Asianet Suvarna News Asianet Suvarna News

Dharwad: ಹಣ ಪಡೆದು ಮುಂಬಡ್ತಿ ನೀಡಿದ ಸಿಸಿಎಫ್‌ ವಿರುದ್ಧ ತಿರುಗಿಬಿದ್ದ ಅರಣ್ಯ ರಕ್ಷಕರು

ಧಾರವಾಡ ವಲಯದ ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕರಾಗಿ ಕೆಲಸ ಮಾಡುತ್ತಿರುವ 15 ಜನರಿಗೆ ನೀಡಲಾಗಿದ್ದ ಮುಂಬಡ್ತಿ ಆದೇಶವನ್ನು ವಾಪಸ್ ಪಡೆದಿದ್ದು, ಈ ಇಲಾಖೆಯಲ್ಲಿ ದೊಡ್ಡ ಗೋಲ್‌ಮಾಲ್ ನಡೆದಿದೆ. 

Protest by forest department staff in front of CCF office in Dharwad gvd
Author
Bangalore, First Published Jul 23, 2022, 11:45 AM IST

ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ (ಜು.23): ಧಾರವಾಡ ವಲಯದ ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕರಾಗಿ ಕೆಲಸ ಮಾಡುತ್ತಿರುವ 15 ಜನರಿಗೆ ನೀಡಲಾಗಿದ್ದ ಮುಂಬಡ್ತಿ ಆದೇಶವನ್ನು ವಾಪಸ್ ಪಡೆದಿದ್ದು, ಈ ಇಲಾಖೆಯಲ್ಲಿ ದೊಡ್ಡ ಗೋಲ್‌ಮಾಲ್ ನಡೆದಿದೆ. ಈ ಆದೇಶ ಹಿಂಪಡೆದಿದ್ದರಿಂದ ಅರಣ್ಯ ರಕ್ಷಕರು ಇದೀಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿರುದ್ಧ ಕಂಗಾಲಾಗಿದ್ದಾರೆ..ನಮಗೆ ನ್ಯಾಯ ಬೇಕು ಎಂದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಿಸಿಎಫ್‌ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ. ಧಾರವಾಡದ ಸಿಸಿಎಫ್ ಕಚೇರಿ ಎದುರು 15 ಜನ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಿಸಿಎಫ್‌ ವಿರುದ್ದ ಸದ್ಯ ತಿರುಗಿ ಬಿದ್ದಿದ್ದಾರೆ.

ಇದೇ 2022 ಮೇ ತಿಂಗಳ 23ರಂದು 15 ಜನ ಅರಣ್ಯ ರಕ್ಷಕರಿಗೆ ಮುಂಬಡ್ತಿ ನೀಡಿ ಸಿಸಿಎಫ್ ಅವರು ಆದೇಶ ಹೊರಡಿಸಿದ್ದರು. ಈ ವೇಳೆ ಸಿಸಿಎಫ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮೊಹ್ಮದ್ ಶರೀಫ್ ಬೂದಿಹಾಳ ಎಂಬಾತ 15 ಜನ ಅರಣ್ಯ ರಕ್ಷಕರಿಗೆ ಫೋನ್ ಮಾಡಿ ನೀವು 30 ಸಾವಿರ ಕೊಡಬೇಕು ಇಲ್ಲದೇ ಹೋದರೆ ನಿಮಗೆ ಮುಂಬಡ್ತಿ ನೀಡಲಾಗುವುದಿಲ್ಲ. ಅದನ್ನು ವಾಪಸ್ ಪಡೆಯಲಾಗುವುದು ಎಂದು ಬೆದರಿಕೆ ಹಾಕಿದ್ದಾನೆ. ಎಲ್ಲಿ ತಮಗೆ ಮುಂಬಡ್ತಿ ಸಿಗುವುದಿಲ್ಲ ಎಂದು ತಿಳಿದ ಅರಣ್ಯ ರಕ್ಷಕರು ಆತನಿಗೆ ತಲಾ 30 ಸಾವಿರ ಹಣ ಕೊಟ್ಟಿದ್ದಾರೆ. ಇದಾದ ಬಳಿಕ ಅರಣ್ಯ ರಕ್ಷಕರಿಗೆ ಮುಂಬಡ್ತಿಯನ್ನೇ ನೀಡದೇ ಸಿಸಿಎಫ್ ಅವರು ಬಡ್ತಿ ಆದೇಶವನ್ನು ವಾಪಸ್ ಪಡೆದುಕೊಂಡಿದ್ದಾರೆ. 

ಅನ್ನದಾತರ ಹೊಲಕ್ಕೆ ನೀರು ಹರಿಸಿ ಹುತಾತ್ಮ ರೈತರಿಗೆ ಶ್ರದ್ಧಾಂಜಲಿ: ಮುನೇನಕೊಪ್ಪ

ಇದರಿಂದ ಕಂಗಾಲಾದ ಅರಣ್ಯ ರಕ್ಷಕರು, ಹಣವನ್ನು ಕಳೆದುಕೊಂಡು ಬಡ್ತಿಯೂ ಸಿಗದೇ ಇದ್ದದ್ದರಿಂದ ಇದೀಗ ಕಂಗಾಲಾಗಿದ್ದಾರೆ. ಹೀಗಾಗಿ ತಮಗೆ ಮುಂಬಡ್ತಿ ನೀಡಲೇಬೇಕು ಎಂದು ಅರಣ್ಯ ರಕ್ಷಕರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಮೌನ ಪ್ರತಿಭಟನೆ ನಡೆಸಿ, ಸಿಸಿಎಫ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಅರಣ್ಯ ರಕ್ಷಕರಿಗೆ ಮುಂಬಡ್ತಿ ನೀಡಲಾಗುವುದು ಎಂದು ಮೇ.23 ರಂದು ಆದೇಶ ಹೊರಡಿಸಲಾಗಿತ್ತು.ಸಿಸಿಎಫ್‌ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮೊಹ್ಮದ್ ಶರೀಪ್ ಬೂದಿಹಾಳ ಎಂಬುವರು ಹಣ ವಸೂಲಿ ಮಾಡಿದ ನಂತರ ಜುಲೈ 18 ರಂದು ತಮ್ಮ ಆದೇಶವನ್ನು ಸಿಸಿಎಫ್ ಅವರು ವಾಪಸ್ ಪಡೆದುಕೊಂಡಿದ್ದಾರೆ. 

ನಾವೇ ಸ್ವತಃ ಮೊಹ್ಮದ್ ಬೂದಿಹಾಳ ಅವರಿಗೆ 30 ಸಾವಿರ ಹಣ ಕೊಟ್ಟು ಬಂದಿದ್ದೇವೆ. ಮೊಹ್ಮದ್ ನಮಗೆ ಫೋನ್ ಮಾಡಿ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದ ಎಂದು ಚಮನ್ ಅಲಿ ಆರೋಪಿಸಿದರು.ನಾವು ಕೂಡಾ ಅವನಿಗೆ 15 ಜನರಿಂದ ತಲಾ 30 ಸಾವಿರದಂತೆ ವಸೂಲಿ ಮಾಡಿಕೊಟ್ಟಿದ್ದೆನೆ. ನಮ್ಮ‌ ಹತ್ರ ಎಲ್ಲ ಆಡಿಯೋಗಳಿವೆ ಎಂದು ನೊಂದ ಸಿಬ್ಬಂದಿ ಅಳಲು ತೋಡಿಕ್ಕೊಂಡಿದ್ದಾರೆ. ಇನ್ನು ಸಿಸಿಎಫ್‌ ಅವರನ್ನ ಕೇಳಲು ಹೋದಾಗ ಅವರು ಮಾತನಾಡುವ ವರಸೆನೆ ಬೇರೆಯಾಗಿದೆ. ನಾವು ಸುವರ್ಣ ನ್ಯೂಸ್‌ ವರದಿಗಾರರು ಎಂದು ಕೇಳಿದಾಗ ಯಾರು ನೀವು ಯಾಕೆ ಬಂದ್ರಿ, ಎಂದು ತಪ್ಪಿಸಿಕ್ಕೊಳ್ಳಲು ನಿರಾಕರಣೆ ಮಾಡಿದ್ದಾರೆ. ಪ್ರಕರಣದಿಂದ ತಪ್ಪಿಸಿಕ್ಕೊಳ್ಳಲು ಹುನ್ನಾರ ನಡೆಸಿದ್ದಾರೆ. 

ಸಿದ್ದು, ಡಿಕೆಶಿ ಒಳಹೋರಾಟದಿಂದ ಕಾಂಗ್ರೆಸ್‌ ಅವನತಿ: ಜಗದೀಶ ಶೆಟ್ಟರ್‌

ಅರಣ್ಯ ಇಲಾಖೆ ಕಚೇರಿಯ ಮೊಹ್ಮದ್ ಬೂದಿಹಾಳ ಅರಣ್ಯ ರಕ್ಷಕರಿಂದ ತಲಾ 30 ಸಾವಿರ ಹಣ ಪಡೆದಿದ್ದರೂ ಸಿಸಿಎಫ್ ಅವರು ಈ ಬಗ್ಗೆ ಯಾವುದೇ ಗಂಭೀರ ಕ್ರಮ ಜರುಗಿಸಿಲ್ಲ. ಈ ಎಲ್ಲ ವಿಷಯವನ್ನು ಸಿಬ್ಬಂದಿ ಸಿಸಿಎಫ್ ಅವರ ಗಮನಕ್ಕೂ ತಂದಿದ್ದಾರೆ. ಇದು ಸಿಸಿಎಫ್ ಅವರಿಗೆ ಗೊತ್ತಾಗದಂತೆ ನಡೆದಿದೆಯೋ ಅಥವಾ ಗೊತ್ತಿದ್ದೂ ನಡೆದಿದೆಯೋ ಗೊತ್ತಿಲ್ಲ. ಆದರೆ, ಅವರು ಮಾತ್ರ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು, ಮುಂಬಡ್ತಿ ಆದೇಶವನ್ನು ಪರಿಷ್ಕರಿಸಲು ಕೋರಿದ್ದರ ಮೇರೆಗೆ ಮುಂಬಡ್ತಿ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಇದೀಗ ನೊಂದ ಅರಣ್ಯ ರಕ್ಷಕರು ನ್ಯಾಯ ದೊರಕಿಸಿಕೊಡುವಂತೆ ಮಾಧ್ಯಮಗಳ ಮೊರೆ ಹೊಗಿದ್ದಾರೆ. ಇನ್ನು ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಯನ್ನ ಫಾಲೋ ಮಾಡೆ ಮಾಡುತ್ತೆ‌. ನೀರಿಕ್ಷಿಸಿ ಮುಂದಿನ ವರದಿಯಲ್ಲಿ. 

Follow Us:
Download App:
  • android
  • ios