Asianet Suvarna News Asianet Suvarna News

Omicron: ಆಸ್ಪತ್ರೆಗಳಲ್ಲಿ ಔಷಧಿ, ತಪಾಸಣಾ ಕಿಟ್ ಒದಗಿಸಲು ಮೇಲ್ವಿಚಾರಣಾ‌‌ ಸಮಿತಿ ರಚನೆ

* ರಾಜ್ಯದಲ್ಲಿ ಕೊರೋನಾ ರೂಪಾಂತರಿ ಒಮಿಕ್ರಾನ್ ಆತಂಕ
* ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೈಅಲರ್ಟ್
* ಅವಶ್ಯಕ‌ ಔಷಧಿ, ತಪಾಸಣಾ ಕಿಟ್  ಒದಗಿಸಲು ರಾಜ್ಯಮಟ್ಟದ ಮೇಲ್ವಿಚಾರಣಾ‌‌ ಸಮಿತಿ ರಚನೆ

supervisory committee was formed to provide the necessary equipment to hospitals rbj
Author
Bengaluru, First Published Dec 4, 2021, 11:16 PM IST
  • Facebook
  • Twitter
  • Whatsapp

ಬೆಂಗಳೂರು, (ಡಿ.04): ರಾಜ್ಯದಲ್ಲಿ ಕೊರೋನಾ ವೈರಸ್ ರೂಪಾಂತರಿ ಒಮಿಕ್ರಾನ್ (Omicron) ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೈಅಲರ್ಟ್ ಆಗಿದೆ.

ರಾಜ್ಯದ ‌ಎಲ್ಲ‌ ಆಸ್ಪತ್ರೆಗಳಲ್ಲಿ (Hospital) ಅವಶ್ಯಕ‌ವಿರುವ ಔಷಧಿ ಮತ್ತು‌ ಪ್ರಯೋಗಾಲಯಗಳಲ್ಲಿ ಅವಶ್ಯಕವಾಗಿರುವ ಉಪಕರಣ, ರಾಸಾಯನಿಕ ಹಾಗೂ ತಪಾಸಣಾ ಕಿಟ್ ಗಳನ್ನು ಒದಗಿಸಲು ನೇರವಾಗುವ ನಿಟ್ಟಿನಲ್ಲಿ ರಾಜ್ಯಮಟ್ಟದ ಮೇಲ್ವಿಚಾರಣಾ‌‌ ಸಮಿತಿಯನ್ನು ರಚಿಸಲಾಗಿದೆ.

Omicron ಭೀತಿ: ರಾಜ್ಯದಲ್ಲಿ ಸೋಂಕು ಮತ್ತಷ್ಟು ಏರಿಕೆ: ಎಚ್ಚರ ತಪ್ಪಿದ್ರೆ ಅಪಾಯ ಫಿಕ್ಸ್‌..!

 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ನಿರ್ದೇಶಕರು ಈ ಸಮಿತಿಯ ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ಐವರು ಸದಸ್ಯರು ಹಾಗೂ ಒಬ್ಬರು ಸದಸ್ಯ ಕಾರ್ಯದರ್ಶಿ ಇರುತ್ತಾರೆ. 

ರಾಜ್ಯದಲ್ಲಿನ ಆರೋಗ್ಯ ಕೇಂದ್ರಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಇ- ಔಷಧ ಸಾಫ್ಟ್ ವೇರ್ ಮೂಲಕ ಔಷಧ ಖರೀದಿ ಮಾಡಲು ಹಾಗೂ ಈ ಔಷಧಿಗಳ ಅವಶ್ಯಕ ಬಳಕೆ ಮತ್ತು ಪ್ರಯೋಗ ಶಾಲೆಗಳಲ್ಲಿ ಅವಶ್ಯವಿರುವ ಉಪಕರಣ, ರಾಸಾಯನಿಕಗಳು ಮತ್ತು ತಪಾಸಣಾ ಕಿಟ್ ಗಳ ವಿವರವನ್ನು  ಪರಿಶೀಲಿಸಲು ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ.

ಈ ಮೇಲ್ವಿಚಾರಣಾ ಸಮಿತಿ ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಬೇಕು ಹಾಗೂ ಎಲ್ಲಾ ಸದಸ್ಯರು ಸಭೆಗೆ ಹಾಜರಾಗಿ ಇ-ಔಷಧ ಸಾಫ್ಟ್ ವೇರ್ ನಲ್ಲಿ ದಾಖಲಾಗುವ ದತ್ತಾಂಶವನ್ನು ಪರಿಶೀಲಿಸುವುದು, ಜಿಲ್ಲಾವಾರು ಔಷಧ, ಪ್ರಯೋಗಶಾಲಾ ಉಪಕರಣ, ರಾಸಾಯನಿಕಗಳು ಮತ್ತು ತಪಾಸಣಾ ಕಿಟ್ ಗಳ ಬೇಡಿಕೆ ಪರಿಶೀಲಿಸಿ, ನ್ಯೂನ್ಯತೆಯನ್ನು ಗುರುತಿಸಿ ಸರಿಪಡಿಸುವುದು ಮತ್ತಿತರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. 

ರಾಜ್ಯದಲ್ಲಿ ಕೊರೋನಾ ಅಂಕಿ-ಸಂಖ್ಯೆ
ರಾಜ್ಯದಲ್ಲಿ ಕೊರೋನಾ (Coroanvirus) ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 397 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 29,97,643ಕ್ಕೆ ಏರಿಕೆಯಾಗಿದೆ.

ಇನ್ನೂ ರಾಜ್ಯದಲ್ಲಿ ಮಹಾಮಾರಿ ಕೊರೋನಾದಿಂದ ಇಂದು (ಡಿ.04) ನಾಲ್ವರು ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 38224ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನಲ್ಲಿ(Bengaluru) ಇಂದು 207 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 12,57,242ಕ್ಕೆ ಏರಿಕೆಯಾಗಿದೆ. ಇಂದು ನಗರದಲ್ಲಿ ಕೊರೋನಾದಿಂದ ಒಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.

ರಾಜ್ಯದಲ್ಲಿ ಇಂದು 277 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 29,52,378ಕ್ಕೆ ಏರಿಕೆಯಾಗಿದೆ. ಇನ್ನು 7012 ಸಕ್ರಿಯ ಪ್ರಕರಣಗಳಿವೆ.

Follow Us:
Download App:
  • android
  • ios