Asianet Suvarna News Asianet Suvarna News

ಮುರುಘಾಶ್ರೀಗಳಿಗೆ ಸುಪ್ರೀಂ ಮತ್ತೆ ಶಾಕ್, ಮಠಕ್ಕೆ ಸಮಿತಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ನೊಟೀಸ್‌

ಫೋಕ್ಸೋ ಪ್ರಕರಣ ಆರೋಪಿಯಾಗಿರುವ ಚಿತ್ರದುರ್ಗದ  ಶಿವಮೂರ್ತಿ ಮುರುಘಾ ಶರಣರ  ಮಠ ಮತ್ತು SJM ವಿದ್ಯಾಪೀಠ ಆಡಳಿತಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್‌ ಹಾಕಿದೆ.

supreme court notice to karnataka government form a committee for chitradurga Murugha mutt  gow
Author
First Published Feb 27, 2024, 3:41 PM IST

ನವದೆಹಲಿ (ಫೆ.27): ಫೋಕ್ಸೋ ಪ್ರಕರಣ ಆರೋಪಿಯಾಗಿರುವ ಚಿತ್ರದುರ್ಗದ  ಶಿವಮೂರ್ತಿ ಮುರುಘಾ ಶರಣರ ಮುರುಘಾ ಮಠ ಮತ್ತು SJM ವಿದ್ಯಾಪೀಠ ಆಡಳಿತಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್‌ ಹಾಕಿದೆ.

ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಸುಪ್ರೀಂಕೋರ್ಟ್ ನೊಟೀಸ್ ನೀಡಿದ್ದು,  ಮೂರು ದಿನಗಳ ಒಳಗಾಗಿ ಹೈಕೋರ್ಟ್ ಆದೇಶದಂತೆ ಸಮಿತಿ ರಚಿಸುವಂತೆ  ಮಠದ ಆಡಳಿತಕ್ಕೆ  ಸೂಚನೆ ನೀಡಿದೆ. ಈ ಬಗ್ಗೆ ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆಯೂ ಸೂಚಿಸಿದೆ. ಜೊತೆಗೆ ಮಠದ ಆಡಳಿತವನ್ನು ಸರಕಾರವೇ ನೋಡಿಕೊಳ್ಳುವಂತೆ ಕೋರ್ಟ್ ಸೂಚಿಸಿದೆ. ಮಾತ್ರವಲ್ಲದೆ ಮೇಲ್ವಿಚಾರಣಾ ಸಮಿತಿಯಲ್ಲಿ ಆರೋಪಿಗಳು ಇರದಂತೆ ನೋಡಿಕೊಳ್ಳಬೇಕು ಎಂದು ಕಟ್ಟು ನಿಟ್ಟಿನ ಸೂಚನೆ ಹೊರಡಿಸಿದೆ. ನ್ಯಾ.ವಿಕ್ರಮನಾಥ್ ನೇತೃತ್ವದ ಪೀಠ ಈ ಸಂಬಂಧ ಆದೇಶ ಹೊರಡಿಸಿದೆ.

ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣ ಇದ್ದು ಸದ್ಯ ಶಿವಮೂರ್ತಿ ಮುರುಘಾ ಶರಣರು ಷರತ್ತುಬದ್ಧ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಮುರುಘಾಮಠ, SJM ವಿದ್ಯಾಪೀಠದ ಅಧ್ಯಕ್ಷರಾಗಿ ಆಡಳಿತ ನಡೆಸುತ್ತಿದ್ದಾರೆ. ಜೈಲಿಂದ ಬಿಡುಗಡೆಯಾದ ಬಳಿಕ ಮುರುಘಾಶ್ರೀ ಆಡಳಿತ ನಡೆಸುತ್ತಿವುದನ್ನು ಪ್ರಶ್ನಿಸಿ   ಮಾಜಿ ಸಚಿವ ಎಚ್.ಏಕಾಂತಯ್ಯ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

ಇಂದು ಮಧ್ಯಂತರ ಆದೇಶ ನೀಡಿರುವ ಸುಪ್ರೀಂಕೋರ್ಟ್. ಮುರುಘಾಶ್ರೀ ಆಡಳಿತಕ್ಕೆ ನಿರ್ಬಂಧ ವಿಧಿಸಿ, ಮೂರು ದಿನದಲ್ಲಿ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಮುರುಘಾಮಠ ಮತ್ತು  ಎಸ್ ಜೆ ಎಂ ವಿದ್ಯಾಪೀಠ ಆಡಳಿತಕ್ಕೆ ಸಮಿತಿ ರಚನೆಗೆ ಸೂಚನೆ ನೀಡಿದೆ.

Follow Us:
Download App:
  • android
  • ios