ಉಡುಪಿಯಲ್ಲಿ 'ಸುಲ್ತಾನಪುರ' ಹೆಸರು ಎಲ್ಲಿಂದ ಬಂತು?! ದಿಶಾಂಕ್ ಆಪ್‌ನಲ್ಲಿ ಹೆಸರು ನೋಡಿ ಗ್ರಾಮಸ್ಥರೇ ಶಾಕ್!

ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ರೈತರ ಪಹಣಿಯಲ್ಲಿ 'ವಕ್ಫ್ ಆಸ್ತಿ' ಹೆಸರು ನಮೂದಾಗಿರುವ ಹಿನ್ನೆಲೆ ರೈತರು ಆತಂಕಗೊಂಡಿದ್ದಾರೆ. ತಮ್ಮ ಜಮೀನು ಪಹಣಿ, ಸರ್ಕಾರಿ ದಾಖಲೆಗಳನ್ನ ತೆಗೆದುನೋಡುತ್ತಿದ್ದಾರೆ. ಉಡುಪಿ ಜಿಲ್ಲೆಯ ಜನರು ಹೀಗೆ ಪರಿಶೀಲನೆ ವೇಳೆ ಉಡುಪಿಯಲ್ಲಿ 'ಸುಲ್ತಾನಪುರ' ಹೆಸರು ಕಂಡು ದಂಗಾಗಿದ್ದಾರೆ.

Sultanpur name entry in Shivalli village of Udupi district in Dishank App rav

ಉಡುಪಿ (ನ.2): ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ರೈತರ ಪಹಣಿಯಲ್ಲಿ 'ವಕ್ಫ್ ಆಸ್ತಿ' ಹೆಸರು ನಮೂದಾಗಿರುವ ಹಿನ್ನೆಲೆ ರೈತರು ಆತಂಕಗೊಂಡಿದ್ದಾರೆ. ತಮ್ಮ ಜಮೀನು ಪಹಣಿ, ಸರ್ಕಾರಿ ದಾಖಲೆಗಳನ್ನ ತೆಗೆದುನೋಡುತ್ತಿದ್ದಾರೆ. ಉಡುಪಿ ಜಿಲ್ಲೆಯ ಜನರು ಹೀಗೆ ಪರಿಶೀಲನೆ ವೇಳೆ ಉಡುಪಿಯಲ್ಲಿ 'ಸುಲ್ತಾನಪುರ' ಹೆಸರು ಕಂಡು ದಂಗಾಗಿದ್ದಾರೆ.

ಹೌದು ಉಡುಪಿ ಜಿಲ್ಲೆಯ ಶಿವಳ್ಳಿ ಗ್ರಾಮದಲ್ಲಿ ಸುಲ್ತಾನಪುರ ಎಂಬ ಅಪರಿಚಿತ ಊರಿನ ಹೆಸರು ನಮೂದಾಗಿದೆ. ಈ ಹಿಂದೆ ಯಾವತ್ತೂ ಸುಲ್ತಾನಪುರ ಹೆಸರೇ ಇರಲಿಲ್ಲ.. ಆದರೆ ಕರ್ನಾಟಕ ರಾಜ್ಯ ಸರ್ಕಾರದ ದಿಶಾಂಕ್ ಆಪ್‌ನಲ್ಲಿ ಸುಲ್ತಾನಪುರ ಎಂಬ ಹೆಸರು ನಮೂದಾಗಿದೆ. ಅದು ಬಂದಿದ್ದು ಹೇಗೆಂದು ಸಾರ್ವಜನಿಕರಿಗೆ ತಿಳಿಯದಾಗಿದೆ. ವಕ್ಫ್ ವಿವಾದ ಎದ್ದಿರುವ ಹಿನ್ನೆಲೆ  ಸರ್ಕಾರಿ ದಾಖಲೆಗಳನ್ನು ತಡಕಾಡುತ್ತಿರುವ ಸಾರ್ವಜನಿಕರಿಗೆ ಇಂತಹ ಹೆಸರಿರುವುದು ಕಂಡು ಶಾಕ್ ಆಗಿದೆ. 

 

ಲವ್ ಜಿಹಾದ್ ಆಯ್ತು ಈಗ ಲ್ಯಾಂಡ್‌ ಜಿಹಾದ್, ಭಾರತವೇನು ಬಿಟ್ಟಿ ಬಿದ್ದಿದೆಯೇ? ಜಮೀರ್ ವಿರುದ್ಧ ಬಿಜೆಪಿ ಶಾಸಕ ಕಿಡಿ

ಶಿವಳ್ಳಿ ಗ್ರಾಮದ ಸರ್ವೇ ನಂಬರ್ ಪರಿಶೀಲನೆ ವೇಳೆ ಸುಲ್ತಾನಪುರ ಹೆಸರು ಪತ್ತೆಯಾಗಿದೆ. ವಾಸ್ತವವಾಗಿ ಶಿವಳ್ಳಿಯಲ್ಲಾಗಲಿ, ಸುತ್ತಮುತ್ತಲಿನ ಪರಿಸರದಲ್ಲಾಗಲಿ ಆ ಹೆಸರಿನ ಊರೇ ಇಲ್ಲ. ಈ ಆಪ್‌ನಲ್ಲಿ ಸುಲ್ತಾನಪುರ ಹೆಸರಿದೆ. ಅಷ್ಟೇ ಅಲ್ಲ, ಊರಿಗೆ ಸಂಬಂಧವೇ ಇಲ್ಲದ ಸಾಲು ಸಾಲು ಹೆಸರುಗಳಿವೆ. ಮುದ್ದತ್ತನೂರು, ಸೋಟ್ನಟ್ಟಿ, ಪೇಪ್ನೋಲ್ಲಿ, ಮಿಕ್ಕಿರೆ, ಸರ್ಕೂರು ಇವೆಲ್ಲ ಯಾರು ಕೇಳಿದ ಹೆಸರುಗಳು, ಎಲ್ಲಿಂದ ಬಂದವು ಸಾರ್ವನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮೋದಿಯನ್ನ ಟೀಕಿಸೋದು ಆಕಾಶಕ್ಕೆ ಉಗಿದಂತೆ, ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ವಾಗ್ದಾಳಿ

ದಿಶಾಂಕ್ ಆಪ್‌ ಅನ್ನೋದು ಆರ್ ಟಿ ಸಿ ಪರಿಶೀಲಿಸುವ ಆಪ್ ಅಲ್ಲವೇ ಅಲ್ಲ. ಸರ್ವೇ ನಂಬರ್ ಗಳನ್ನು ಗುರುತಿಸಲು ಈ ಆಪ್ ತಯಾರಾಗಿದೆ. ಸ್ಥಳದ ಹೆಸರು ನಮೂದಿಸುವ ವೇಳೆ ತಪ್ಪಾಗಿರುವ ಸಾಧ್ಯತೆಯಿದೆ. ಈ ಆಪ್‌ನಲ್ಲಿ ಇಂತಹ ಅನೇಕ ತಪ್ಪುಗಳು ಕಂಡುಬಂದಿದ್ದು, ಖಾಸಗಿಯವರ ನೆರವಿನೊಂದಿಗೆ ದಾಖಲೆಗಳು ಅಪ್ಲೋಡ್ ಆಗಿವೆ. ಈ ಬಗ್ಗೆ ಪರಿಶೀಲನೆ ನಡೆಸಿ ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios