Asianet Suvarna News Asianet Suvarna News

ಬಿಜೆಪಿ ಸರ್ಕಾರ ರದ್ದುಗೊಳಿಸಿದ್ದ ಮುಸ್ಲಿಮರ 2ಬಿ ಕೋಟಾ ಮತ್ತೆ ಪುನರ್‌ಸ್ಥಾಪನೆಗೆ ಟೆಕ್ಕಿ ಫಾರೂಕ್ ಜುನೈದಿ ಪಾದಯಾತ್ರೆ!

ಮುಸ್ಲಿಂ ಸಮುದಾಯಕ್ಕೆ 2ಬಿ ಮೀಸಲಾತಿಯನ್ನು ಮರುಸ್ಥಾಪಿಸುವಂತೆ ಕೋರಿ ಸಾಫ್ಟ್‌ವೇರ್ ಟೆಕ್ಕಿ 26 ವರ್ಷದ ಫಾರೂಕ್ ಜುನೈದಿ ಕೋಲಾರದಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದಾರೆ.

Techie hiking from kolar to bengaluru 2b quota for muslims rav
Author
First Published Feb 27, 2024, 11:31 PM IST

ಬೆಂಗಳೂರು (ಫೆ.27): ಮುಸ್ಲಿಂ ಸಮುದಾಯಕ್ಕೆ 2ಬಿ ಮೀಸಲಾತಿಯನ್ನು ಮರುಸ್ಥಾಪಿಸುವಂತೆ ಕೋರಿ ಸಾಫ್ಟ್‌ವೇರ್ ಟೆಕ್ಕಿ 26 ವರ್ಷದ ಫಾರೂಕ್ ಜುನೈದಿ ಕೋಲಾರದಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದಾರೆ.

ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರ ಮೀಸಲಾತಿಯನ್ನು ರದ್ದುಗೊಳಿಸಿತ್ತು. ಮೀಸಲಾತಿಯನ್ನು ರದ್ದುಪಡಿಸಿದ ನಂತರ, ಸಮುದಾಯದ ಅನೇಕ ವಿದ್ಯಾರ್ಥಿಗಳು ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಮತ್ತು ಮೆರಿಟ್ ಆಧಾರಿತ ವಿದ್ಯಾರ್ಥಿವೇತನದಿಂದ ವಂಚಿತರಾಗಿದ್ದಾರೆ ಎಂದು ಜುನೈದಿ ಹೇಳಿದರು. ಅಲ್ಲದೆ ಸಾಲ ಪಡೆದು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೂ ಇದು ಪರಿಣಾಮ ಬೀರಿದ್ದು, ದೀರ್ಘಾವಧಿಯಲ್ಲಿ ಸಮುದಾಯ ಸಂಕಷ್ಟಕ್ಕೆ ಸಿಲುಕಲಿದೆ. ಇದು ಪಾದಯಾತ್ರೆ ಕೈಗೊಳ್ಳುವಂತೆ ಪ್ರೇರೇಪಿಸಿತ್ತು ಎಂದು ಜುನೈದಿ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಎಂಜಿನಿಯರ್‌ಗಳ ಸಂಘದ ಅಧ್ಯಕ್ಷರೂ ಆಗಿರುವ ಜುನೈದಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ್ದು, 2ಬಿ ವರ್ಗದಡಿ ಮುಸ್ಲಿಮರಿಗೆ ಅಲ್ಪಸಂಖ್ಯಾತ ಮೀಸಲಾತಿಯನ್ನು ಮರುಸ್ಥಾಪಿಸಲು ನಾನು ಫೆಬ್ರವರಿ 24ರಂದು ಕೋಲಾರದಿಂದ ಬೆಂಗಳೂರಿಗೆ ಮತ್ತು ಜಾಗೃತಿ ಮೂಡಿಸಲು ಪಾದಯಾತ್ರೆಯನ್ನು ಪ್ರಾರಂಭಿಸಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರನ್ನು ಭೇಟಿ ಮಾಡಿ ತಮ್ಮ ಪ್ರಸ್ಥಾಪನೆಯನ್ನು ನೀಡಲು ಯೋಜಿಸಿದ್ದಾರೆ.

ಮುಸ್ಲಿಮರಿಗೆ ಶೇಕಡಾ 4ರಷ್ಟು ಮೀಸಲಾತಿ ನೀಡುತ್ತಿದ್ದ 2B ಕೋಟಾವನ್ನು ಮರುಸ್ಥಾಪಿಸುವುದು ಮಾತ್ರವಲ್ಲದೆ, ಅದನ್ನು ಶೇಕಡಾ 10ಕ್ಕೆ ಹೆಚ್ಚಿಸುವುದು, ಜೊತೆಗೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶೇಕಡಾ 7ರಷ್ಟು ಸೂಪರ್ ನ್ಯೂಮರಿಕ್ ಕೋಟಾ (SNQ) ಗೂ ಸಹ ಆಗ್ರಹಿಸುತ್ತೇನೆ ಎಂದು ಜುನೈದಿ ಹೇಳಿದರು.

Follow Us:
Download App:
  • android
  • ios