ರಾಜ್ಯ ಸರ್ಕಾರದ ಕಾಶಿಯಾತ್ರೆ ರೈಲು ಹೌಸ್‌ಫುಲ್: 1 ತಿಂಗಳು ಟಿಕೆಟ್ ಸಿಗಲ್ಲ
ರಾಜ್ಯ ಮುಜರಾಯಿ ಇಲಾಖೆಯಿಂದ ‘ಕರ್ನಾಟಕ - ಭಾರತ್ ಗೌರವ್ ಕಾಶಿ ರೈಲು ಯಾತ್ರೆ’ಯ 6ನೇ ಸುತ್ತಿನ ಪ್ರವಾಸ ಶನಿವಾರದಿಂದ ಶುರುವಾಗಿದ್ದು, ನಗರದ ಯಶವಂತಪುರ ರೈಲು ನಿಲ್ದಾಣದಿಂದ ಕಾಶಿಗೆ ತೆರಳಿದ ರೈಲಿನ ಎಲ್ಲ 650 ಆಸನಗಳು ಭರ್ತಿಯಾಗಿದ್ದವು.

ಬೆಂಗಳೂರು (ಸೆ.24): ರಾಜ್ಯ ಮುಜರಾಯಿ ಇಲಾಖೆಯಿಂದ ‘ಕರ್ನಾಟಕ - ಭಾರತ್ ಗೌರವ್ ಕಾಶಿ ರೈಲು ಯಾತ್ರೆ’ಯ 6ನೇ ಸುತ್ತಿನ ಪ್ರವಾಸ ಶನಿವಾರದಿಂದ ಶುರುವಾಗಿದ್ದು, ನಗರದ ಯಶವಂತಪುರ ರೈಲು ನಿಲ್ದಾಣದಿಂದ ಕಾಶಿಗೆ ತೆರಳಿದ ರೈಲಿನ ಎಲ್ಲ 650 ಆಸನಗಳು ಭರ್ತಿಯಾಗಿದ್ದವು. ಯಶವಂತಪುರ ರೈಲು ನಿಲ್ದಾಣದಿಂದ ಹೊರಟ ವಿಶೇಷ ರೈಲಿಗೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹಸಿರು ನಿಶಾನೆ ತೋರಿದರು. ಸೆ. 25ರಂದು ರೈಲು ವಾರಣಾಸಿ ತಲುಪಲಿದೆ. 27ರಂದು ಪ್ರಯಾಗ್ ರಾಜ್‌ಗೆ ಪ್ರಯಾಣ ಬೆಳೆಸಲಿದೆ.
ಸೆ.28ರಂದು ಅಯೋಧ್ಯಾ, ಸೆ.29ರಂದು ಗಯಾಕ್ಕೆ ಭೇಟಿ ನೀಡಲಿದ್ದು, ಅಕ್ಟೋಬರ್ 2ಕ್ಕೆ ಬೆಂಗಳೂರಿಗೆ ರೈಲು ಮರಳಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೊದಲು ಯೋಜನೆಯಡಿ ಪುಣ್ಯ ಕ್ಷೇತ್ರಗಳಾದ ವಾರಾಣಸಿ, ಅಯೋಧ್ಯೆ ಮತ್ತು ಪ್ರಯಾಗ್‌ರಾಜ್ ಕ್ಷೇತ್ರಗಳಿಗೆ ಯಾತ್ರೆ ಕರೆದೊಯ್ಯಲಾಗುತ್ತಿತ್ತು. ಇದೀಗ ಬಿಹಾರದ ಗಯಾ ಕ್ಷೇತ್ರವನ್ನು ಸೇರಿಸಿರುವ ರಾಜ್ಯ ಸರ್ಕಾರ, ಯಾತ್ರೆಗೆ ನೀಡುತ್ತಿದ್ದ ಸಹಾಯಧನವನ್ನು ₹5 ಸಾವಿರದಿಂದ ₹7500ಕ್ಕೆ ಏರಿಸಿದೆ.
ಈ ವರ್ಷದಿಂದ 9, 11ನೇ ಕ್ಲಾಸಿಗೂ ಇನ್ನು ಪಬ್ಲಿಕ್ ಪರೀಕ್ಷೆ: ಶಿಕ್ಷಣ ಇಲಾಖೆಯಿಂದ ಆದೇಶ
ಮುಂದಿನ ಬುಕ್ಕಿಂಗ್ ಪೂರ್ಣ: ಅ. 7ರಂದು 7ನೇ ಸುತ್ತಿನ ಕಾಶಿ ಯಾತ್ರೆ ಆರಂಭವಾಗಲಿದ್ದು, ಈಗಾಗಲೇ ಎಲ್ಲ ಆಸನಗಳ ಟಿಕೆಟ್ ಬುಕ್ಕಿಂಗ್ ಪೂರ್ಣಗೊಂಡಿವೆ. ಆಸಕ್ತರು ಅ. 26ಕ್ಕೆ ಆರಂಭವಾಗಲಿರುವ ಪ್ರವಾಸಕ್ಕೆ ಟಿಕೆಟ್ ಕಾಯ್ದಿರಿಸಬಹುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾಶಿಯಾತ್ರೆ ಸಬ್ಸಿಡಿ .7500ಗೆ ಹೆಚ್ಚಳಕ್ಕೆ ಚಿಂತನೆ: ರಾಜ್ಯ ಸರ್ಕಾರದಿಂದ ‘ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ’ ಯೋಜನೆಯಡಿ ಕಾಶಿಯಾತ್ರೆಗೆ ನೀಡಲಾಗುತ್ತಿರುವ ಸಬ್ಸಿಡಿಯನ್ನು . 5ಸಾವಿರದಿಂದ . 7,500ಕ್ಕೆ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಿ ತೀರ್ಮಾನಿಸಲಾಗುವುದು ಎಂದು ರಾಜ್ಯ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಯೋಜನೆಯಡಿ 450 ಪ್ರಯಾಣಿಕರನ್ನು ಕಾಶಿಗೆ ಕರೆದೊಯ್ಯುತ್ತಿರುವ ರೈಲಿಗೆ ಶನಿವಾರ ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಮಂಡ್ಯ ನಗರ, ಮದ್ದೂರು ಬಂದ್ ಭರ್ಜರಿ ಯಶಸ್ವಿ: ಸ್ಟಾಲಿನ್ ಪ್ರತಿಕೃತಿ ದಹಿಸಿ ಆಕ್ರೋಶ
ಪ್ರಸ್ತುತ ಯೋಜನೆಯಡಿ 8 ದಿನಗಳ ಕಾಶಿ ಪ್ರವಾಸಕ್ಕೆ ಒಬ್ಬರಿಗೆ .20 ಸಾವಿರ ದರವಿದೆ. ಇದರಲ್ಲಿ . 5 ಸಾವಿರವನ್ನು ರಾಜ್ಯ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಯಾತ್ರೆಯ ಸಬ್ಸಿಡಿ ದರ ಹೆಚ್ಚಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ತೀರ್ಮಾನಿಸಲಾಗುವುದು ಎಂದರು. ಮುಂದಿನ ಯಾತ್ರೆ ಆ. 12ಕ್ಕೆ ಆರಂಭವಾಗಲಿದ್ದು, ರಾಮೇಶ್ವರಂ, ಗಯಾ ಸೇರಿ ಹಲವು ಪ್ರವಾಸಿ ತಾಣಗಳ ಭೇಟಿ ನೀಡಲು ಅನುಕೂಲ ಆಗುವಂತೆ ವ್ಯವಸ್ಥೆ ಮಾಡಲಾಗುವುದು. ಇದರಲ್ಲಿ ಪ್ರಯಾಣ, ಊಟ, ವಸತಿ ವ್ಯವಸ್ಥೆಯೊಂದಿಗೆ ಧಾರ್ಮಿಕ ಕ್ಷೇತ್ರಗಳಾದ ವಾರಾಣಸಿ, ಅಯೋಧ್ಯೆ ಮತ್ತು ಪ್ರಯಾಗ್‌ರಾಜ್ ದರ್ಶನವೂ ಸೇರಿದೆ ಎಂದು ಹೇಳಿದರು.