ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗೇಟ್‌ ಮತ್ತು ಗೌರಿಪುರ ಬಳಿ ಈ ದರೋಡೆ ನಡೆದಿದ್ದು, ರಾತ್ರಿ ವೇಳೆ ಪ್ರಯಾಣಿಸುವವರನ್ನು ಗುರಿಯಾಗಿಸಿ ಲೂಟಿ ಮಾಡಲಾಗುತ್ತಿದೆ.

ಶ್ರೀರಂಗಪಟ್ಟಣ(ಮಂಡ್ಯ)(ಆ.14): ಸರಣಿ ಅಪಘಾತಗಳಿಂದಲೇ ಸುದ್ದಿಯಾಗಿದ್ದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಇದೀಗ ಸುಲಿಗೆ, ದರೋಡೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಶನಿವಾರ ರಾತ್ರಿ ಎರಡು ಕಡೆ ದರೋಡೆ ನಡೆಸಿ, ಚಿನ್ನಾಭರಣ ದೋಚಲಾಗಿದೆ.

ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗೇಟ್‌ ಮತ್ತು ಗೌರಿಪುರ ಬಳಿ ಈ ದರೋಡೆ ನಡೆದಿದ್ದು, ರಾತ್ರಿ ವೇಳೆ ಪ್ರಯಾಣಿಸುವವರನ್ನು ಗುರಿಯಾಗಿಸಿ ಲೂಟಿ ಮಾಡಲಾಗುತ್ತಿದೆ.

ತಾಳಿಕೋಟೆ: ಬೈಕ್‌ ಮೇಲೆ ಬಂದು ಹಣ ದೋಚಿ ಪರಾರಿಯಾದ ಖದೀಮರು

ನಗುವನಹಳ್ಳಿ ಗೇಟ್‌ ಬಳಿಯ ಭಾರತ್‌ ಬೆಂಚ್‌ ಕಂಪೆನಿ ಎದುರು ಉಡುಪಿಯ ಶಿವಪ್ರಸಾದ್‌-ಸುಮಾ ದಂಪತಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಬೈಕ್‌ನಲ್ಲಿ ಆಗಮಿಸಿದ ದುಷ್ಕರ್ಮಿಗಳು, ದಂಪತಿಯನ್ನು ಬೆದರಿಸಿ 30 ಗ್ರಾಂ. ಚಿನ್ನಾಭರಣ ದೋಚಿದ್ದಾರೆ. ಇದಾದ ಕೆಲ ಹೊತ್ತಿನಲ್ಲಿ ಗೌರಿಪುರ ಬಳಿ ದುಷ್ಕರ್ಮಿಗಳು ಕೋಲಾರ ಜಿಲ್ಲೆ ಮಾಲೂರಿನ ಡಾ.ರಕ್ಷಿತ್‌ ರೆಡ್ಡಿ ಮತ್ತು ಡಾ.ಮಾನಸ ದಂಪತಿಯನ್ನು ಬೆದರಿಸಿ 40 ಗ್ರಾಂ. ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ.

ಮೈಸೂರಿಗೆ ತೆರಳುತ್ತಿದ್ದ ವೇಳೆ ಡಾ.ರಕ್ಷಿತ್‌ ರೆಡ್ಡಿ ಅವರ ಕಾರು ಪಂಕ್ಚರ್‌ ಆಗಿದ್ದು, ಚಕ್ರ ಬದಲಿಸುತ್ತಿದ್ದಾಗ ಈ ದರೋಡೆ ನಡೆದಿದೆ. ಎಸ್ಪಿ ಯತೀಶ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.