ನಾಳೆ ಸಂಡೇ ಲಾಕ್‌ಡೌನ್! ಹೊರಬಂದ್ರೆ ಅರೆಸ್ಟ್
ಕೋವಿಡ್-19 ಹಿನ್ನೆಲೆಯಲ್ಲಿ ಪ್ರತಿ ಭಾನುವಾರ ಕಫä್ರ್ಯ ಮಾದರಿಯ ಪೂರ್ಣ ಪ್ರಮಾಣದ ಲಾಕ್‌ಡೌನ್ ಜಾರಿಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ 24ರಂದು ಪೊಲೀಸರು ರಾಜ್ಯಾದ್ಯಂತ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಿದ್ದಾರೆ. ಸಂಡೇ ಏನಿರುತ್ತೆ..? ಏನಿರಲ್ಲ..? ಇಲ್ಲಿ ಓದಿ
ಬೆಂಗಳೂರು(ಮೇ 23): ಕೋವಿಡ್-19 ಹಿನ್ನೆಲೆಯಲ್ಲಿ ಪ್ರತಿ ಭಾನುವಾರ ಕಫä್ರ್ಯ ಮಾದರಿಯ ಪೂರ್ಣ ಪ್ರಮಾಣದ ಲಾಕ್‌ಡೌನ್ ಜಾರಿಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ 24ರಂದು ಪೊಲೀಸರು ರಾಜ್ಯಾದ್ಯಂತ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಿದ್ದಾರೆ.
"
ಲಾಕ್‌ಡೌನ್ ನಾಲ್ಕನೇ ಹಂತದಲ್ಲಿ ಬಹುತೇಕ ಎಲ್ಲವನ್ನೂ ಸಡಿಲಿಕೆ ಮಾಡಿದ ಬಳಿಕ ಪ್ರತಿದಿನ ಸಂಜೆ 7 ಗಂಟೆವರೆಗೆ ಜನಜೀವನ ಬಹುತೇಕ ಮೊದಲಿನ ಸ್ಥಿತಿಗೆ ತಲುಪಿದೆ. ಆದರೆ, ಇದೀಗ ಭಾನುವಾರ ಪೂರ್ಣ ಪ್ರಮಾಣದ ಲಾಕ್‌ಡೌನ್ ಅನುಷ್ಠಾನಗೊಳ್ಳಲಿದೆ.
ಹೊರಗಿಂದ ಬರುವವರಿಗೆ ಕ್ವಾರಂಟೈನ್ ಸಡಿಲ, ಹೊಸ ನಿಯಮ ಹೀಗಿದೆ
ಅಗತ್ಯ ಸೇವೆಗಳನ್ನು ಹೊರತುಪಡಿಸಿ ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆವರೆಗೆ ಕಪ್ರ್ಯೂ ಮಾದರಿ ವ್ಯವಸ್ಥೆ ಜಾರಿಗೊಳಿಸಲಿದ್ದಾರೆ. ಜನರ ಸಂಚಾರಕ್ಕೆ ನಿಷೇಧವಿದ್ದು, ಅನಗತ್ಯವಾಗಿ ಓಡಾಡಿದರೆ ಮುಲಾಜಿಲ್ಲದೆ ಪ್ರಕರಣ ದಾಖಲಿಸಲು ಪೊಲೀಸರು ನಿರ್ಧರಿಸಿದ್ದಾರೆ. ರಾಜ್ಯಕ್ಕೆ ಒಳಬರುವ ಹಾಗೂ ರಾಜ್ಯದಿಂದ ಹೊರಹೋಗುವ ವಾಹನಗಳಿಗೆ ಬ್ರೇಕ್ ಹಾಕಿದ್ದು, ಆ ದಿನ ನಾಡಿನ ಎಲ್ಲ ಗಡಿಗಳನ್ನು ಸಹ ಬಂದ್ ಮಾಡಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಿದ್ದಾರೆ.
RBI ರೆಪೋ ದರ ಕಡಿತದ ಬೆನ್ನಲ್ಲೇ ಜೆಕೆ ಟೈಯರ್ಸ್ ಮಹತ್ವದ ಪ್ರಕಣೆ!
ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳು, ಆಟೋಗಳು ಹಾಗೂ ಕ್ಯಾಬ್‌ಗಳ ಓಡಾಟಕ್ಕೆ ಅವಕಾಶವಿರುವುದಿಲ್ಲ. ತುರ್ತು ವೈದ್ಯಕೀಯ ಸೇವೆಗಳಿಗೆ ವಾಹನಗಳ ಬಳಕೆ ಮಾಡಬಹುದು. ಆದರೆ ಇದಕ್ಕೆ ಅಗತ್ಯವಾದ ದಾಖಲೆಗಳನ್ನು ಕೂಡಾ ಸಾರ್ವಜನಿಕರು ಸಲ್ಲಿಸಬೇಕಾಗುತ್ತದೆ.
ಹಣ್ಣು, ತರಕಾರಿ, ದಿನಸಿ, ಪತ್ರಿಕೆ ಮಾರಾಟ ಮತ್ತು ವಿತರಣೆ ಹಾಗೂ ಔಷಧಿ ಸೇರಿದಂತೆ ಅಗತ್ಯ ಸೇವಾ ವಲಯಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಈ ವಲಯಗಳನ್ನು ಹೊರತುಪಡಿಸಿದರೆ ಜನರು ಅನಗತ್ಯವಾಗಿ ಮನೆಯಿಂದ ಹೊರಬಂದರೆ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ವಾಹನಗಳನ್ನು ಪೊಲೀಸರು ಜಪ್ತಿ ಮಾಡಲಿದ್ದಾರೆ. ಅಲ್ಲದೆ ಜನ ಸಂಚಾರ ನಿರ್ಬಂಧಿಸುವ ಸಲುವಾಗಿ ಬ್ಯಾರಿಕೇಡ್ ಹಾಕಿ ರಸ್ತೆಗಳನ್ನು ಬಂದ್ ಮಾಡಲಾಗುತ್ತದೆ. ಹಾಗೆಯೇ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿ ವಾಹನ ತಪಾಸಣೆ ನಡೆಸಲಾಗುತ್ತದೆ. ಮೀನು ಹಾಗೂ ಮಾಂಸ ಮಾರಾಟಕ್ಕೆ ಅವಕಾಶ ಇದ್ದು, ಮದ್ಯದಂಗಡಿಗಳ ಬಾಗಿಲು ಮುಚ್ಚಿರಲಿದೆ.
ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಯಡಿಯೂರಪ್ಪ
ರಾಜ್ಯದಲ್ಲಿ ಭಾನುವಾರ ಸಂಪೂರ್ಣವಾಗಿ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಜನರು ಸರ್ಕಾರದ ಸೂಚನೆ ಪಾಲನೆ ಮಾಡಬೇಕು. ಲಾಕ್‌ಡೌನ್ ನಿಯಮಾವಳಿ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಮರ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಮದುವೆ ಆಗುತ್ತೆ, ಮಾಂಸ ಸಿಗುತ್ತೆ
ಪೂರ್ವನಿಗದಿಯಾಗಿರುವ ಮದುವೆ ಸಮಾರಂಭಗಳನ್ನು 50 ಜನರಿಗೆ ಸೀಮಿತವಾಗಿ ಆಯೋಜಿಸಲು ರಾಜ್ಯ ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಇದೀಗ ಭಾನುವಾರ ಮಾಂಸ ಮಾರಾಟಕ್ಕೂ ಅನುಮತಿ ನೀಡಲಾಗಿದೆ. ಹಾಗಾಗಿ, ಭಾನುವಾರದ ಬಾಡೂಟಕ್ಕೆ ಯಾವುದೇ ಅಡ್ಡಿಯಿಲ್ಲ.
ಏನೇನು ಲಭ್ಯ?
ಹಣ್ಣು, ತರಕಾರಿ, ಹಾಲು, ದಿನಸಿ, ಔಷಧ, ಮೀನು ಹಾಗೂ ಮಾಂಸ ಮಾರಾಟ, ದಿನಪತ್ರಿಕೆಗಳ ಮಾರಾಟ ಮತ್ತು ವಿತರಣೆ
ಏನು ಲಭ್ಯವಿಲ್ಲ?
ಮದ್ಯ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕ್ಯಾಬ್‌ಗಳು, ಆಟೋಗಳ ಸಂಚಾರ, ರಾಜ್ಯದ ಗಡಿ ಭಾಗಗಳು, ಪ್ರಮುಖ ರಸ್ತೆಗಳು ಬಂದ್