ದಲಿತೆ ನೀರು ಕುಡಿದಿದ್ದಕ್ಕೆ ಟ್ಯಾಂಕ್‌ ಸ್ವಚ್ಛ, ಗ್ರಾಮಕ್ಕೆ ತೆರಳಿ ಎಲ್ಲಾ ದಲಿತರಿಗೆ ನೀರು ಕುಡಿಸಿದ ಅಧಿಕಾರಿ

ದಲಿತ ಮಹಿಳೆ ನೀರು ಕುಡಿದರೆಂದು ಟ್ಯಾಂಕ್‌ ಸ್ವಚ್ಛ ಮಾಡಿದ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ  ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಸಭೆ ನಡೆಸಿದರು.   ಗ್ರಾಮದ ಎಲ್ಲಾ ತೊಂಬೆ ನಲ್ಲಿಗಳಿಗೆ ತೆರಳಿ ದಲಿತ ಯುವಕರಿಂದ ನೀರು ಕುಡಿಸಿದ್ದಾರೆ. 

Tank  purified  after Dalit woman drinks water from it in chamarajanagara gow

ಚಾಮರಾಜನಗರ (ನ.21): ದಲಿತ ಮಹಿಳೆ ನೀರು ಕುಡಿದರೆಂದು ಟ್ಯಾಂಕ್‌ ಸ್ವಚ್ಛ ಮಾಡಿದ ಆರೋಪ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಕೇಳಿ ಬಂದಿದೆ. ಈ ಸಂಬಂಧ ವ್ಯಕ್ತಿಯೊಬ್ಬರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಾಗಿದೆ. ಕಳೆದ ಶುಕ್ರವಾರ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ನಡೆದಿದ್ದ ವಿವಾಹ ಕಾರ್ಯಕ್ರಮಕ್ಕೆ ಎಚ್‌.ಡಿ.ಕೋಟೆ ತಾಲೂಕಿನ ಸರಗೂರು ಗ್ರಾಮಸ್ಥರು ಬಂದಿದ್ದರು. ಮಧ್ಯಾಹ್ನದ ಊಟ ಮುಗಿಸಿ ಬಸ್‌ಗೆ ಹೋಗುವ ಸಂದರ್ಭದಲ್ಲಿ ಮಹಿಳೆಯೊಬ್ಬರು ಗ್ರಾಮದ ಹಳೆ ಮಾರಿಗುಡಿ ಬಳಿ ಸವರ್ಣೀಯರ ಬೀದಿಯಲ್ಲಿನ ತೊಂಬೆಯ ನಲ್ಲಿಯಲ್ಲಿ ನೀರು ಕುಡಿದಿದ್ದಾರೆ. ಅದೇ ಬೀದಿಯವರು ಯಾರೋ ಇದನ್ನು ನೋಡಿ ಮಹಿಳೆ ದಲಿತ ಸಮುದಾಯದವಳು ಎಂದು ಗೊತ್ತಾಗುತ್ತಿದ್ದಂತೆ ನೀರನ್ನು ಖಾಲಿ ಮಾಡಿಸಿ ಗಂಜಲ ಹಾಕಿ ತೊಳೆದಿದ್ದಾರೆ ಎನ್ನಲಾಗಿದೆ. ಈ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಭಾನುವಾರ ಉಪವಿಭಾಗಾಧಿಕಾರಿ ಗೀತಾ ಹುಡೇದ, ಚಾಮರಾಜನಗರ ತಹಸಿಲ್ದಾರ್‌ ಬಸವರಾಜು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್‌ ಮತ್ತಿತರ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಸಭೆ ನಡೆಸಿದರು.

ಹೆಗ್ಗೊಠಾರ ಗ್ರಾಮಸ್ಥರಿಂದ ಮಾಹಿತಿ ಪಡೆದ ಅಧಿಕಾರಿಗಳು,  ಗ್ರಾಮದ  ಮುಖಂಡರ ಸಭೆ ನಡೆಸಿ ಗ್ರಾಮದ ಎಲ್ಲಾ ತೊಂಬೆಗಳಲ್ಲೂ ಕೂಡ ದಲಿತ ಯುವಕರಿಗೆ ನೀರು ಕುಡಿಸಿದರು. ಮದುವೆಗೆ ಬಂದಿದ್ದವರಿಗೆ ಏನಾದ್ರೂ ತೊಂದರೆಯಾಗಿತ್ತಾ, ಈ ಬಗ್ಗೆ ನಿಮ್ಮ ನೆಂಟರೇನಾದ್ರೂ ಮಾತನಾಡಿದ್ದೀರಾ ಅನ್ನೋ ವಿವರ ಪಡೆದ ತಹಶೀಲ್ದಾರ್ , ತೊಂಬೆ ಇನ್ನು ಮೇಲೆ ಇದು ಸಾರ್ವಜನಿಕರ ಉಪಯೋಗಕ್ಕಾಗಿ , ಎಲ್ಲಾ ವರ್ಗದವರು ಕೂಡ ಕುಡಿಯಲು ನೀರನ್ನು ಬಳಸಬಹುದೆಂದಿದ್ದಾರೆ. ಮಾತ್ರವಲ್ಲ ಜೊತೆಗೆ, ತೊಂಬೆಗಳ ಮೇಲೆ ’ ಇದು ಸಾರ್ವಜನಿಕ ಆಸ್ತಿಯಾಗಿದ್ದು, ಎಲ್ಲಾ ಸಮುದಾಯದವರು ಇದನ್ನು ಬಳಸಬಹುದು’ ಎಂದು ಬರೆಸಿದ್ದಾರೆ.

ಎಫ್‌ಐಆರ್ ದಾಖಲು: ದಲಿತ ಮಹಿಳೆ ನೀರು ಕುಡಿದರೆಂದು ತೊಂಬೆ ನಲ್ಲಿ ಸ್ವಚ್ಛಪಡಿಸಿದ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಾಗಿದೆ. ಹೆಗ್ಗೋಠಾರ ಗ್ರಾಮದ ಗಿರಿಯಪ್ಪ ಎಂಬವರು ಕೊಟ್ಟದೂರಿನ ಮೇರೆಗೆ ಅದೇ ಗ್ರಾಮದ ಮಹಾದೇವಪ್ಪ ಎಂಬವರ ಮೇಲೆ ಜಾತಿನಿಂದನೆ ಪ್ರಕರಣ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ. ನೊಂದ ಮಹಿಳೆ ಶಿವಮ್ಮ ಎಂಬುವರಿಗೆ ನ್ಯಾಯ ದೊರಕಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ದೂರಲಾಗಿದೆ. ಗ್ರಾಮದ ಯುವಕನಿಂದ ದೂರೊಂದನ್ನು ಪಡೆದಿದ್ದು ನೊಂದ ಮಹಿಳೆಯನ್ನು ಪತ್ತೆಹಚ್ಚಲು ತಾಲೂಕು ಆಡಳಿತ ಮುಂದಾಗಿದೆ. ಬಳಿಕ, ಆಕೆಯಿಂದಲೂ ದೂರನ್ನು ಪಡೆದು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

Mysuru : ದಲಿತ ಮುಖ್ಯಮಂತ್ರಿ ಬಿಎಸ್ಪಿ ಯಿಂದ ಮಾತ್ರ ಸಾಧ್ಯ : ಮುನಿಯಪ್ಪ

ಏನಿದು ಘಟನೆ: ಕಳೆದ ಶುಕ್ರವಾರ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ನಡೆದಿದ್ದ ವಿವಾಹ ಕಾರ್ಯಕ್ರಮಕ್ಕೆ ಎಚ್‌.ಡಿ.ಕೋಟೆ ತಾಲೂಕಿನ ಸರಗೂರು ಗ್ರಾಮಸ್ಥರು ಬಂದಿದ್ದರು. ಮಧ್ಯಾಹ್ನದ ಊಟ ಮುಗಿಸಿ ಬಸ್‌ಗೆ ಹೋಗುವ ಸಂದರ್ಭದಲ್ಲಿ ಮಹಿಳೆಯೊಬ್ಬರು ಗ್ರಾಮದ ಹಳೆ ಮಾರಿಗುಡಿ ಬಳಿ ಸವರ್ಣೀಯರ ಬೀದಿಯಲ್ಲಿನ ತೊಂಬೆಯ ನಲ್ಲಿಯಲ್ಲಿ ನೀರು ಕುಡಿದಿದ್ದಾರೆ. ಅದೇ ಬೀದಿಯವರು ಯಾರೋ ಇದನ್ನು ನೋಡಿ ಮಹಿಳೆ ದಲಿತ ಸಮುದಾಯದವಳು ಎಂದು ಗೊತ್ತಾಗುತ್ತಿದ್ದಂತೆ ನೀರನ್ನು ಖಾಲಿ ಮಾಡಿಸಿ ಗಂಜಲ ಹಾಕಿ ತೊಳೆದಿದ್ದಾರೆ ಎನ್ನಲಾಗಿದೆ.

Chikkamagaluru: ಸ್ಮಶಾನದ ಜಾಗಕ್ಕಾಗಿ ದಲಿತರ ಅನಿರ್ದಿಷ್ಟಾವಧಿ ಪ್ರತಿಭಟನೆ

ದೂರು ದಾಖಲಿಸಲು ಕ್ರಮ: ಹೆಗ್ಗೋಠಾರ ಗ್ರಾಮದ ಎಲ್ಲಾ ಕೋಮಿನ ಮುಖಂಡರ ಸಭೆ ನಡೆಸಿ ಮಾಹಿತಿ ಪಡೆದ ಅಧಿಕಾರಿಗಳು ಮೇಲ್ವರ್ಗದ ವ್ಯಕ್ತಿಯೊಬ್ಬನಿಂದ ಕೃತ್ಯ ಎಂಬುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆ ಸಂಬಂಧಿಸಿದ ವ್ಯಕ್ತಿ ವಿರುದ್ಧ ಪರಿಶಿಷ್ಟಜಾತಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಕ್ರಮಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.

Latest Videos
Follow Us:
Download App:
  • android
  • ios