Asianet Suvarna News Asianet Suvarna News

ಹೊತ್ತಿ ಉರಿಯುತ್ತಿದ್ದ ಗ್ಯಾಸ್ ಸಿಲಿಂಡರ್ ನಂದಿಸಿದ ಗಟ್ಟಿಗನಿಗೆ ಶೌರ್ಯ ಪ್ರಶಸ್ತಿ


ಜೀವದ ಹಂಗು ತೊರೆದು ಇನ್ನೊಬ್ಬರ ಪ್ರಾಣ ಕಾಪಾಡಿದವರಿಗೆ ನಮ್ಮ ನಮನ/ ಕನ್ನಡಪ್ರಭ-ಸುವರ್ಣ ನ್ಯೂಸ್‌ನಿಂದ ಶೌರ್ಯ ಪ್ರಶಸ್ತಿ ಸನ್ಮಾನ/  ಕರ್ನಾಟಕದ ನಿಜವಾದ ಹೀರೋಗಳು ನಿಮ್ಮ ಮುಂದೆ/ ಸಾಹಸ ಮೆರೆದವರಿಗೆಲ್ಲ ಅಭಿನಂದನೆ/   ಅಂಗಡಿಯಲ್ಲಿ ಬೆಂಕಿ ಹತ್ತಿದ್ದ ಗ್ಯಾಸ್ ಸಿಲಿಂಡರ್ ಅನ್ನು ಜೀವದ ಹಂಗು ತೊರೆದು ರಸ್ತೆಗೆ ತಂದು ನಂದಿಸಿದ ಜಲೀಲ್ ಗೆ ನಮನ

Suvarna News Kannada Prabha Bravery Award shaurya prashasti winner series Three Jaleel Kodagu
Author
Bengaluru, First Published Dec 21, 2019, 10:02 PM IST

ಬೆಂಗಳೂರು(ಡಿ. 21)   ಇವರ ಹೆಸರು ಜಲೀಲ್. ಕೊಡಗಿನ ಸಿದ್ದಾಪುರದ ನಿವಾಸಿ ಕೆ.ಸಿ. ಮೊಹಮ್ಮದ್ ಹಾಗೂ ಫಾತಿಮಾ ದಂಪತಿಯ ಪುತ್ರರಾಗಿರುವ ಇವರು ಪಟ್ಟಣದಲ್ಲಿ ಆಟೋ ಚಾಲನೆ ಮಾಡಿಕೊಂಡಿದ್ದಾರೆ.

2019ರ ಏಪ್ರಿಲ್ ತಿಂಗಳಲ್ಲಿ ಸಿದ್ದಾಪುರ ಪಟ್ಟಣದ ಚಿಕನ್ ಅಂಗಡಿಯೊಂದರಲ್ಲಿ ಆಕಸ್ಮಿಕವಾಗಿ ಗ್ಯಾಸ್ ಸಿಲಿಂಡರ್‌ಗೆ ಬೆಂಕಿ ತಗುಲಿ ಹೊತ್ತಿ ಉರಿಯುತ್ತಿತ್ತು. ಅದರ ಪಕ್ಕದಲ್ಲೇ ಮತ್ತೆರಡು ಗ್ಯಾಸ್ ಸಿಲಿಂಡರ್ ಇದ್ದ ಕಾರಣ ಪಟ್ಟಣದಲ್ಲಿ ಕೆಲ ಕಾಲ ಆತಂಕ ಸೃಷ್ಟಿಯಾಗಿದ್ರೂ ಭಯದಿಂದ ಯಾರೂ ಕೂಡ  ಮುಂದೆ ಬರಲಿಲ್ಲ.. ಆಗ ಆಟೋ ಚಾಲಕ ಜಲೀಲ್ ಧೈರ್ಯಗುಂದದೆ ಚಿಕನ್ ಅಂಗಡಿಗೆ ನುಗ್ಗಿ ಹೊತ್ತಿ ಉರಿಯುತ್ತಿದ್ದ ಗ್ಯಾಸ್ ಸಿಲಿಂಡರ್ ಅನ್ನು ರಸ್ತೆಗೆ ಎಳೆದು ತಂದು ನಂದಿಸಿದರು. ಈ ಮೂಲಕ ಮುಂದೆ ನಡೆಯಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿಸಿದರು.

ಪ್ರವಾಹಕ್ಕೆ ಅಂಜದೆ ಎಂಟು ಜನರ ಪ್ರಾಣ ಕಾಪಾಡಿದ ಖಾದರ್

ಸಿಲಿಂಡರ್‌ಗೆ ಬೆಂಕಿ ಹೊತ್ತಿಕೊಂಡರೆ ಆತಂಕದಿಂದ ಬಹುತೇಕರ ಕೈಕಾಲೇ ಆಡುವುದಿಲ್ಲ. ಇನ್ನು ಕೆಲವರು ಅವೈಜ್ಞಾನಿಕವಾಗಿ ಬೆಂಕಿ ನಂದಿಸುವ ವ್ಯರ್ಥ ಪ್ರಯತ್ನ ಮಾಡುತ್ತಾರೆ. ಅಂಥದ್ದರಲ್ಲಿ ಆಟೋ ಚಾಲಕನೊಬ್ಬ ತನ್ನ ಜೀವದ ಹಂಗು ತೊರೆದು, ಸಮಯ ಪ್ರಜ್ಞೆ ತೋರಿಸಿ ಬೆಂಕಿ ನಂದಿಸಿದ್ದಾರೆ. ಈ ಮೂಲಕ ಹತ್ತಾರು ಮಂದಿ ಜೀವ, ಆಸ್ತಿಪಾಸ್ತಿಗೆ ಆಗಬಹುದಾಗಿದ್ದ ಅನಾಹುತ ತಪ್ಪಿಸಿದ ಸಾಹಸಿಗೆ ಶೌರ್ಯ ಪ್ರಶಸ್ತಿ.

ಹೆಸರು:    ಜಲೀಲ್

ಊರು:        ಸಿದ್ದಾಪುರ, ಕೊಡಗು

ಸಂಪರ್ಕ:  9945338513 

ವೃತ್ತಿ: ರಿಕ್ಷಾ ಚಾಲಕ

ಸಾಧನೆ: ಅಂಗಡಿಯಲ್ಲಿ ಬೆಂಕಿ ಹತ್ತಿದ್ದ ಗ್ಯಾಸ್ ಸಿಲಿಂಡರ್ ಅನ್ನು ಜೀವದ ಹಂಗು ತೊರೆದು ರಸ್ತೆಗೆ ತಂದು ನಂದಿಸಿದ್ದು

 

Follow Us:
Download App:
  • android
  • ios