ರಾಮನಗರದಲ್ಲಿ ಮಂಗಗಳ ಮಾರಣಹೋಮ; ವಿಷವುಣಿಸಿ ಸಾಯಿಸಿದ  ದುಷ್ಕರ್ಮಿಗಳು!

ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಕಾಡುಪ್ರಾಣಿಗಳ ಹಾವಳಿ ಹೆಚ್ಚುತಲೆ ಇದೆ, ಒಂದು ಕಡೆ ಆನೆ ಮತ್ತೊಂದು ಕಡೆ ಚಿರತೆ,ಹಾಗೂ ಕರಡಿ ಹೀಗೆ ಹಲವಾರು ಪ್ರಾಣಿಗಳ ಹಾವಳಿಯಿಂದ ಜನರು ಬೇಸತ್ತು ಹೋಗಿದ್ದಾರೆ, ಆದರೆ ಜನರಿಗೆ ತೊಂದರೆ ಕೊಡದೆ ಎಳನೀರು, ಕಡಲೆಕಾಯಿ, ತಿಂದು ಬದುಕುತ್ತಿದ್ದ ಕೋತಿಗಳಿಗೆ ವಿಷ ಹಾಕಿ ಸಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.

The miscreants poisoned the monkeys at ramanagara district rav

ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ

ರಾಮನಗರ (ಅ.30):  ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಕಾಡುಪ್ರಾಣಿಗಳ ಹಾವಳಿ ಹೆಚ್ಚುತಲೆ ಇದೆ, ಒಂದು ಕಡೆ ಆನೆ ಮತ್ತೊಂದು ಕಡೆ ಚಿರತೆ,ಹಾಗೂ ಕರಡಿ ಹೀಗೆ ಹಲವಾರು ಪ್ರಾಣಿಗಳ ಹಾವಳಿಯಿಂದ ಜನರು ಬೇಸತ್ತು ಹೋಗಿದ್ದಾರೆ, ಆದರೆ ಜನರಿಗೆ ತೊಂದರೆ ಕೊಡದೆ ಎಳನೀರು, ಕಡಲೆಕಾಯಿ, ತಿಂದು ಬದುಕುತ್ತಿದ್ದ ಕೋತಿಗಳಿಗೆ ವಿಷ ಹಾಕಿ ಸಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.

ಸಾಯಿಸಿದ ಕೋತಿಗಳನ್ನು ಮೂಟೆಕಟ್ಟಿ ಎಸೆದು ಹೋದ ನರಭಕ್ಷಕರು

ರಾಮನಗರ ಜಿಲ್ಲೆಗೆ ಹೊಸದಾಗಿ ಆರಂಭಗೊಂಡ ಹಾರೋಹಳ್ಳಿ ತಾಲೂಕಿನ ಯಲಚವಾಡಿ ಪಂಚಾಯಿತಿ ವ್ಯಾಪ್ತಿಯ ಭೀಮ ಚಂದ್ರ ದೊಡ್ಡಿ ಗ್ರಾಮದ ರಸ್ತೆ ಬದಿಯ ಪಕ್ಕ ಗೋಣಿಚೀಲ ಎಸೆದು ಹೋಗಿದ್ದ ದುಷ್ಕರ್ಮಿಗಳು. ದಾರಿಹೋಕನೊಬ್ಬ ಗೋಣಿಚೀಲ ಬಿಚ್ಚಿ ನೋಡಿದಾಗ ಸುಮಾರು 3 ಕೋತಿಗಳು ಹಾಗೂ ನಾಲ್ಕು ಕೋತಿ ಮರಿಗಳು ಸತ್ತಿರುವ ಘಟನೆ ಬೆಳಕಿಗೆ ಬಂದಿದೆ. ಇನ್ನು ಈಉ ಕೋತಿಗಳನ್ನು ಬೇರೆಡೆ ಸಾಯಿಸಿ ಇಲ್ಲಿ ತಂದು ಎಸೆದಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Haveri: ಸರ್ಕಾರಿ ಬಸ್‍ ಏರಿದ ಆಂಜನೇಯ: 30 ಕಿಲೋ ಮೀಟರ್ ಪ್ರಯಾಣಿಸಿದ ಕೋತಿ!

ಅಂದಹಾಗೆ ಕಳೆದ ಐದು ವರ್ಷಗಳಿಂದ ಕೋತಿಗಳ ಸಂಖ್ಯೆ ಜಿಲ್ಲೆಯಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ. ಹಾಗಾಗಿ ಕೋತಿಗಳು ಆಹಾರ ಹರಿಸಿ ಗ್ರಾಮಗಳ ಮೇಲೆ ವಲಸೆ ಹೋಗಲು ಆರಂಭಿಸಿವೆ. ಗ್ರಾಮಗಳಲ್ಲಿ ಸಿಗುವ ಎಳನೀರು ಕಡಲೆಕಾಯಿ ಹಾಗೂ ಚೀಪೆ ಇನ್ನು ಮುಂತಾದ ಬೆಳೆಗಳ ಮೇಲೆ ದಾಳಿ ಮಾಡುತ್ತಿದ್ದು, ಇವನ ಹಿಮ್ಮೆಟ್ಟಿಸಲು ಜನರು ಕೂಡ ಹರಸಾಹಸ ಮಾಡುತ್ತಿದ್ದ ಯಾವುದೇ ಪ್ರಯೋಜನ ಆಗಿಲ್ಲ.ಇನ್ನೂ ಅರಣ್ಯ ಇಲಾಖೆಗೆ ದೂರು ನೀಡಿದ್ರು ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಇದರಿಂದ ಬೇಸತ್ತ ಜನರು ವಿಷ ಹಾಕಿ ಕೋತಿಗಳನ್ನು ಸಾಯಿಸಿದ್ದಾರೆ ಎಂದು  ಆರೋಪಿಸಿದ್ದಾರೆ.

ವಕೀಲರ ಕಚೇರಿಲಿ ಕೋತಿಯ ಕಡತ ಪರಿಶೀಲನೆ :ಭಜರಂಗಿಯ ವೀಡಿಯೋ ವೈರಲ್

ಸತ್ತಿರುವ ಕೋತಿಗಳನ್ನು ಮರಣೋತ್ತರ ಪರೀಕ್ಷೆ ನಡೆಸಿದ ಅರಣ್ಯ ಇಲಾಖೆ

ನೆನ್ನೆ ಸಾರ್ವಜನಿಕರು ಮಣ್ಣು ಮಾಡಿದ್ದ ಕೋತಿಗಳನ್ನು ಅರಣ್ಯ ಇಲಾಖೆ ಮತ್ತೆ ಹೊರತೆಗೆದು ಮರಣೋತ್ತರ ಪರೀಕ್ಷೆ ಒಳಪಡಿಸಿತ್ತು. ಮರಣೋತರ ಪರೀಕ್ಷೆ ವರದಿ ಬಂದ ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧನಕ್ಕೆ ಕ್ರಮ ತೆಗೆದುಕೊಳ್ತಾರಾ ಕಾದು ನೋಡಬೇಕು.

Latest Videos
Follow Us:
Download App:
  • android
  • ios