ಇಂದು ಅಥವಾ ನಾಳೆ 225 ವಾರ್ಡ್ ಅಂತಿಮ ಪಟ್ಟಿಸರ್ಕಾರಕ್ಕೆ ಸಲ್ಲಿಕೆ?
ಬಿಬಿಎಂಪಿಯ 225 ವಾರ್ಡ್ ಮರು ವಿಂಗಡಣೆ ಸಂಬಂಧಿಸಿದಂತೆ ಸಲ್ಲಿಕೆಯಾದ ಆಕ್ಷೇಪಣೆಗಳ ಪರಿಶೀಲನಾ ಕಾರ್ಯ ಬಹುತೇಕ ಪೂರ್ಣಗೊಳಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದ ಸಮಿತಿಯು ಶುಕ್ರವಾರದೊಳಗೆ ಸರ್ಕಾರಕ್ಕೆ ಅಂತಿಮ ವಾರ್ಡ್ ಪಟ್ಟಿಸಲ್ಲಿಸಲಿದೆ.

ಬೆಂಗಳೂರು (ಸೆ.7) : ಬಿಬಿಎಂಪಿಯ 225 ವಾರ್ಡ್ ಮರು ವಿಂಗಡಣೆ ಸಂಬಂಧಿಸಿದಂತೆ ಸಲ್ಲಿಕೆಯಾದ ಆಕ್ಷೇಪಣೆಗಳ ಪರಿಶೀಲನಾ ಕಾರ್ಯ ಬಹುತೇಕ ಪೂರ್ಣಗೊಳಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದ ಸಮಿತಿಯು ಶುಕ್ರವಾರದೊಳಗೆ ಸರ್ಕಾರಕ್ಕೆ ಅಂತಿಮ ವಾರ್ಡ್ ಪಟ್ಟಿಸಲ್ಲಿಸಲಿದೆ.
ರಾಜ್ಯ ಸರ್ಕಾರ ವಾರ್ಡ್ ಸಂಖ್ಯೆಯನ್ನು 225ಕ್ಕೆ ಇಳಿಸಿ ಹೊರಡಿಸಿರುವ ವಾರ್ಡ್ ಮರು ವಿಂಗಡಣೆ ಕರಡು ಅಧಿಸೂಚನೆಗೆ ಸುಮಾರು ಮೂರು ಸಾವಿರ ಆಕ್ಷೇಪಣೆ ಸಲ್ಲಿಕೆಯಾಗಿವೆ. ಈ ಆಕ್ಷೇಪಣೆಗಳನ್ನು ಕಳೆದ ಎರಡು ದಿನಗಳಿಂದ ಪರಿಶೀಲನೆ ಮಾಡುತ್ತಿರುವ ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದ ವಾರ್ಡ್ ಮರು ವಿಂಗಡಣಾ ಸಮಿತಿ ಬಹುತೇಕ ಪೂರ್ಣಗೊಳಿಸಿದೆ. ಗುರುವಾರ ಅಥವಾ ಶುಕ್ರವಾರ ರಾಜ್ಯ ಸರ್ಕಾರಕ್ಕೆ ವಾರ್ಡ್‌ಗಳ ಪಟ್ಟಿಯನ್ನು ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.
ನೂತನ ವಾರ್ಡ್ ರಚನೆಯಲ್ಲಿಯೂ ಲೋಪದೋಷ: ಮಾಜಿ ಕಾರ್ಪೊರೇಟರ್‌ಗಳ ಆರೋಪ
ರಾಜ್ಯ ಸರ್ಕಾರ ಸೋಮವಾರ ಈ ಕುರಿತು ಅಂತಿಮ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಬಳಿಕ ರಾಜ್ಯ ಸರ್ಕಾರ ಸೆ.13ಕ್ಕೆ ವಾರ್ಡ್ ಮರು ವಿಂಗಡಣೆಯ ಪಟ್ಟಿಯನ್ನು ಹೈಕೋರ್ಚ್‌ಗೆ ಸಲ್ಲಿಸಲಿದೆ.
ಮೀಸಲಾತಿ ಬಾಕಿ
225 ವಾರ್ಡ್‌ಗಳಿಗೆ ಸಂಬಂಧಿಸಿದಂತೆ ರಾಜ್ಯಪತ್ರ ಹೊರಡಿಸಿದ ಬಳಿಕ ರಾಜ್ಯ ಸರ್ಕಾರ 225 ವಾರ್ಡ್‌ಗಳಿಗೆ ಮೀಸಲಾತಿ ನಿಗದಿ ಪಡಿಸಿ ಕರಡು ಅಧಿಸೂಚನೆ ಹೊರಡಿಸಿ ಸಾರ್ವಜನಿಕರಿಂದ ವಾರ್ಡ್ ಮೀಸಲಾತಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಆಹ್ವಾನಿಸಲಿದೆ. ಸಲ್ಲಿಕೆಯಾದ ಆಕ್ಷೇಪಣೆ ಪರಿಶೀಲಿಸಿ ಅಂತಿಮ ಮೀಸಲಾತಿ ಪಟ್ಟಿಪ್ರಕಟಿಸಿ ಬಿಬಿಎಂಪಿಯ ವಾರ್ಡ್‌ಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗಕ್ಕೆ ಪಟ್ಟಿರವಾನಿಸಲಿದೆ. ನಂತರ ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿ ಚುನಾವಣೆ ನಡೆಸಬೇಕಿದೆ. ಈ ನಡುವೆ ಅತೃಪ್ತರು ನ್ಯಾಯಾಲಯದ ಮೊರೆ ಹೋದರೆ ಚುನಾವಣೆ ಮತ್ತಷ್ಟುವಿಳಂಬವಾಗುವ ಸಾಧ್ಯತೆ ಇದೆ.
BBMP: 225 ವಾರ್ಡ್‌ಗಳ ಕರಡು ಪ್ರಕಟ; ಪಟ್ಟಿ ಇಲ್ಲಿದೆ