* ಭ್ರಷ್ಟಾಚಾರ ಯಾವಾಗ ಶುರುವಾಗಿದೆ ಎಂದು ಗೃಹ ಸಚಿವ ಆರಗ ಟಾಂಗ್* ಅದಕ್ಕೇ ಜನ ನಮ್ಮನ್ನು ಬದಲಿಸಿದ್ದಾರೆ ಎಂದು ಒಪ್ಪಿದ ವಿಪಕ್ಷ ನಾಯಕ ಸಿದ್ದು* ಪೊಲೀಸ್ ಇಲಾಖೆಯಲ್ಲಿ ಯಾವಾಗಿನಿಂದ ಭ್ರಷ್ಟಾಚಾರ ಶುರುವಾಗಿದೆ ಹೇಳಿ?
ಬೆಂಗಳೂರು(ಮಾ.25): ಹೋಟೆಲ್‌ನಲ್ಲಿ ತಿಂಡಿಗಳ ದರ ನಿಗದಿ ಮಾಡಿರುವಂತೆ ಪೊಲೀಸ್ ಇಲಾಖೆಯಲ್ಲಿ(Police Department) ಅಧಿಕಾರಿಗಳ ವರ್ಗಾವಣೆಗೆ ದರ ನಿಗದಿಪಡಿಸಲಾಗಿದೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇಂಥವರಿಂದ ಕಾನೂನು ಕಾಪಾಡಲು ಸಾಧ್ಯವೇ ಎಂದು ಪ್ರತಿಪಕ್ಷ ಸಿದ್ದರಾಮಯ್ಯ(Siddaramaiah) ಕಿಡಿಕಾರಿದ್ದಾರೆ.
ಗುರುವಾರ ಕಾನೂನು ಸುವ್ಯವಸ್ಥೆ ವಿಷಯದ ಮೇಲಿನ ಚರ್ಚೆಯಲ್ಲಿ ಭ್ರಷ್ಟಾಚಾರ(Corruption) ವಿಷಯಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ನಡುವೆ ಪದೇ ಪದೇ ವಾಗ್ವಾದ ನಡೆಯಿತು.
ಸಿದ್ದರಾಮಯ್ಯ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಸಚಿವ ಆರಗ ಜ್ಞಾನೇಂದ್ರ(Araga Jnanendra), ವರ್ಗಾವಣೆ(Transfer) ಮಾಡಲು ಹಿಂದೆ ಏಜೆಂಟ್‌ಗಳನ್ನು ಇಟ್ಟುಕೊಂಡಿದ್ದರು. ಅವರನ್ನು ನಾನು ಹತ್ತಿರ ಸೇರಿಸಲಿಲ್ಲ. ಪೊಲೀಸ್ ಇಲಾಖೆಯಲ್ಲಿ ಯಾವಾಗಿನಿಂದ ಭ್ರಷ್ಟಾಚಾರ ಶುರುವಾಗಿದೆ ಹೇಳಿ ಎಂದರು. ಆಗ ಸಿದ್ದರಾಮಯ್ಯ, ಅದಕ್ಕಾಗಿಯೇ ಜನರು ಬದಲಿಸಿದ್ದಾರೆ. ನಮಗೆ ಈ ಕಡೆ ಕೊಟ್ಟು, ನಿಮಗೆ ಆ ಕೊಟ್ಟಿದ್ದಾರೆ. ನೀವು ಅಧಿಕಾರಕ್ಕೆ ಬಂದು ಏನು ಬದಲಾವಣೆ ತಂದಿದ್ದೀರಿ? ಕೊಟ್ಟಕುದುರೆ ಏರದವನು ಶೂರನೂ ಅಲ್ಲ, ವೀರನೂ ಅಲ್ಲ. ನಿಮ್ಮಲ್ಲಿ ದೂರದೃಷ್ಟಿ ಹೋಗಿದೆ ಎಂದು ಟೀಕಿಸಿದರು. ಅದಕ್ಕೆ ಗೃಹ ಸಚಿವರು, ಹಳೆ ಕುದುರೆ ಹೊಸ ಸವಾರ. ಕುದುರೆ ಎಳೆದುಕೊಂಡು ಹೋಗುತ್ತದೆ. ಹೆಂಡದಂಗಡಿಗೂ ಹೋಗುತ್ತದೆ, ಮತ್ತೆಲ್ಲಿಗೋ ಹೋಗುತ್ತದೆ. ಆದರೂ ನಾವು ನಿಭಾಯಿಸುತ್ತೇವೆ ಎಂದರು.
ಕಾಶ್ಮೀರ್ ಫೈಲ್ಸ್‌ಗಾಗಿ ಜೇಮ್ಸ್ ತೆರವು: ಗೃಹ ಸಚಿವ ಜ್ಞಾನೇಂದ್ರ ಹೇಳಿದ್ದಿಷ್ಟು
ಮಾತು ಮುಂದುವರಿಸಿದ ಸಿದ್ದರಾಮಯ್ಯ, ಜಾತಿ, ಧರ್ಮ ರಹಿತವಾಗಿ ಇರಬೇಕಾದ ಪೊಲೀಸ್ ಇಲಾಖೆ ಇತ್ತೀಚೆಗೆ ದಿಕ್ಕು ತಪ್ಪುತ್ತಿದೆ ಎಂದು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಇನ್ನು, ಪೊಲೀಸ್ ಅಧಿಕಾರಿಯೊಬ್ಬರು ಬಡ್ಡಿಗೆ ಹಣ ತಂದು ವರ್ಗಾವಣೆ ಮಾಡಿಸಿಕೊಂಡಿದ್ದಾರಂತೆ ಎಂದು ಸದನದ ಗಮನಕ್ಕೆ ತಂದರು. ಅಲ್ಲದೇ, ಗೃಹ ಸಚಿವರಾಗಿ ಪೊಲೀಸರ ಬಗ್ಗೆ ಕೇವಲವಾಗಿ ಮಾತನಾಡಿದ್ದು ಸರಿನಾ? ಪೊಲೀಸರು ಲಂಚ(Bribe) ತಿಂದು ನಾಯಿಗಳ ರೀತಿ ಬಿದ್ದವರೇ ಎಂದು ಹೇಳಿಕೆ ನೀಡಿದ್ದೀರಿ ಎಂದು ಟೀಕಿಸಿದ ಅವರು, ಸರ್ಕಾರದ ವೈಫಲ್ಯಗಳನ್ನು ಒಪ್ಪಿಕೊಳ್ಳಿ ಎಂದರು.
ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಹೇಳಿಕೆ ಯಾರೂ ನೀಡಬಾರದು: ಆರಗ ಜ್ಞಾನೇಂದ್ರ
ಬೆಂಗಳೂರು: ಅಡಿಕೆ (Areca nut) ದೇಹಕ್ಕೆ ಹಾನಿಕಾರಕ ಎಂಬ ವಿಚಾರ ಕೋರ್ಟ್ ನಲ್ಲಿ ಬಗೆ ಹರಿಯುವವರೆಗೂ ಯಾರೂ ಸಹ ಈ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಬಾರದು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಗೃಹ ಸಚಿವ ಹಾಗೂ ಅಡಿಕೆ ಟಾಸ್ಕ್ ಫೋರ್ಸ್ ನ ಅಧ್ಯಕ್ಷರೂ ಆಗಿರುವ ಆರಗ ಹೇಳಿದ್ದರು.
ಪಿಎಸ್‌ಐ ಆಕಾಂಕ್ಷಿಗಳಿಗೆ ಶಾಕಿಂಗ್ ಸುದ್ದಿ ಕೊಟ್ಟ ಸಚಿವ ಆರಗ
ವಿಧಾನಸೌಧದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಲೋಕಸಭಾ ಸದಸ್ಯರೊಬ್ಬರು ಅಡಿಕೆ ಹಾನಿಕಾರಕ ಹಾಗೂ ಅದನ್ನ ಬ್ಯಾನ್ ಮಾಡಬೇಕು ಎಂದು ನೀಡಿದ್ದ ಹೇಳಿಕೆ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಈ ಕಾರಣದಿಂದಾಗಿ, ಅಡಿಕೆ ದೇಹಕ್ಕೆ ಹಾನಿಕಾರಕ ಅಲ್ಲಾ, ಹಾಗೂ ಈ ರೀತಿ ಹೇಳಿಕೆಯಿಂದಾಗಿ ಅಡಿಕೆ ಮಾರುಕಟ್ಟೆ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ರಾಜ್ಯದ ಅಡಿಕೆ ಟಾಸ್ಕ್ ಫೋರ್ಸ್ (Karnataka State Areca Task Force) ನಿಯೋಗದ ವತಿಯಿಂದ ದೆಹಲಿಗೆ ತೆರಳಿ ಮನವಿ ಮಾಡಲಾಗಿದೆ.
ಕೃಷಿ ಸಚಿವ ಥೋಮರ್ ಹಾಗೂ ರಾಜ್ಯ ಸಚಿವರನ್ನ ಭೇಟಿ ಮಾಡಲಾಗಿದ್ದು, ಅಡಿಕೆ ಬಗ್ಗೆ ಕೋರ್ಟ್ ನಲ್ಲಿ ತೀರ್ಮಾನ ಆಗದೆ ಹೇಳಿಕೆಗಳನ್ನ ನೀಡಿದ್ರೆ ಅದು ಅಡಿಕೆ ಬೆಳೆಗಾರರ ಬದುಕಿನ ಮೇಲೆ ಪರಿಣಾಮ ಬೀರಲಿದೆ ಎಂದು ಮನವರಿಕೆ ಮಾಡಿದ್ದೇವೆ ಎಂದರು.
