ಗುಜರಾತ್‌ನ ಕಂಪನಿಯೊಂದು ಜಿಎಸ್‌ಟಿ ವಂಚನೆ ನಡೆಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ದಾಳಿ ನಡೆಸಿದ್ದು, 29 ಲಕ್ಷ ರು. ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ನವದೆಹಲಿ (ಜೂ.06): ಗುಜರಾತ್‌ನ ಕಂಪನಿಯೊಂದು ಜಿಎಸ್‌ಟಿ ವಂಚನೆ ನಡೆಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ದಾಳಿ ನಡೆಸಿದ್ದು, 29 ಲಕ್ಷ ರು. ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಮೊಹಮ್ಮದ್ ಏಜಾಜ್ ಬೊಮರ್ ಮತ್ತು ಇತರರ ಮೇಲೆ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ.2ರಂದು ಬೆಂಗಳೂರು, ಮುಂಬೈ, ಅಹಮದಾಬಾದ್, ಭಾವನಗರ, ಬೋಟಾಡ್ ಮತ್ತು ಗಾಂಧಿನಗರಗಳಲ್ಲಿ 25ಕ್ಕೂ ಹೆಚ್ಚು ಪ್ರದೇಶಗಳ ಮೇಲೆ ಇ.ಡಿ. ದಾಳಿ ನಡೆಸಿದೆ. ನಕಲಿ ಜಿಎಸ್‌ಟಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಈ ಕಂಪನಿ ಸುಮಾರು 122 ಕೋಟಿ ರು. ವಂಚನೆ ಎಸಗಿದೆ ಎಂದು ಇ.ಡಿ. ಆರೋಪಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಭಾವನಗರ ಪೊಲೀಸ್ ಠಾಣೆಯಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಈ ಕಂಪನಿ ಸುಮಾರು 1,102 ಕೋಟಿ ರು.ಗೂ ಹೆಚ್ಚಿನ ಮೊತ್ತಕ್ಕೆ ನಕಲಿ ಬೆಲೆಪಟ್ಟಿಯನ್ನು ತಯಾರು ಮಾಡಿದ್ದು, 122 ಕೋಟಿ ರು.ಗೂ ಹೆಚ್ಚು ಹಣ ವಂಚಿಸಿದೆ ಮತ್ತು 461 ಬೋಗಸ್ ವ್ಯಾಪಾರ ಸಂಸ್ಥೆಗಳನ್ನು ವಿತರಣೆ ಮಾಡಿದೆ. ಆಧಾರ್‌ಗೆ ಜೋಡಣೆಯಾಗಿರುವ ಮೊಬೈಲ್ ನಂಬರ್‌ಗಳನ್ನು ಬದಲಾವಣೆ ಮಾಡುವ ಮೂಲಕ ಹಲವು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ವ್ಯಾಪಾರ ಸಂಸ್ಥೆಗಳನ್ನು ಸೃಷ್ಟಿಮಾಡಲಾಗಿದೆ ಎಂದು ಇ.ಡಿ. ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.
ಆಯನೂರು ಬಾರಲ್ಲಿ ಕ್ಯಾಶಿಯರ್ ಹತ್ಯೆ: ಓರ್ವನ ಕಾಲಿಗೆ ಗುಂಡೇಟು, ಇಬ್ಬರ ಬಂಧನ
ಪನಾಮಾ ಪೇಪರ್ಸ್, ಬೆಂಗಳೂರು ಉದ್ಯಮಿ ಮೇಲೆ ಇ.ಡಿ. ದಾಳಿ: ಅಕ್ರಮ ಸ್ವಿಸ್ ಬ್ಯಾಂಕ್ ಹಣ ಹಾಗೂ ವಿದೇಶದಲ್ಲಿನ ಅಕ್ರಮ ಸಂಪತ್ತು ಪತ್ತೆ ಮಾಡಿದ್ದ ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಉದ್ಯಮಿ ರಾಜೇಂದ್ರ ಪಾಟೀಲ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಇ.ಡಿ. (ಜಾರಿ ನಿರ್ದೇಶನಾಲಯ) ದಾಳಿ ನಡೆಸಿದೆ. ‘ರಾಜೇಂದ್ರ ಪಾಟೀಲ್ ಮೇಲೆ ನಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ಆರೋಪವಿದ್ದು, ಜೂ.2ರಂದು ಅವರ ಮನೆ, ಅವರು ನಿರ್ದೇಶಕ ಆಗಿರುವ ಶ್ರೀ ಪಾರ್ವತಿ ಟೆಕ್ಸ್ ಕಂಪನಿಯಲ್ಲಿ ತಪಾಸಣೆ ನಡೆಸಿದೆ.
ಗ್ಯಾರಂಟಿ ಜಾರಿಗೆ ಕಾಂಗ್ರೆಸ್‌ನವರು ತೆರಿಗೆ ಹೆಚ್ಚಿಸ್ತಾರೆ: ಶಾಸಕ ಬಿ.ವೈ.ವಿಜಯೇಂದ್ರ
ಇವರು 66 ಕೋಟಿ ರು.ನಷ್ಟು ‘ಅಘೋಷಿತ’ ಹಣವನ್ನು ದುಬೈ, ತಾಂಜೇನಿಯಾ ಹಾಗೂ ಬ್ರಿಟಿಷ್ ವರ್ಜಿನ್ ಐಲ್ಯಾಂಡ್‌ನ ವಿವಿಧ ಕಂಪನಿಗಳಲ್ಲಿ ಹೂಡಿದ್ದರು ಎಂದು ಪನಾಮಾ ಪೇಪರ್ಸ್ ಸೋರಿಕೆ ವೇಳೆ ಬಯಲಿಗೆ ಬಂದಿತ್ತು. ಈ ಸಂಬಂಧ ವಿದೇಶಿ ಹೂಡಿಕೆಯ ದಾಖಲೆ ವಶಪಡಿಸಿಕೊಳ್ಳಲಾಗಿದೆ’ ಎಂದು ಇ.ಡಿ. ಹೇಳಿದೆ. ಇದೇ ವೇಳೆ, ಪನಾಮಾ ಪೇಪರ್ಸ್ ಪ್ರಕರಣದಲ್ಲಿ ಕೋಲ್ಕತಾ ಉದ್ಯಮಿಯೊಬ್ಬರ ಮೇಲೆ ದಾಳಿ ನಡೆಸಿ 2.74 ಕೋಟಿ ರು. ವಶಪಡಿಸಿಕೊಳ್ಳಲಾಗಿದೆ.
