Asianet Suvarna News Asianet Suvarna News

ತೆಲಂಗಾಣದಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆ ಹಿನ್ನೆಲೆ; ಕಾಂಗ್ರೆಸ್ ಫುಲ್ ಅಲರ್ಟ್!

ಇಂದು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಇರುವ ಹಿನ್ನೆಲೆ ತೆಲಂಗಾಣದಲ್ಲಿ ಕಾಂಗ್ರೆಸ್ ಫುಲ್ ಅಲರ್ಟ್ ಆಗಿದೆ. ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗುವ ಶಾಸಕರನ್ನ ಬೇರೆಡೆ ಶಿಫ್ಟ್ ಮಾಡಲು ಬಸ್ ವ್ಯವಸ್ಥೆ ಮಾಡಿದ ಕಾಂಗ್ರೆಸ್ ರಾಜ್ಯದ ನಾಯಕರು.

Telangana assembly election 2023 DK Shivakumar stay in Telangana rav
Author
First Published Dec 3, 2023, 10:02 AM IST

ಬೆಂಗಳೂರು (ಡಿ.3): ಇಂದು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಇರುವ ಹಿನ್ನೆಲೆ ತೆಲಂಗಾಣದಲ್ಲಿ ಕಾಂಗ್ರೆಸ್ ಫುಲ್ ಅಲರ್ಟ್ ಆಗಿದೆ. ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗುವ ಶಾಸಕರನ್ನ ಬೇರೆಡೆ ಶಿಫ್ಟ್ ಮಾಡಲು ಬಸ್ ವ್ಯವಸ್ಥೆ ಮಾಡಿದ ಕಾಂಗ್ರೆಸ್ ರಾಜ್ಯದ ನಾಯಕರು.

ಕೆಸಿಆರ್ ಆಪರೇಷನ್ ಸಾಧ್ಯತೆಯಿರುವ ಹಿನ್ನೆಲೆ ಟ್ರಬಲ್ ಶೂಟರ್ ಕರ್ನಾಟಕದ ಡಿಸಿಎಂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ನೂತನ ಶಾಸಕರನ್ನ ರಡೆ ಕರೆದುಕೊಂಡು ಹೋಗುವ ತಯಾರಿ ನಡೆಸಿದೆ. ಇದಕ್ಕಾಗಿ ಹೈದ್ರಾಬಾದ್ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಮೂರು ಬಸ್‌ಗಳ ವ್ಯವಸ್ಥೆ ಮಾಡಿರುವ ಕಾಂಗ್ರೆಸ್ ನಾಯಕರು. ನಿನ್ನೆ ತೆಲಂಗಾಣದಲ್ಲಿ ತಡರಾತ್ರಿ ಸಭೆ ನಡೆಸಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿರುವ ಡಿಕೆ ಶಿವಕುಮಾರ ಸಚಿವ ಕೆಜೆ ಜಾರ್ಜ್‌, ಜಮೀರ್ ಅಹ್ಮದ್ ಖಾನ್, ಬೋಸರಾಜು, ಕೆಎಚ್ ಮುನಿಯಪ್ಪ, ಎಂ.ಸಿ ಸುಧಾಕರ್, ಪ್ರದೀಪ್ ಈಶ್ವರ್ ಸೇರಿದಂತೆ ರಾಜ್ಯದ ಹಲವರು ನಾಯಕರು ನಿನ್ನೆಯಿಂದಲೇ ಹೋಟೆಲ್‌ನಲ್ಲಿ ಠಿಕಾಣಿ ಹೂಡಿರುವ ನಾಯಕರು.

ಸಂಕಷ್ಟದಲ್ಲಿ ಕೆಸಿಆರ್‌; ನನಸಾಗಲ್ಲ ಹ್ಯಾಟ್ರಿಕ್‌ ಕನಸು! ಮ್ಯಾಜಿಕ್‌ ನಂಬರ್‌ ದಾಟಿದ ಕಾಂಗ್ರೆಸ್‌

ಕಾಂಗ್ರೆಸ್‌ಗೆ ಆಪರೇಷನ್ ಆತಂಕ:

ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿರುವ ಹಿನ್ನೆಲೆ, ಚಂದ್ರಶೇಖರ್ ರಾವ್ ಇಲ್ಲವೇ ಬಿಜೆಪಿ ನಾಯಕರು ಶಾಸಕರನ್ನ ಖರೀದಿ ಮಾಡಬಹುದೆಂಬ ಆತಂಕ ಎದುರಾಗಿದೆ. ಕಾಂಗ್ರೆಸ್‌ಗೆ ಬಹುಮತ ಬಂದರೂ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೂ ಶಾಸಕರನ್ನ ಹೈಜಾಕ್ ಮಾಡುವ ಸಾಧ್ಯತೆ ಹೀಗಾಗಿ ಶಾಸಕರ ಸೆಳೆಯದಂತೆ ಫಲಿತಾಂಶದ ಮೇಲೆ ಕಣ್ಣಿಟ್ಟಿರುವ ರಾಜ್ಯದ ಡಿಸಿಎಂ ಡಿಕೆ ಶಿವಕುಮಾರ್.

ಇಂದು ತೆಲಂಗಾಣಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ ಸಿ ವೇಣುಗೋಪಾಲ ಸೇರಿದಂತೆ ಹಲವು ನಾಯಕರ ಆಗಮನ‌ ನಿರೀಕ್ಷೆ ಈ ಹಿನ್ನೆಲೆ ತಾಜ್ ಕೃಷಿ ಹೋಟೆಲ್ ಗೆ ಭಾರಿ ಪೊಲೀಸ್ ಭದ್ರತೆ ಮಾಡಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಶಾಸಕರನ್ನು ಬಸ್ಸಿನ ಮೂಲಕ ಬೆಂಗಳೂರಿಗೆ ಕರೆದುಕೊಂಡು ಬರುವ ಸಾಧ್ಯತೆಯಿದೆ. 

ಇಂದು 4 ರಾಜ್ಯಗಳ ಫಲಿತಾಂಶ: ತೆಲಂಗಾಣ ವೀಕ್ಷಕರಾಗಿ ಡಿಕೆಶಿ, ಜಾರ್ಜ್‌ ನೇಮಕ

ತೆಲಂಗಾಣದಲ್ಲಿ ಗೆಲ್ತೀವಿ ಅಂತಾ ಎಲ್ಲರೂ ಆಸೆಯಿಂದ ಇದ್ದಾರೆ. ಆದರೆ ನಮಗೆ ಹೆಚ್ಚು ಅವಕಾಶವಿದೆ  ಈ ಬಾರಿ ತೆಲಂಗಾಣದಲ್ಲಿ ಜನರು ನಮಗೆ ಆಶೀರ್ವಾದ ನೀಡ್ತಾರೆಂಬ ಆಸೆಯಿಂದ ಇದ್ದೇವೆ. ಯಾವ ಆಪರೇಷನ್ ಭೀತಿಯು ನಮಗಿಲ್ಲ.

ಡಿಸಿಎಂ ಡಿಕೆ ಶಿವಕುಮಾರ

Follow Us:
Download App:
  • android
  • ios