ಇಂದಿನಿಂದ 12ರವರೆಗೆ ಬೆಂಗಳೂರು-ಮೈಸೂರು ನಡುವಿನ ಹಲವು ರೈಲುಗಳು ರದ್ದು
ಕೆಂಗೇರಿ-ಹೆಜ್ಜಾಲ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ ನಂ.15ರ ಬಳಿಯ ಕಾಮಗಾರಿ ಹಿನ್ನೆಲೆಯಲ್ಲಿ, ಬೆಂಗಳೂರು-ಮೈಸೂರು ನಡುವೆ ಪ್ರಯಾಣಿಸುವ ಕೆಲವು ರೈಲುಗಳ ಸಂಚಾರವನ್ನು ಮಾರ್ಚ್ 6, 7, 8, 12 ಮತ್ತು 13ರ ತನಕ ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.
ಬೆಂಗಳೂರು (ಮಾ.5) : ಕೆಂಗೇರಿ-ಹೆಜ್ಜಾಲ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ ನಂ.15ರ ಬಳಿಯ ಕಾಮಗಾರಿ ಹಿನ್ನೆಲೆಯಲ್ಲಿ, ಬೆಂಗಳೂರು-ಮೈಸೂರು ನಡುವೆ ಪ್ರಯಾಣಿಸುವ ಕೆಲವು ರೈಲುಗಳ ಸಂಚಾರವನ್ನು ಮಾರ್ಚ್ 6, 7, 8, 12 ಮತ್ತು 13ರ ತನಕ ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.
ರದ್ದಾದ ರೈಲುಗಳು:
ಡಾ। ಎಂಜಿಆರ್ ಚೆನ್ನೈ ಸೆಂಟ್ರಲ್- ಮೈಸೂರು ಪ್ರತಿದಿನದ ಎಕ್ಸ್‌ಪ್ರೆಸ್ (16021) ಮಾ.6, 7ರಂದು ರದ್ದುಗೊಳಿಸಲಾಗಿದೆ. ಮೈಸೂರು-ಕೆಎಸ್‌ಆರ್ ಬೆಂಗಳೂರು ಪ್ರತಿದಿನದ ಎಕ್ಸ್‌ಪ್ರೆಸ್ (20623) ಮಾ.7, 8ರಂದು ರದ್ದು, ಕೆಎಸ್‌ಆರ್ ಬೆಂಗಳೂರು-ಮೈಸೂರು ಪ್ರತಿದಿನದ ಎಕ್ಸ್‌ಪ್ರೆಸ್ (20624) ಮಾ.7, 8ರಂದು, ಮೈಸೂರು- ಡಾ। ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ (16022) ಮಾ.7, 8ರಂದು, ಅರಸೀಕೆರೆ-ಮೈಸೂರು ಪ್ರತಿದಿನದ ಎಕ್ಸ್‌ಪ್ರೆಸ್ ರೈಲು (06267) ಮಾ.7, 12ರಂದು ಹಾಗೂ ಮೈಸೂರು- ಎಸ್‌ಎಂವಿಟಿ ಬೆಂಗಳೂರು ಪ್ರತಿದಿನದ ಎಕ್ಸ್‌ಪ್ರೆಸ್ (06269) ಮಾ.7, 12ರಂದು ರದ್ದಾಗಿದೆ.
ತುಮಕೂರು-ದಾವಣಗೆರೆ, ಗದಗ-ವಾಡಿ ರೈಲ್ವೆ ಯೋಜನೆಗಳಿಗೆ ₹ 93.32 ಕೋಟಿ ಬಿಡುಗಡೆ: ಎಂ.ಬಿ. ಪಾಟೀಲ
ಮೈಸೂರು-ಕೆಎಸ್‌ಆರ್ ಬೆಂಗಳೂರು ಮೆಮು (06560) ಮಾ.7, 12ರಂದು, ಎಸ್‌ಎಂವಿಟಿ ಬೆಂಗಳೂರು- ಮೈಸೂರು ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ (06270) ಮಾ.7, 12ರಂದು, ಮೈಸೂರು-ಅರಸೀಕೆರೆ ಪ್ರತಿ ದಿನದ ವಿಶೇಷ ಎಕ್ಸ್‌ಪ್ರೆಸ್ ರೈಲು (06268) ಮಾ.8, 13ರಂದು, ಕೆಎಸ್‌ಆರ್‌ಬೆಂಗಳೂರು-ಮೈಸೂರು ಮೆಮು ವಿಶೇಷ ರೈಲು (06559) ಮಾ.8, 13ರಂದು ಹಾಗೂ ಕೆಎಸ್‌ಆರ್ ಬೆಂಗಳೂರು - ಚನ್ನಪಟ್ಟಣ ಮೆಮು ಸ್ಪೆಷಲ್ (01763) ಮಾ.8, 13ರಂದು ರದ್ದು ಮಾಡಲಾಗಿದೆ.
ಭಾನುವಾರದಂದೇ ಮೂರು ವಂದೇ ಭಾರತ್ ರೈಲುಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ!
ಭಾಗಶಃ ರದ್ದಾದ ರೈಲುಗಳು
ಮೈಸೂರು-ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ ರೈಲು (06526) ಮಾ.7, 12ರಂದು ಚನ್ನಪಟ್ಟಣ ಮತ್ತು ಕೆಎಸ್‌ಆರ್ ಬೆಂಗಳೂರು ನಡುವೆ ಭಾಗಶಃ ರದ್ದು ಮಾಡಲಾಗಿದೆ.