Chikkaballapur: ಅರಣ್ಯರಕ್ಷಕರಿನ್ನು ಗಸ್ತು ಅರಣ್ಯ ಪಾಲಕರು!

  • ಅರಣ್ಯರಕ್ಷಕರಿನ್ನು ಗಸ್ತು ಅರಣ್ಯ ಪಾಲಕರು
  •  ‘ಅರಣ್ಯ ರಕ್ಷಕ’ ಹುದ್ದೆಯನ್ನು ‘ಗಸ್ತು ಅರಣ್ಯ ಪಾಲಕರು’ ಎಂದು ಬದಲಿಸಿದ ಸರ್ಕಾರ
  •  ಅರಣ್ಯ, ಜೀವ ಪರಿಸ್ಥಿತಿ, ಪರಿಸರ ಇಲಾಖೆಯ ಅಧೀನ ಕಾರ್ಯದರ್ಶಿಯಿಂದ ಆದೇಶ
  • ರಾಜ್ಯದಲ್ಲಿ ಗಸ್ತು ಅರಣ್ಯ ಪಾಲಕರ ತೀವ್ರ ಕೊರತೆ
The government has changed the post of Forest Guard to Patrol Forest Guard rav

ಕಾಗತಿ ನಾಗರಾಜಪ್ಪ

 ಚಿಕ್ಕಬಳ್ಳಾಪುರ (ಡಿ.5) : ರಾಜ್ಯದ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಅರಣ್ಯ ರಕ್ಷಕ’ ಹುದ್ದೆಯ ಪದನಾಮವನ್ನು ‘ಗಸ್ತು ಅರಣ್ಯ ಪಾಲಕರು’ ಎಂದು ಬದಲಿಸಿ ಸರ್ಕಾರ ಆದೇಶ ಹೊರಡಿಸಿದೆ.

ಅರಣ್ಯ ರಕ್ಷಕ ಪದನಾಮವನ್ನು ಗಸ್ತು ಅರಣ್ಯ ಅಧಿಕಾರಿ ಎಂದು ಬದಲಾವಣೆ ಮಾಡಲು ಇರುವ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿ, ವರದಿ ನೀಡಲು ರಾಜ್ಯ ಸರ್ಕಾರ ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ದಿ) ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಸಮಿತಿ ಮೂರು ಬಾರಿ ಸಭೆ ನಡೆಸಿ, ರಾಜ್ಯ ಸರ್ಕಾರಕ್ಕೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿತ್ತು. ಸಮಿತಿ ಸಲ್ಲಿಸಿದ ಪ್ರಸ್ತಾವನೆಯನ್ನು ಸರ್ಕಾರ ಅನುಮೋದಿಸಿದೆ. ಅಲ್ಲದೆ, ಈ ಸಂಬಂಧ ಅರಣ್ಯ ಇಲಾಖೆಯ ನೇಮಕಾತಿ ನಿಯಮಗಳಲ್ಲಿ ಸೂಕ್ತ ತಿದ್ದುಪಡಿ ತರಲು ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದೆ.

ಚಿಕ್ಕಮಗಳೂರು: ಅರಣ್ಯ ಇಲಾಖೆ ಕಾರ್ಯಾಚರಣೆ, ಕಾಡಾನೆ ಸೆರೆ

ಈ ಹಿನ್ನೆಲೆಯಲ್ಲಿ ‘ಅರಣ್ಯ ರಕ್ಷಕ’ ಪದನಾಮವನ್ನು ‘ಗಸ್ತು ಅರಣ್ಯ ಪಾಲಕರು’ ಎಂದು ಮರುನಾಮಕರಣಗೊಳಿಸಿ ಸರ್ಕಾರದ ಅರಣ್ಯ, ಜೀವ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಅಧೀನ ಕಾರ್ಯದರ್ಶಿ ಗೀತಾ ಎಂ.ಪಾಟೀಲ್‌ ಆದೇಶ ಹೊರಡಿಸಿದ್ದಾರೆ.

ರಾಜ್ಯ ಸರ್ಕಾರ ಪದನಾಮವನ್ನಷ್ಟೇ ಬದಲಾವಣೆ ಮಾಡಿದೆ. ಆ ಹುದ್ದೆಯ ವೇತನ ಶ್ರೇಣಿಯಲ್ಲಾಗಲಿ, ನೇಮಕಾತಿ ವಿಧಾನದಲ್ಲಿಯಾಗಲಿ, ಕರ್ತವ್ಯ ಹಾಗೂ ಜವಾಬ್ದಾರಿಗಳಲ್ಲಾಗಲಿ ಯಾವುದೇ ಬದಲಾವಣೆ ಮಾಡಿಲ್ಲ.

ಈ ಮಧ್ಯೆ, ರಾಜ್ಯದಲ್ಲಿ ಹಲವು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಸಾಕಷ್ಟುಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಿಲ್ಲ. ಅದರಲ್ಲೂ ಗಸ್ತು ಅರಣ್ಯ ಪಾಲಕರ ತೀವ್ರ ಕೊರತೆಯಿದೆ. ಅರಣ್ಯ ಸಂರಕ್ಷಣೆಯಲ್ಲಿ ಇವರ ಪಾತ್ರ ಮಹತ್ತರವಾದುದು. ಹೀಗಾಗಿ, ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಹಾಗೂ ವೇತನ ಹೆಚ್ಚಳ ಸೇರಿದಂತೆ ಇವರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿಕೊಡಬೇಕು ಎಂಬ ಆಗ್ರಹ ಕೇಳಿ ಬಂದಿದೆ. Dharwad: ಹಣ ಪಡೆದು ಮುಂಬಡ್ತಿ ನೀಡಿದ ಸಿಸಿಎಫ್‌ ವಿರುದ್ಧ ತಿರುಗಿಬಿದ್ದ ಅರಣ್ಯ ರಕ್ಷಕರು

Latest Videos
Follow Us:
Download App:
  • android
  • ios