ನವದೆಹಲಿ(ಜ.14): ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ರೋಷನ್‌ ಬೇಗ್‌ ಮತ್ತು ಅವರ ಕುಟುಂಬಸ್ಥರನ್ನು ಮುಂದಿನ ವಿಚಾರಣೆವರೆಗೂ ಬಂಧಿಸದಂತೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

ಸುಪ್ರೀಂಕೋರ್ಟಿನ ನ್ಯಾ.ಸಂಜಯ್‌ ಕಿಶನ್‌ ಕೌಲ್‌ ನೇತೃತ್ವದ ಪೀಠದಿಂದ ಲೋಕಾಯುಕ್ತ ಪೊಲೀಸರಿಗೆ ಈ ಸೂಚನೆ ದೊರೆತಿದ್ದು ಸದ್ಯಕ್ಕೆ ಬಂಧನ ಭೀತಿ ಎದುರಿಸುತ್ತಿದ್ದ ರೋಷನ್‌ ಬೇಗ್‌ಗೆ ರಿಲೀಫ್‌ ದೊರೆತಂತಾಗಿದೆ. 2012ರಲ್ಲಿ ಅಬ್ದುಲ್‌ ಹಕ್‌ ಎಂಬವರು ಬೇಗ್‌ ವಿರುದ್ಧ ಅಕ್ರಮ ಗಳಿಕೆಗೆ ಸಂಬಂಧಿಸಿ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. 

ಐಎಂಎ ಬಹುಕೋಟಿ ಹಗರಣ: ಸಾಕ್ಷ್ಯ ಸಿಕ್ರೆ ರೋಷನ್‌ ಬೇಗ್‌ ಆಸ್ತಿ ಜಪ್ತಿ

ಲೋಕಾಯುಕ್ತ ಪೊಲೀಸರು ಪ್ರಕರಣ ಸಂಬಂಧಿಸಿ ಬಿ ರಿಪೋರ್ಟ್‌ ಹಾಕಿದ್ದರು. ಈ ವೇಳೆ ಪ್ರಕರಣ ರದ್ದತಿ ಕೋರಿ ಬೇಗ್‌ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಹೈಕೋರ್ಟ್‌ ನಿರಾಕರಿಸಿದ್ದಕ್ಕೆ ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದರು.