೂಡಲಹಿಪ್ಪೆ ಗ್ರಾಮದವರೆಗೂ ಅಶ್ವಥ್ ಅವರನ್ನು ಹಿಂಬಾಲಿಸಿದ್ದಾರೆ.

ಜೆಡಿಎಸ್‌ ಕಾರ್ಯಕರ್ತನ ಬರ್ಬರ ಕೊಲೆ: ಎಚ್.ಡಿ ರೇವಣ್ಣ ಆಪ್ತನ ಕೊಲೆಯ ರಹಸ್ಯ ಇಲ್ಲಿದೆ..

ಈ ಘಟನೆ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ದೂರು ದಾಖಲಿಸಿರುವ ಅಶ್ವಥ್. ಘಟನೆ ಮಾಹಿತಿ ತಿಳಿದು ಚನ್ನರಾಯಪಟ್ಟಣಕ್ಕೆ ತೆರಳಿದ ಮಾಜಿ ಸಚಿವ ಎಚ್.ಡಿ.ರೇವಣ್ಣ‌

Follow Us:
Download App:
  • android
  • ios