Shivamogga: ಆಯ​ನೂರು ಬಾರಲ್ಲಿ ಕ್ಯಾಶಿ​ಯರ್‌ ಹತ್ಯೆ: ಓರ್ವನ ಕಾಲಿಗೆ ಗುಂಡೇಟು, ಇಬ್ಬರ ಬಂಧನ

ಕ್ಲುಲ್ಲಕ ಕಾರಣಕ್ಕೆ ಬಾರ್‌ನ ಕ್ಯಾಶಿಯರ್‌ನನ್ನೇ ಹತ್ಯೆ ಮಾಡಿರುವ ಘಟನೆ ತಾಲೂಕಿನ ಆಯನೂರು ಗ್ರಾಮದಲ್ಲಿ ನಡೆದಿದೆ. ಕ್ಯಾಶಿಯರ್‌ ಸಚಿನ್‌ (28) ಹಲ್ಲೆಯಿಂದ ಮೃತಪಟ್ಟ ವ್ಯಕ್ತಿ.

Three Arrested For Cashier Murder in Ayanuru Bar at Shivamogga gvd

ಶಿವಮೊಗ್ಗ (ಜೂ.06): ಕ್ಲುಲ್ಲಕ ಕಾರಣಕ್ಕೆ ಬಾರ್‌ನ ಕ್ಯಾಶಿಯರ್‌ನನ್ನೇ ಹತ್ಯೆ ಮಾಡಿರುವ ಘಟನೆ ತಾಲೂಕಿನ ಆಯನೂರು ಗ್ರಾಮದಲ್ಲಿ ನಡೆದಿದೆ. ಕ್ಯಾಶಿಯರ್‌ ಸಚಿನ್‌ (28) ಹಲ್ಲೆಯಿಂದ ಮೃತಪಟ್ಟ ವ್ಯಕ್ತಿ. ಭಾನುವಾರ ರಾತ್ರಿ ಬಾರ್‌ಗೆ ಆಯನೂರು ಪಕ್ಕದ ಗ್ರಾಮದ ಸತೀಶ್‌ ನಾಯ್ಕ, ಅಶೋಕ್‌ ನಾಯ್ಕ, ನಿರಂಜನ ಬಂದಿದ್ದು, ಬಾರ್‌ ಸಮಯ ಮುಗಿದರೂ ಬಾರ್‌ನಲ್ಲಿ ಕುಳಿತಿದ್ದರು. ಆದ್ದ​ರಿಂದ ಅವರನ್ನು ಎದ್ದುಹೋಗಿ ಎಂದಿದ್ದಕ್ಕೆ ಈ ಹಲ್ಲೆ ನಡೆದಿದೆ ಎನ್ನಲಾಗಿದೆ.

ಗಲಾಟೆ ನಡೆದ ಮೇಲೆ ಸಚಿನ್‌ ಕರೆ ಮಾಡಿ ಪೊಲೀಸರಿಗೆ ತಿಳಿಸಿದ್ದರು. ಇದರಿಂದ ಮತ್ತಷ್ಟುಕೋಪಗೊಂಡ ದುಷ್ಕರ್ಮಿಗಳು ಸಚಿನ್‌ ಮೇಲೆ ಮಾರಕಾಸ್ತ್ರಗಳಿಂದ ಹೊಟ್ಟೆಯ ಭಾಗಕ್ಕೆ ಇರಿದಿದ್ದಾರೆ. ತಕ್ಷಣ ಆತನನ್ನು ಆಯನೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಚಿನ್‌ ಮೃತಪಟ್ಟಿದ್ದಾರೆ.

ಜಿಲ್ಲೆಯ ಕೊನೆ ಭಾಗದ ಬೆಳೆಗಳಿಗೆ ನೀರು ಹರಿಸಲು ಕ್ರಮ ವಹಿಸಿ: ಸಚಿವ ಚಲುವರಾಯಸ್ವಾಮಿ

ಪೊಲೀ​ಸರ ಮೇಲೂ ಹಲ್ಲೆ- ಎಸ್‌​ಪಿ: ಆಯನೂರಿನಲ್ಲಿ ನಡೆದ ಸಚಿನ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2 ಎಫ್‌ಐಆರ್‌ ದಾಖಲಿಸಲಾಗಿದೆ. ಕೊಲೆ ಸಂಬಂಧ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ. ಈ ಆರೋಪಿಗಳು ಗಲಾಟೆ ಸಂದರ್ಭದಲ್ಲಿ ಬಿಡಿಸಲು ಬಂದ 112 ಪೊಲೀಸ್‌ ವಾಹನ ಹಾಗೂ ಸಿಬ್ಬಂದಿ ಮೇಲೂ ಹಲ್ಲೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 1 ಎಫ್‌ಐಆರ್‌, ಕರ್ತವ್ಯನಿರತ ಪೊಲೀಸ್‌ ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಎಫ್‌ಐಆರ್‌ ದಾಖಲು ಮಾಡಲಾಗಿದೆ. ಕುಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರ ಹಿನ್ನೆಲೆ ಪರಿಶೀಲನೆ ನಡೆದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌ ತಿಳಿಸಿದ್ದಾರೆ.

ಸಂವಿಧಾನದ ಪ್ರಕಾರ ಕೆಲಸ ಮಾಡದಿದ್ದರೆ ಬಾರುಕೋಲಿನಿಂದ ಬಾರಿಸುತ್ತೇನೆ: ಸಚಿವ ಮಹದೇವಪ್ಪ

ಆರೋಪಿ ಕಾಲಿಗೆ ಗುಂಡೇಟು: ಆಯನೂರಿನಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆಯಲು ತೆರಳಿದ್ದ ಪೊಲೀಸ್‌ ಸಿಬ್ಬಂದಿ ಮೇಲೆ ಆರೋಪಿ ಸತೀಶ್‌ ನಾಯ್‌್ಕ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ತಾಲೂಕಿನ ಮುದ್ದಿನಕೊಪ್ಪ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸತೀಶ್‌ ನಾಯ್‌್ಕನನ್ನು ಹಿಡಿಯಲು ಯತ್ನಿಸಿದ ಪೊಲೀಸ್‌ ಸಿಬ್ಬಂದಿ ಪ್ರವೀಣ್‌ ಮತ್ತು ಶಿವರಾಜ್‌ರ ಮೇಲೆ ಸತೀಶ್‌ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ತುಂಗಾ ನಗರದ ಪೊಲೀಸ್‌ ಠಾಣೆಯ ಪಿಐಎಸ್‌ ರಾಜು ರೆಡ್ಡಿ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಸತೀಶನಿಗೆ ಎಚ್ಚರಿಕೆ ನೀಡಿದ್ದಾರೆ. ಹೀಗಿದ್ದರೂ ಸತೀಶ್‌ ಪಿಐಎಸ್‌ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಆಗ ರಾಜು ರೆಡ್ಡಿ ಅವರು ಸತೀಶ್‌ ಕಾಲಿಗೆ ಗುಂಡು ಹಾರಿಸಿದ್ದಾರೆ. ಸತೀಶ್‌ ಹಾಗೂ ಗಾಯಗೊಂಡ ಪೊಲೀಸ್‌ ಸಿಬ್ಬಂದಿಯನ್ನು ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Latest Videos
Follow Us:
Download App:
  • android
  • ios