ಖಾಸಗಿ ಟೆಲಿಕಾಂ ಸಂಸ್ಥೆ ಬೇಕಾಬಿಟ್ಟಿರಸ್ತೆ ಅಗೆದಿರುವುದನ್ನು ಖಂಡಿಸಿ ವ್ಯಕ್ತಿಯೊಬ್ಬರು ದಿನವಿಡೀ ಗುಂಡಿಯಲ್ಲಿ ಕುಳಿತು ಉಪವಾಸ ಕೈಗೊಂಡು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ಹನುಮಂತ ನಗರದಲ್ಲಿ ನಡೆದಿದೆ.
ಬೆಂಗಳೂರು (ಮಾ.1) : ಖಾಸಗಿ ಟೆಲಿಕಾಂ ಸಂಸ್ಥೆ ಬೇಕಾಬಿಟ್ಟಿರಸ್ತೆ ಅಗೆದಿರುವುದನ್ನು ಖಂಡಿಸಿ ವ್ಯಕ್ತಿಯೊಬ್ಬರು ದಿನವಿಡೀ ಗುಂಡಿಯಲ್ಲಿ ಕುಳಿತು ಉಪವಾಸ ಕೈಗೊಂಡು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ಹನುಮಂತ ನಗರದಲ್ಲಿ ನಡೆದಿದೆ.
ಎರಡು ತಿಂಗಳ ಹಿಂದೆ ಬಿಬಿಎಂಪಿ(BBMP)ಯಿಂದ ಹನುಮಂತ ನಗರದ 4ನೇ ಅಡ್ಡ ರಸ್ತೆಯನ್ನು ಡಾಂಬರೀಕರಣ(Asphaltization) ಮಾಡಲಾಗಿತ್ತು. ಅನುಮತಿ ಪಡೆಯದೆ ಖಾಸಗಿ ಕಂಪನಿಯು ಈ ರಸ್ತೆಯಲ್ಲಿ ಸುಮಾರು 700 ಮೀಟರ್ ಉದ್ದ ರಸ್ತೆ ಅಗೆದಿತ್ತು. ಇದರಿಂದ ಪಾದಚಾರಿಗಳು ಸೇರಿದಂತೆ ವಾಹನ ಸವಾರರ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಹೊಸದಾಗಿ ಡಾಂಬರೀಕರಣ ಮಾಡಿದ ರಸ್ತೆಯನ್ನು ಪದೇ ಪದೇ ಅಗೆಯುವುದರಿಂದ ಬೇಸತ್ತು ಸ್ಥಳೀಯ ನಿವಾಸಿ ಜಿ.ಆರ್.ಅನಿಲ್‌ಕುಮಾರ್(GR Anil kumar) ಅವರು ಕಳೆದ ಭಾನುವಾರ ಇಡೀ ದಿನ ಗುಂಡಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ಕರ್ತವ್ಯನಿರತ ಟ್ರಾಫಿಕ್ ಎಎಸ್‌ಐಗೆ ಆಟೋ ಡಿಕ್ಕಿ: ಮೆದುಳು ನಿಷ್ಟ್ರಿಯಗೊಂಡು ಸಾವು
ಬೆಳಗ್ಗೆ 9ರಿಂದ ಗುಂಡಿಯಲ್ಲಿ ಕುಳಿತು ಪ್ರತಿಭಟನೆ ಆರಂಭಿಸಿದ ಅನಿಲ್ ಕುಮಾರ್ ಅವರು, ಅನಧಿಕೃತವಾಗಿ ರಸ್ತೆ ಗುಂಡಿ ಅಗೆದ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಬಿಬಿಎಂಪಿ ಅಧಿಕಾರಿಗಳು ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ರಸ್ತೆ ಅಗೆದ ಕಂಪನಿ ವಿರುದ್ಧ ದೂರು ದಾಖಲಿಸಿದ ನಂತರ ಸಂಜೆ 7ಕ್ಕೆ ಪ್ರತಿಭಟನೆ ಅಂತ್ಯಗೊಳಿಸಿದರು.
ಗುಂಡಿ ಮುಚ್ಚಿ ₹25 ಲಕ್ಷ ದಂಡ :
ಬಿಬಿಎಂಪಿ ಅಧಿಕಾರಿಗಳು ಖಾಸಗಿ ಸಂಸ್ಥೆ ಅಗೆದ ಗುಂಡಿಯನ್ನು ಮುಚ್ಚುವ ಕೆಲಸ ಮಾಡಿದರು. ಅನಧಿಕೃತವಾಗಿ ರಸ್ತೆ ಅಗೆದಿರುವುದರಿಂದ .70 ಸಾವಿರ ಮೌಲ್ಯದ ಸಾರ್ವಜನಿಕ ಸ್ವತ್ತಿಗೆ ಹಾನಿ ಆಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗೆ .25 ಲಕ್ಷ ದಂಡ ವಿಧಿಸಲಾಗಿದೆ ಎಂದು ಬಿಬಿಎಂಪಿಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿದ್ಯಾ ತಿಳಿಸಿದ್ದಾರೆ.
ಪ್ರತ್ಯೇಕ ಪ್ರಕರಣದಲ್ಲಿ ಶಿಕ್ಷೆಯಾದರೂ ಏಕಕಾಲಕ್ಕೆ ಜಾರಿ: ಹೈಕೋರ್ಟ್
