ಸಂತೋಷ್ ಸಾವಿಗೆ ರೋಚಕ ತಿರುವು, ಲಾಡ್ಜ್‌ನಲ್ಲಿ ಪತ್ತೆಯಾಯ್ತು ನಿಷೇಧಿತ ಕೀಟನಾಶಕ
* ನಿಷೇಧಿತ ಮೋನೋಕ್ರೋಟೋಫೋಸ್ ಕೀಟನಾಶಕ ಸೇವಿಸಿದ್ದನೇ ಸಂತೋಷ್ ಪಾಟೀಲ್
* ಲಾಡ್ಜಿನಲ್ಲಿ ಜ್ಯೂಸ್ ಜೊತೆ ಕೀಟನಾಶಕ ಬೆರೆಸಿ ಸೇವಿಸಿದ್ದ ಸಂತೋಷ್
* ಚಿಕ್ಕ ಮಂಗಳೂರಿನಿಂದ ವಿಷ ಖರೀದಿಸಿ ತಂದಿದ್ದ ಬಗ್ಗೆ ಮಾಹಿತಿ
* ಗಿಡಗಳಿಗೆ ಹುಳ ಭಾದೆ ಉಂಟಾಗದಂತೆ ಬಳಸಲಾಗುವ ಮೋನೋಕ್ರೋಟೋಫಾಸ್ ವಿಷ
ಉಡುಪಿ(ಏ.16): ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂದ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಹೌದು ಸಂತೋಷ್ ಮೃತದೇಹ ಪತ್ತೆಯಾಗಿದ್ದ ಲಾಡ್ಜ್‌ನಲ್ಲಿ ನಿಷೇಧಿತ ಮೋನೋಕ್ರೋಟೋಫೋಸ್ ಕೀಟನಾಶಕ ಪತ್ತೆಯಾಗಿದ್ದು, ಆತ್ಮಹತ್ಯೆಗೂ ಮುನ್ನ ಸಂತೋಷ್ ಇದನ್ನು ಸೇವಿಸಿದ್ದರೇ ಎಂಬ ಅನುಮಾನ ಮೂಡಿಸಿದೆ.
ಹೌದು ಉಡುಪಿಯ ಲಾಡ್ಜ್‌ಗೆ ಬರುವ ಮುನ್ನ ಸಂತೋಷ್ ಚಿಕ್ಕಮಂಗಳೂರಿನಿಂದ ವಿಷ ಖರೀದಿಸಿ ತಂದಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಲಾಡ್ಜಿನಲ್ಲಿ ಜ್ಯೂಸ್ ಜೊತೆ ಕೀಟನಾಶಕ ಬೆರೆಸಿ ಸೇವಿಸಿದ್ದ ಸಂತೋಷ್ ಸೇವಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇನ್ನು ಗಿಡಗಳಿಗೆ ಹುಳ ಭಾದೆ ಉಂಟಾಗದಂತೆ ಬಳಸಲಾಗುವ ಮೋನೋಕ್ರೋಟೋಫಾಸ್ ವಿಷ ಬಳಸಲಾಗುತ್ತದೆ ಎಂಬುವುದು ಉಲ್ಲೇಖನೀಯ. ಈ ಕೀಟನಾಶಕ ಮನುಷ್ಯನ ಸಾವಿಗೆ ಕಾರಣವಾಗುತ್ತದೆ ಎಂದು ಈ ಕೀಟನಾಶಕ ಸರ್ಕಾರದಿಂದ ನಿಷೇಧಕ್ಕೊಳಪಒಟ್ಟಿದೆ.
ಲಾಡ್ಜಿನಲ್ಲಿ ಕಸದತೊಟ್ಟಿಯಲ್ಲಿ ಈ ವಿಷದ ಬಾಟಲಿ ಪತ್ತೆಯಾಗಿದ್ದು, ಸಂತೋಷ್ ಸಾವಿನ ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿದೆ. ಸದ್ಯ ಬಾಟಲಿಯನ್ನು ಫಾರೆನ್ಸಿಕ್ ತಜ್ಞರು ವಶಪಡಿಸಿಕೊಂಡಿದ್ದಾರೆ.
ಇನ್ನು ಕೆಲವರ್ಷಗಳ ಹಿಂದೆ ಬಿಹಾರದಲ್ಲಿ ಇದೇ ವಿಷ 23 ಮಕ್ಕಳ ಸಾವಿಗೆ ಕಾರಣವಾಗಿತ್ತು ಎಂಬುವುದು ಉಲ್ಲೇಖನೀಯ. ಕೇವಲ ಈ ವಿಷದ ಖಾಲಿ ಬಾಟಲಿಯಲ್ಲಿ ಹಾಕಲಾಗಿದ್ದ ಎಣ್ಣೆಯನ್ನು ಬಳಸಿದ ಕಾರಣದಿಂದ 23ಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿದ್ದರು. ಹೀಗಾಗಿ ಮೋನೋಕ್ರೋಟೋಫಾಸ್ ಅತ್ಯಂತ ಅಪಾಯಕಾರಿಯಾಗಿರುವ ವಿಷವಾಗಿದೆ.
ಸಂತೋಷ್ ಆತ್ಮಹತ್ಯೆ ತನಿಖೆಗೆ 4 ತಂಡ ರಚನೆ
ಸಂತೋಷ್ ಆತ್ಮಹತ್ಯೆ ಪ್ರಕರಣ ಬೇಧಿಸಲು ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದಾರೆ. ಉಡುಪಿಗೆ ಬರುವ ಮೊದಲು ಚಿಕ್ಕಮಗಳೂರು ಮತ್ತು ದಾವಣಗೆರೆಗಳಿಗೆ ತೆರಳಿ ಅಲ್ಲಿ ಹೋಮ್ ಸ್ಟೇಗಳಲ್ಲಿ ಉಳಿದುಕೊಂಡಿರುವುದಾಗಿ ಸಂತೋಷ್ನೊಂದಿಗೆ ಉಡುಪಿಗೆ ಬಂದಿದ್ದ ಸ್ನೇಹಿತರಾದ ಮೇದಪ್ಪ ಮತ್ತು ಪ್ರಶಾಂತ್ ಶೆಟ್ಟಿಬಾಯ್ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮಣಿಪಾಲ ಇ®್ಸ…ಪೆಕ್ಟರ್ ನೇತೃತ್ವದ ತಂಡ ಚಿಕ್ಕಮಗಳೂರಿಗೆ, ಉಡುಪಿ ಇ®್ಸ…ಪೆಕ್ಟರ್ ನೇತೃತ್ವದ ತಂಡ ದಾವಣಗೆರೆಗೆ ತೆರಳಿದೆ. ಮಲ್ಪೆ ಮತ್ತು ಬ್ರಹ್ಮಾವರ ಸರ್ಕಲ್ ಇ®್ಸ…ಪೆಕ್ಟರ್ ತಂಡ ಬೆಳಗಾವಿಗೆ ತೆರಳಿದೆ.
ಡಬಲ್ ರೂಂ ಯಾಕೆ?:
ದಾವಣಗೆರೆ, ಚಿಕ್ಕಮಗಳೂರುಗಳಲ್ಲಿ ಸಂತೋಷ್ ಪಾಟೀಲ್ ಮತ್ತು ಗೆಳೆಯರು ಹೊಟೇಲಿನ ಒಂದೇ ಕೊಠಡಿಯಲ್ಲಿ ಉಳಿದುಕೊಂಡಿದ್ದರು. ಆದರೆ ಉಡುಪಿಯಲ್ಲಿ 2 ಪ್ರತ್ಯೇಕ ಕೊಠಡಿಯಲ್ಲಿ ಉಳಿದುಕೊಂಡಿರುವುದು ಕೂಡ ಪೊಲೀಸರ ಸಂಶಯಕ್ಕೆ ಕಾರಣವಾಗಿದೆ. ಸಂತೋಷ್ ಪಾಟೀಲ್ ತಾನು ಬೇರೆ ರೂಮ್‌ನಲ್ಲಿ ಮಲಗುತ್ತೇನೆ, ತನ್ನ ಕೊಠಡಿಗೆ ಸ್ನೇಹಿತ ರಾಜೇಶ್ ಬರುತ್ತಾನೆ ಎಂದು ಲಾಡ್ಜ್‌ನಲ್ಲಿ ರೂಮ್ ಬುಕ್ ಮಾಡುವಾಗ ಗೆಳೆಯರಲ್ಲಿ ಹೇಳಿದ್ದರು. ಪೊಲೀಸರು ರಾಜೇಶ್ ಹೆಸರನ್ನು ಎಫ್‌ಐಆರ್‌ನಲ್ಲಿಯೂ ದಾಖಲಿಸಿದ್ದಾರೆ. ಈ ರಾಜೇಶ್ ಯಾರು, ಆತ ಸಂತೋಷ್ ಪಾಟೀಲ್‌ನನ್ನು ಭೇಟಿಯಾಗಲು ಕೊಠಡಿಗೆ ಬಂದಿದ್ದನಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆದರೆ ರಾಜೇಶ್ ಎಂಬವರು ಆವತ್ತು ತಮ್ಮ ಲಾಡ್ಜ್‌ಗೆ ಬಂದಿರುವುದು ತಮ್ಮ ಗಮನಕ್ಕೆ ಬಂದಿಲ್ಲ, ಲಾಡ್ಜ್‌ನ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ ಎಂದು ಲಾಡ್ಜ್ ಮ್ಯಾನೇಜರ್ ದಿನೇಶ್ ಹೇಳಿದ್ದಾರೆ.
ರೂಮ್ ನಂಬರ್ 207ರಲ್ಲಿ ಗಣಹೋಮ!
ಸದ್ಯ ಸಂತೋಷ್ ಮತ್ತು ಗೆಳೆಯರು ಉಳಿದುಕೊಂಡಿದ್ದ 207 ಹಾಗೂ 209 ರೂಮ್‌ಗಳನ್ನು ವಾರದ ಮಟ್ಟಿಗೆ ಯಾರಿಗೂ ಕೊಡಬೇಡಿ ಎಂದು ಪೊಲೀಸರು ಹೇಳಿದ್ದಾರೆ. ನಾವು ಇನ್ನೆರಡು ವಾರ ಮೂರನೇ ಮಹಡಿಯ ಯಾವುದೇ ರೂಮುಗಳನ್ನು ಗ್ರಾಹಕರಿಗೆ ನೀಡುತ್ತಿಲ್ಲ. ಸದ್ಯ ಸಂತೋಷ್ ಮೃತಪಟ್ಟಿದ್ದ ರೂಮ್ ನಂ.207ನ್ನು ಸ್ವಚ್ಛ ಮಾಡಲಾಗಿದೆ. ಮುಂದೆ ಈ ರೂಮ್‌ನಲ್ಲಿ ಗಣಹೋಮ ಮಾಡಿ ಒಂದು ವಾರದ ಬಳಿಕ ಗ್ರಾಹಕರಿಗೆ ನೀಡಲಾಗುವುದು. ಈ ಪ್ರಕರಣದಿಂದ ನಮ್ಮ ಲಾv್ಜ… ಹೆಸರು ಹಾಳಾಗಿ ತುಂಬ ಕಷ್ಟಪಡುವಂತಾಯಿತು. ರೂಮ್ ಬುಕ್ಕಿಂಗ್ ರದ್ದಾಗುತ್ತಿವೆ, ನಾಲ್ಕೈದು ದಿನಗಳಿಂದ ಗ್ರಾಹಕರು ನಮ್ಮ ಲಾಡ್ಜ್‌ಗೆ ಬರುತ್ತಿಲ್ಲ ಎಂದು ಲಾಡ್ಜ್ ಮ್ಯಾನೇಜರ್ ಬೇಸರ ವ್ಯಕ್ತಪಡಿಸಿದ್ದಾರೆ.