ಸೋಂಕು ಹೆಚ್ಚಳ: ರಾಜ್ಯದಿಂದ ತಮಿಳುನಾಡು, ಕೇರಳಕ್ಕೆ ರೈಲು ಸಂಚಾರ ಸ್ಥಗಿತ

ಆರು ರೈಲುಗಳ ಸಂಚಾರ ಸ್ಥಗಿತ| ಚೆನ್ನೈ-ಕೆಎಸ್‌ಆರ್‌ ಬೆಂಗಳೂರು-ಚೆನ್ನೈ ಎಸಿ ಡಬಲ್‌ ಡೆಕ್ಕರ್‌ ಎಕ್ಸ್‌ಪ್ರೆಸ್‌ ಸ್ಪೆಷಲ್‌ ರೈಲು, ಚೆನ್ನೈ-ಕೆಎಸ್‌ಆರ್‌ ಬೆಂಗಳೂರು-ಚೆನ್ನೈ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ಸ್ಪೆಷಲ್‌ ರೈಲು ಹಾಗೂ ಎರ್ನಾಕುಲಂ-ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ ಸ್ಪೆಷಲ್‌ ರೈಲುಗಳ ಸಂಚಾರ ಮೇ 8ರಿಂದ ಮೇ 31ರವರೆಗೆ ಸ್ಥಗಿತ| 
 

Tamil Nadu and Kerala Train Service cancelled from Karnataka Due to Coronavirus grg

ಬೆಂಗಳೂರು(ಮೇ.08):  ಕೊರೋನಾ ಸೋಂಕು ಹೆಚ್ಚಳದಿಂದ ಪ್ರಯಾಣಿಕರ ಸಂಖ್ಯೆ ಕುಸಿದಿರುವ ಹಿನ್ನೆಲೆಯಲ್ಲಿ ನೈಋುತ್ಯ ರೈಲ್ವೆ ನಗರದಿಂದ ತಮಿಳುನಾಡು ಹಾಗೂ ಕೇರಳ ರಾಜ್ಯಕ್ಕೆ ಸಂಚರಿಸುವ ಆರು ರೈಲುಗಳ ಸಂಚಾರ ಸ್ಥಗಿತಗೊಳಿಸಿದೆ. 

ಚೆನ್ನೈ-ಕೆಎಸ್‌ಆರ್‌ ಬೆಂಗಳೂರು-ಚೆನ್ನೈ ಎಸಿ ಡಬಲ್‌ ಡೆಕ್ಕರ್‌ ಎಕ್ಸ್‌ಪ್ರೆಸ್‌ ಸ್ಪೆಷಲ್‌ ರೈಲು, ಚೆನ್ನೈ-ಕೆಎಸ್‌ಆರ್‌ ಬೆಂಗಳೂರು-ಚೆನ್ನೈ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ಸ್ಪೆಷಲ್‌ ರೈಲು ಹಾಗೂ ಎರ್ನಾಕುಲಂ-ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ ಸ್ಪೆಷಲ್‌ ರೈಲುಗಳ ಸಂಚಾರವನ್ನು ಮೇ 8ರಿಂದ ಮೇ 31ರವರೆಗೆ ಸ್ಥಗಿತಗೊಳಿಸಲಾಗಿದೆ. 

"

ಮುಂಬೈನಿಂದಲೂ ವಲಸೆ: ಕಾರ್ಮಿಕರಿಗೆ ಮತ್ತೆ ಉದ್ಯೋಗ ನಷ್ಟ!

ಕೆಎಸ್‌ಆರ್‌ ಬೆಂಗಳೂರು-ಎರ್ನಾಕುಲಂ ಎಕ್ಸ್‌ಪ್ರೆಸ್‌ ಸ್ಪೆಷಲ್‌ ರೈಲು ಮೇ 9ರಿಂದ ಜೂನ್‌ 1ರವರೆಗೆ, ಎರ್ನಾಕುಲಂ-ಬಾಣಸವಾಡಿ ಎಕ್ಸ್‌ಪ್ರೆಸ್‌ ಸ್ಪೆಷಲ್‌ ರೈಲು ಮೇ. 9ರಿಂದ ಮೇ 30ರ ವರೆಗೆ ಮತ್ತು ಬಾಣಸವಾಡಿ-ಎರ್ನಾಕುಲಂ ಎಕ್ಸ್‌ಪ್ರೆಸ್‌ ಸ್ಪೆಷಲ್‌ ರೈಲು ಸಂಚಾರವನ್ನು ಮೇ. 10ರಿಂದ ಮೇ. 31ರ ವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Latest Videos
Follow Us:
Download App:
  • android
  • ios