Asianet Suvarna News Asianet Suvarna News

ಸಿಎಂ ನೇತೃತ್ವದ ಸಭೆ ಅಂತ್ಯ: ಇನ್ನೂ ಗೊಂದಲದಲ್ಲಿ ಗಣೇಶೋತ್ಸವ

* ಕೊರೋನಾ 3ನೇ ಅಲೆ ಭೀತಿ ಮಧ್ಯೆ ಬಂತು ಗಣೇಶ ಚತುರ್ಥಿ ಹಬ್ಬ
* ಈ ಬಗ್ಗೆ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ಚರ್ಚೆ
* ಇನ್ನೂ ಯಾವುದೇ ತೀರ್ಮಾನ ಕೈಗೊಳ್ಳದ ಸರ್ಕಾರ

Take Final decision On Sept 5th about ganesh-Chaturthi-celebration Says Ashok rbj
Author
Bengaluru, First Published Aug 30, 2021, 7:15 PM IST

ಬೆಂಗಳೂರು, (ಆ.30):  ಕೊರೋನಾ 3ನೇ ಅಲೆ ಭೀತಿ ಮಧ್ಯೆ ಗಣೇಶ ಚತುರ್ಥಿ ಬಂದಿದ್ದು, ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆಗೆ ಅವಕಾಶ ನೀಡುವಂತೆ ಹಿಂದೂಪರ ಸಂಘಟನೆಗಳ ಆಗ್ರಹವಾಗಿದೆ.

ಇನ್ನು ಈ ವಿಚಾರವಾಗಿ ಇಂದು (ಆ. 30) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೊರೋನಾ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಗಿದೆ. ಆದ್ರೆ, ಗಣೇಶ ಹಬ್ಬ ಆಚರಣೆ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ.

ರಾಜ್ಯದ ಜನತೆಯಲ್ಲಿ ವಿಶೇಷ ಮನವಿ ಮಾಡಿದ ಮಾಜಿ ಸಿಎಂ ಯಡಿಯೂರಪ್ಪ

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ಸಚಿವ ಆರ್. ಅಶೋಕ್, ಸಭೆಯಲ್ಲಿ ಗಣೇಶೋತ್ಸವ ಆಚರಣೆ ಕುರಿತು ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಗಣೇಶೋತ್ಸವಕ್ಕೆ ಯಾವ ರೀತಿ ಅನುಮತಿ ನೀಡಬೇಕೆಂದು ಸೆಪ್ಟೆಂಬರ್ 5ರಂದು ಮುಖ್ಯಮಂತ್ರಿಗಳು ಸಭೆ ನಡೆಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಗಣೇಶ ಹಬ್ಬದ ಕುರಿತು ದೊಡ್ಡ ಹೆಜ್ಜೆ ಇರಿಸಬೇಕಾಗುತ್ತದೆ. ಹಲವು ಜಿಲ್ಲೆಗಳಲ್ಲಿ ದೊಡ್ಡದಾಗಿ ಹಬ್ಬವನ್ನ ಆಚರಣೆ ಮಾಡಲಾಗುತ್ತೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಮತ್ತು ಎಸ್.ಪಿ ಅವರಿಂದ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಜೊತೆಗೆ ದೊಡ್ಡ ಮಟ್ಟದಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡುವ ಆಯೋಜಕರೊಂದಿಗೆ ಸಿಎಂ ಚರ್ಚೆ ಮಾಡಿ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.

ಪ್ರತಿ ತಾಲೂಕಿನಲ್ಲಿ ಆಚರಣೆ ಬಗ್ಗೆ ಮಾಹಿತಿ ಪಡೆದು ಸಭೆ ನಡೆಸಲಾಗುವುದು. ಸೆಪ್ಟೆಂಬರ್ 5 ರಂದು ಆ ಬಗ್ಗೆ ಸಭೆ ಮಾಡಲಾಗುವುದು. ಸಭೆ ಬಳಿಕ ಗಣೇಶ ಉತ್ಸವ ಆಚರಣೆ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಆರ್ ಅಶೋಕ್ ಮಾಹಿತಿ ನೀಡಿದರು.

Follow Us:
Download App:
  • android
  • ios