Asianet Suvarna News Asianet Suvarna News

ಕೋವಿಡ್‌ ಸಂಕಷ್ಟ ಪರಿಹಾರಕ್ಕೆ ದೇವರಲ್ಲಿ ಹರಕೆ ಹೊತ್ತ ಅಜ್ಜಿ: 200 ಕಿಮೀ ನಿರಂತರ ಉರುಳು ಸೇವೆ

ಐಶಾರಾಮಿ ವಾಹನಗಳಲ್ಲಿ ಕುಳಿತು 200 ಕಿಮೀ ಸಂಚರಿಸಲು ಬೇಸರಿಸುವ ಇಂದಿನ ಕಾಲದಲ್ಲಿ 65 ವರ್ಷ ವಯಸ್ಸಿನ ವೃದ್ಧೆಯೊಬ್ಬರು 200 ಕಿ.ಮೀ ಉರುಳು ಸೇವೆಗೈಯುವ ಮೂಲಕ ಹರಕೆ ತೀರಿಸಲು ಮುಂದಾಗಿದ್ದು ಇವರ ಭಕ್ತಿಯ ಪರಾಕಾಷ್ಟೆಗೆ ಜನ ನಿಬ್ಬೆರಗಾಗಿದ್ದಾರೆ. 

Telanganas Matha Sasikala Panchala has been doing 200 km of urulu seva for the welfare of the people gvd
Author
First Published Nov 26, 2022, 3:40 AM IST

ಕಮಲಾಪುರ (ನ.26): ಐಶಾರಾಮಿ ವಾಹನಗಳಲ್ಲಿ ಕುಳಿತು 200 ಕಿಮೀ ಸಂಚರಿಸಲು ಬೇಸರಿಸುವ ಇಂದಿನ ಕಾಲದಲ್ಲಿ 65 ವರ್ಷ ವಯಸ್ಸಿನ ವೃದ್ಧೆಯೊಬ್ಬರು 200 ಕಿ.ಮೀ ಉರುಳು ಸೇವೆಗೈಯುವ ಮೂಲಕ ಹರಕೆ ತೀರಿಸಲು ಮುಂದಾಗಿದ್ದು ಇವರ ಭಕ್ತಿಯ ಪರಾಕಾಷ್ಟೆಗೆ ಜನ ನಿಬ್ಬೆರಗಾಗಿದ್ದಾರೆ. ತೆಲಂಗಾಣದ ಜಹಿರಾಬಾದ್‌ ತಾಲೂಕಿನ ಧನಶ್ರೀ ಗ್ರಾಮದ ಮಾತಾ ಶಶಿಕಲಾ ಪಂಚಾಳ ರಸ್ತೆಯುದ್ದಕ್ಕೂ ಉರುಳುತ್ತಾ ಸಾಗುತ್ತಿರುವ ಭಕ್ತೆ. ಅಫಜಲ್ಪುರ ತಾಲೂಕಿನ ಘತ್ತರಗಿ ಭಾಗ್ಯವಂತಿಗೆ ದೇವಸ್ಥಾನದ ವರೆಗೆ ಉರುಳು ಸೇವೆಯ ಹರಕೆ ಹೊತ್ತಿದ್ದಾರೆ. ಸದಾ ಲೋಕಕಲ್ಯಾಣಕ್ಕಾಗಿಯೆ ಹರಕೆ ಹೊರುವ ಇವರು ಈ ಬಾರಿ ಕೋವಿಡ್‌ ತೊಲಗಿಸಲು ಭಾಗ್ಯವಂತಿ ದೇವಿಗೆ ಹರಕೆ ಹೊತ್ತಿದ್ದರು. 

ವಿಶ್ವಕ್ಕೆ ಬಾಧಿಸುತ್ತಿರುವ ಕೊರೊನಾ ದೂರ ಮಾಡಿದರೆ ಧನಶ್ರೀಯಿಂದ ಘತ್ತರಗಿವರಗೆ ಉರುಳು ಸೇವೆ ಸಲ್ಲಿಸುವುದಾಗಿ ಇವರ ಹರಕೆಯಾಗಿತ್ತು. ಹರಕೆ ಹೊತ್ತಿದ್ದರು. ಸದ್ಯ ಕೊರೀನಾ ಬಾಧೆಯಿಂದ ಮುಕ್ತವಾಗಿರುವುದರಿಂದ ಉರುಳು ಸೇವೆ ಆರಂಭಿಸಿದ್ದರು. ತೆಲಂಗಾಣದ ಮಾಡಗಿ, ಕರ್ನಾಟಕದ ಭಂಗೂರ, ಮನ್ನಾಯಖೆಳ್ಳಿ, ಹುಮನಾಬಾದ್‌, ಹಳ್ಳಿಖೇಡ ಮೂಲಕ ಗುರುವಾರ ಮಹಾಗಾಂವ್‌ ಗುರಿ ತಲುಪಿದ್ದಾರೆ. ಬೆ.4ರಿಂದ 11, ಸಂಜೆ 4 ರಿಂದ 6ವರೆಗೆ ಸಮಯದಲ್ಲಿ ಪ್ರತಿ ದಿನ 5 ರಿಂದ 7 ಕಿ.ಮೀ ವರಗೆ ಉರುಳುತ್ತಾ ಸಾಗುವ ಇವರು ಇದುವರೆಗೆ 80 ಕಿ.ಮೀ ಕ್ರಮಿಸಿದ್ದಾರೆ. 

ಇಳಕಲ್‌ ಸೀರೆಯ ಮೇಲೆ ಕಾಂತಾರ: ಆಸ್ಕರ್ ಅವಾರ್ಡ್‌ಗಾಗಿ ಶುಭ ಹಾರೈಸಿದ ಯುವ ನೇಕಾರ ಮೇಘರಾಜ್

ಇನ್ನು 120 ಕಿ.ಮೀ ಕ್ರಮಿಸಿದರೆ ಘತ್ತರಗಿ ತಲುಪಲಿದ್ದಾರೆ. ಅಂದುಕೊಂಡಂತೆ ನಡೆದರೆ ಡಿ.3 ಅಥವಾ 4 ರಂದು ಗತ್ತರಗಿ ತಲುಪುತ್ತೇವೆ ಎನ್ನುತ್ತಾರೆ ಉರುಳು ಸೇವೆ ಉಸ್ತುವಾರಿ ಹೊತ್ತಿರುವ ವಿಶ್ವನಾಥ ಹಸಬಿ. ಇವರ ಭಕ್ತಿಯ ಪರಾಕಾಷ್ಟೆಕಂಡ ಜನ ದಾರಿಯುದ್ದಕ್ಕೂ ಅದ್ಧೂರಿ ಸ್ವಾಗತಿಸುತ್ತಿದ್ದಾರೆ. ಹೂವಿನ ಸುರಿಮಳೆ, ಪಾದಪೂಜೆ, ಆರತಿ ಎತ್ತಿ ಭಕ್ತಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 50 ಜನರ ತಂಡ ಇವರ ಜೊತೆಗಿದೆ. ಭಂಗೂರ ಗ್ರಾಮದ ಮಹಿಳಾ ಭಜನಾ ಮಂಡಳವಿದೆ. ದಾರಿಯುದ್ದಕ್ಕೂ ಭಜನೆಯೊಂದೆಗಿ ಈ ಉರುಳು ಸೇವೆ ನಡೆಯುತ್ತಿದೆ. ಈ ಹಿಂದೆ 2009 ರಿಂದ 2011 ರವರಗೆ ನಿರಂತರ ಮೂರು ವರ್ಷ ತಮ್ಮ ಗ್ರಾಮದಿಂದ 180 ಕಿ.ಮೀ ದೂರದ ತುಳಜಾಪುರಕ್ಕೂ ಉರುಳು ಸೇವೆ ಸಲ್ಲಿಸಿದ್ದರು.

ಸೊಂತ ಗ್ರಾಮದ ಶಶಿಕಲಾ: ತೆಲಂಗಾಣದ ಧನಶ್ರೀ ಗ್ರಾಮದ ಶಶಿಕಲಾ ಅವರು ಕಲಬುರಗಿಯ ಕಮಲಾಪುರ ತಾಲೂಕಿನ ಸೊಂತ ಗ್ರಾಮದ ಮಾಣಿಕರಾವ ಪಂಚಾಳ ಅವರಿಗೆ ವಿವಾಹವಾಗಿದ್ದರು. ಶಿಕ್ಷಕರಾಗಿ ಮಾಣಿಕರಾವ ಹಾಗೂ ಪುತ್ರನ ಅಕಾಲಿಕ ನಿಧನದಿಂದ ಜೀವನದಲ್ಲಿ ವೈರಾಗ್ಯ ತಾಳಿದ ಇವರು ತವರೂರಾದ ಧನಶ್ರೀಗೆ ಮರಳಿದರು. ಅಲ್ಲಿನ ಭವಾನಿ ದೇವಾಲಯದಲ್ಲಿ ದೇವಿ ಆರಾಧನೆಯಲ್ಲಿ ತೊಡಗಿದ್ದರು.

Ballari: ಅಕ್ಷರ ದಾಸೋಹ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಿಶ್ರಿತ ಅಕ್ಕಿ ಪತ್ತೆ?

ಕೊರೋನಾ ಸಂಪೂರ್ಣ ನಿರ್ಮೂಲನೆಯಾದರೆ ಧನಶ್ರೀಯಿಂದಲೇ ಉರುಳು ಸೇವೆ ಸಲ್ಲಿಸುವುದಾಗಿ ಘತ್ತರಗಿ ಭಾಗ್ಯವಂತಿ ದೇವಿಯಲ್ಲಿ ಹರಕ ಹೊತ್ತಿದ್ದೆ. ದೇವಿ ನನ್ನ ಬೇಡಿಕೆ ಈಡೇರಿಸಿದ್ದು ಹರಕೆ ತೀರಿಸುತ್ತಿದ್ದೇನೆ
- ಶಶಿಕಲಾ ಪಂಚಾಳ, ಉರುಳು ಸೇವೆ ಮಾಡುತ್ತಿರು ವೃದ್ಧೆ 

Follow Us:
Download App:
  • android
  • ios