Asianet Suvarna News Asianet Suvarna News

ಟೆಂಡರ್ ಆರಂಭದಲ್ಲೇ ಡೀಲ್: ಇದು ಮಾಜಿ ಸಚಿವ ಈಶ್ವರಪ್ಪ ಇಲಾಖೆಯಲ್ಲಿ ನಡೆಯುವ ಅಕ್ರಮ!

ಈಶ್ವರಪ್ಪ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಯಿತು. ಈಗ ಅವರು ನಿರ್ವಹಿಸಿದ ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಹೇಗೆಲ್ಲಾ ಟೆಂಡರ್‌ಗಳು ನಡೆಯುತ್ತಿವೆ ಎನ್ನುವುದು ದಾಖಲೆ ಸಹಿತ ಬಯಲಾಗ್ತಿದೆ.

Tender Golmaal in Rural Development and Panchayat Raj Department gvd
Author
Bangalore, First Published Apr 16, 2022, 2:06 PM IST | Last Updated Apr 16, 2022, 2:06 PM IST

ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಏ.16): ಈಶ್ವರಪ್ಪ (KS Eshwarappa) ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ (Resignation) ನೀಡಿದ್ದಾಯಿತು. ಈಗ ಅವರು ನಿರ್ವಹಿಸಿದ ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ (Rural Development and Panchayat Raj) ಹೇಗೆಲ್ಲಾ ಟೆಂಡರ್‌ಗಳು (Tender) ನಡೆಯುತ್ತಿವೆ ಎನ್ನುವುದು ದಾಖಲೆ ಸಹಿತ ಬಯಲಾಗ್ತಿದೆ. ಗುತ್ತಿಗೆದಾರರ ಜೊತೆ ಹೇಗೆ ಅಧಿಕಾರಿಗಳು ಶಾಮೀಲಾಗ್ತಾರೆ ಎನ್ನುವುದು ಬಹಿರಂಗಗೊಂಡಿದೆ. ಕಾಮಗಾರಿಗಳ ಟೆಂಡರ್ ಆರಂಭಕ್ಕೂ ಮುನ್ನವೇ ಡೀಲ್ ಮಾಡಿಕೊಳ್ಳುವುದಕ್ಕೆ ಅಧಿಕಾರಿಗಳು ಅವರದ್ದೇ ದಾರಿ ಮಾಡಿಕೊಂಡಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ (Asianet Suvarna News) ಗ್ರಾಮೀಣಾಭಿವೃದ್ಧಿ ಇಲಾಖೆಯ ಟೆಂಡರ್ ಗೋಲ್ಮಾಲ್ ಬಯಲು ಮಾಡ್ತಿದೆ. 

ಇದು ಬೆಂಗಳೂರು ದಕ್ಷಿಣ ವಲಯದಲ್ಲಿ ನಡೆದಿರುವ ಟೆಂಡರ್ ಅಕ್ರಮ. ಸರ್ಕಾರಿ ಶಾಲೆಗಳ ನಿರ್ಮಾಣ ಕಾಮಗಾರಿಗಳ ಟೆಂಡರ್‌ನಲ್ಲಿ ನಡೆದಿರುವ ಗೋಲ್ಮಾಲ್. ಸರ್ಕಾರದ ಟೆಂಡರ್ ನಿಯಮದಲ್ಲೇ ಇಲ್ಲದ ಹೊಸ ನಿಯಮ ಅಳವಡಿಸಿಕೊಂಡು ತಮಗೆ ಬೇಕಾದವರಿಗೆ ಟೆಂಡರ್ ನೀಡುವ ಡೀಲ್ ಇದು. ಸರ್ಕಾರ ಟೆಂಡರ್ ನಿಯಮಗಳನ್ನೇ ಓವರ್ ಟೇಕ್ ಮಾಡಿರುವ ಅಧಿಕಾರಿಗಳು, ಹೊಸ ಷರತ್ತು ಹಾಕಿಕೊಂಡು ಗುತ್ತಿಗೆ ನೀಡಿದ್ದಾರೆ. 

ಸಂತೋಷ್ ಸಾವಿಗೆ ರೋಚಕ ತಿರುವು, ಲಾಡ್ಜ್‌ನಲ್ಲಿ ಪತ್ತೆಯಾಯ್ತು ನಿಷೇಧಿತ ಕೀಟನಾಶಕ

ಹೇಗೆ ನಡೆಯುತ್ತೆ ಟೆಂಡರ್?: ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಸರ್ಕಾರಿ ಶಾಲಾ ಕಟ್ಟಡಗಳ ನಿರ್ಮಾಣ ಕಾಮಗಾರಿಗಳ ಟೆಂಡರ್ ಇದಾಗಿದ್ದು. ಟೆಂಡರ್ ನಲ್ಲಿ ಭಾಗಿಯಾಗಲು ಸೈಟ್ ಇನ್ಸ್‌ಫೆಕ್ಷನ್ ಸರ್ಟಿಫಿಕೇಟ್ ಪಡೆಯಬೇಕು ಎಂಬ ನಿಯಮವನ್ನ ಅಳವಡಿಸಲಾಗಿತ್ತು. ಟೆಂಡರ್ ಅಕ್ರಮದಲ್ಲಿ ಭಾಗಿಯಾಗಿರುವ ಬೆಂಗಳೂರು ದಕ್ಷಿಣ ವಿಭಾಗದ AEE ವಿಷ್ಣುಕಾಂತ್ ಈ ಹೊಸ ನಿಯಮ ರೂಪಿಸಿ ಅಕ್ರಮಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಈ ಸೈಟ್ ಇನ್ಸ್‌ಫೆಕ್ಷನ್ ಸರ್ಟಿಫಿಕೇಟ್ ಪಡೆದವರು ಮಾತ್ರ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು‌. 

ಆದರೆ ಈ ಸೈಟ್ ಇನ್ಸ್‌ಫೆಕ್ಷನ್ ಸರ್ಟಿಫಿಕೇಟ್ ನೀಡೋದು ಇದೇ ಬೆಂಗಳೂರು ದಕ್ಷಿಣ ತಾಲೂಕು AEE ವಿಷ್ಣುಕಾಂತ್. ಸರ್ಕಾರದ ಟೆಂಡರ್‌ ಕಾಯ್ದೆಯಲ್ಲಿ ಈ ರೀತಿ ಹೊಸ ಷರತ್ತು ಹಾಕಲು ಅವಕಾಶವೇ ಇಲ್ಲ. ಯಾರು ಟೆಂಡರ್‌ನಲ್ಲಿ ಭಾಗಿಯಾಗ್ತಾರೆ ಅನ್ನೋದು ಗೌಪ್ಯವಾಗಿ ಇಡಬೇಕು. ಆದರೆ ಈ ಕಾಮಗಾರಿಗಳ ಟೆಂಡರ್ ನಲ್ಲಿ AEE ಲಕ್ಷ್ಮೀಕಾಂತ್‌ ಅವರಿಂದ ಸೈಟ್ ಇನ್ಸ್‌ಫೆಕ್ಷನ್ ಸರ್ಟಿಫಿಕೇಟ್ ಪಡೆದವರು ಮಾತ್ರ ಭಾಗಿಯಾಗ್ತಾರೆ. ಕೆಲವೇ ಗುತ್ತಿಗೆದಾರರಿಗೆ ಮಾತ್ರ ಈ ಸೈಟ್ ಇನ್ಸ್ಪೆಕ್ಷನ್ಇನ್ಸ್‌ಫೆಕ್ಷನ್ ಸರ್ಟಿಫಿಕೇಟ್ ಸಿಗತ್ತೆ. ಅವರು ಮಾತ್ರ ಈ ಟೆಂಡರ್‌ನಲ್ಲಿ ಭಾಗಿಯಾಗ್ತಾರೆ. 

Santosh Suicide Case: ಕಾಂಗ್ರೆಸ್ಸಿಗರು ತನಿಖಾಧಿಕಾರಿಗಳಾಗುವುದು ಬೇಡ: ಸಿಎಂ ಬೊಮ್ಮಾಯಿ

ತನಗೆ ಯಾರು ಕಮಿಷನ್ ಕೊಡ್ತಾರೋ ಅಂತಹವರಿಗೆ ಮಾತ್ರ ಸೈಟ್ ಇನ್ಸ್‌ಫೆಕ್ಷನ್ ಸರ್ಟಿಫಿಕೇಟ್ ಸಿಗತ್ತೆ ಎಂಬ ಮಾಹಿತಿ ಗುತ್ತಿಗೆದಾರ ಮಂಜುನಾಥ್ ನೀಡಿದ್ದಾರೆ. ಗುತ್ತಿಗೆದಾರರ ಜೊತೆ ಶಾಮೀಲಾಗಿ ಅಧಿಕಾರಿಗಳು ಸೃಷ್ಟಿ ಮಾಡಿಕೊಂಡಿರೋ ಕೋಟೆ ಇದು ಅಂದ ಗುತ್ತಿಗೆದಾರ ಮಂಜುನಾಥ್ ಆರೋಪಿಸಿದ್ದಾರೆ. ಇಷ್ಟೆಲ್ಲಾ ನಡೀತಿದ್ರೂ ಸಚಿವರಾಗಿದ್ದ ಈಶ್ವರಪ್ಪ ಅವರ ಗಮನಕ್ಕೆ ಬರಲೇ ಇಲ್ವಾ‌.? ಅಥವಾ ಈಶ್ವರಪ್ಪ ಆಣತಿಯಂತೆ ಇದೂ ನಡೀತಾ ಅನ್ನೋ ಅನುಮಾನ ಕಾಡುತ್ತಿದೆ.

Latest Videos
Follow Us:
Download App:
  • android
  • ios