ಕ್ಯಾಬ್‌ನಲ್ಲಿ ತೆರಳುತ್ತಿದ್ದ ನಾಗಲ್ಯಾಂಡ್‌ ಮೂಲದ ಯುವಕ-ಯವತಿಯನ್ನು ಮಾರ್ಗ ಮಧ್ಯೆ ಅಡ್ಡಗಟ್ಟಿಕಿಡಿಗೇಡಿಯೊಬ್ಬ ಹಲ್ಲೆ ನಡೆಸಿರುವ ಘಟನೆ ಬಾಣಸವಾಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು (ಆ.22):  ಕ್ಯಾಬ್‌ನಲ್ಲಿ ತೆರಳುತ್ತಿದ್ದ ನಾಗಲ್ಯಾಂಡ್‌ ಮೂಲದ ಯುವಕ-ಯವತಿಯನ್ನು ಮಾರ್ಗ ಮಧ್ಯೆ ಅಡ್ಡಗಟ್ಟಿಕಿಡಿಗೇಡಿಯೊಬ್ಬ ಹಲ್ಲೆ ನಡೆಸಿರುವ ಘಟನೆ ಬಾಣಸವಾಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆ.17ರಂದು ರಾತ್ರಿ ರಾಮನಸ್ವಾಮಿ ಪಾಳ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ನಾಗಲ್ಯಾಂಡ್‌ ಮೂಲದ ಯುವತಿ ನೀಡಿದ ದೂರಿನ ಮೇರೆಗೆ ಬಾಣಸವಾಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

Bengaluru crime: ಉದ್ಯಮಿ ಮನೆಯಿಂದ 1 ಕೇಜಿ ಚಿನ್ನ ಕದ್ದೊಯ್ದ ದುಷ್ಕರ್ಮಿಗಳು!

ಯುವಕ-ಯುವತಿ ಆ.17ರಂದು ರಾತ್ರಿ 11.30ರ ಸುಮಾರಿಗೆ ಊಟ ಮುಗಿಸಿಕೊಂಡು ಕ್ಯಾಬ್‌ನಲ್ಲಿ ಮನೆಯತ್ತ ತೆರಳುತ್ತಿದ್ದರು. ರಾಮಸ್ವಾಮಿಪಾಳ್ಯ ರಸ್ತೆಯಲ್ಲಿ ತೆರಳುವಾಗ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿ, ಕ್ಯಾಬ್‌ ಅಡ್ಡಗಟ್ಟಿಮಾರಕಾಸ್ತ್ರ ತೋರಿಸಿ ಸುಲಿಗೆಗೆ ಯತ್ನಿಸಿದ್ದಾನೆ. ಈ ವೇಳೆ ಕ್ಯಾಬ್‌ನ ಹಿಂಬದಿ ಆಸನದಲ್ಲಿ ಕುಳಿತ್ತಿದ್ದ ಯುವಕ-ಯುವತಿಯನ್ನು ಬೆದರಿಸಿ ಹಣ, ಬೆಲೆಬಾಳುವ ವಸ್ತುಗಳು ಇದ್ದರೆ ಕೊಡುವಂತೆ ಕೇಳಿದ್ದಾನೆ. ಈ ವೇಳೆ ಆ ಯುವಕ-ಯುವತಿ ತಪ್ಪಿಸಿಕೊಂಡು ಓಡಲು ಆರಂಭಿಸಿದ್ದಾರೆ.

ಈ ವೇಳೆ ಬೆನ್ನಟ್ಟಿಇಬ್ಬರ ಮೇಲೂ ದುಷ್ಕರ್ಮಿ ಹಲ್ಲೆ ಮಾಡಿದ್ದಾನೆ. ಮನೆಯೊಂದರ ತಡೆಗೋಡೆ ಹಿಂದೆ ಬಚ್ಚಿಟ್ಟುಕೊಂಡರೂ ಅಲ್ಲಿಗೂ ಬಂದು ದುಷ್ಕರ್ಮಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಯುವತಿ ಚೀರಾಡಿದಾಗ ಮನೆ ಮಾಲಿಕ ಲಾರೆನ್ಸ್‌ ಎಂಬುವವರು ಎದ್ದು ಹೊರಗೆ ಬಂದು ಹಲ್ಲೆ ಮಾಡದಂತೆ ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ಲಾರೆನ್ಸ್‌ ಮೇಲೂ ಆರೋಪಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಈ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ದುಷ್ಕರ್ಮಿಯ ಬಂಧನಕ್ಕೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರೀಲಿ ಅಪಘಾತ ಬಳಿಕ ಈಗ ದರೋಡೆ ಹಾವಳಿ..!