Asianet Suvarna News Asianet Suvarna News

ಸರ್ಕಾರ ಪಂಚಮಸಾಲಿಯ 2ಎ ಬೇಡಿಕೆ ಈಡೇರಿಸಲಿ: ಪಂಚಮಸಾಲಿ ಶ್ರೀ

ಪಂಚಮಸಾಲಿ ಸಮುದಾಯದ ಮಕ್ಕಳ ಉನ್ನತ ಶಿಕ್ಷಣ, ಉದ್ಯೋಗಕ್ಕಾಗಿ 2ಎ ಮೀಸಲಾತಿ ಬೇಡಿಕೆಯನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಡೇರಿಸಬೇಕು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.

State Government should give 2A reservation to Panchmasali says basavajayamrityunjayashree at bellary rav
Author
First Published Jul 9, 2023, 11:58 AM IST

ಕೂಡ್ಲಿಗಿ (ಜು.9) : ಪಂಚಮಸಾಲಿ ಸಮುದಾಯದ ಮಕ್ಕಳ ಉನ್ನತ ಶಿಕ್ಷಣ, ಉದ್ಯೋಗಕ್ಕಾಗಿ 2ಎ ಮೀಸಲಾತಿ ಬೇಡಿಕೆಯನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಡೇರಿಸಬೇಕು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.

ತಾಲೂಕಿನ ಎಂ.ಬಿ. ಅಯ್ಯನಹಳ್ಳಿ ಸ್ವಾಮಿ ವಿವೇಕಾನಂದ ಕಾಲೇಜು ಆವರಣದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲೂಕು ಘಟಕದಿಂದ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪಂಚಮಸಾಲಿ ಮೀಸಲಾತಿ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ನಮಗೆ ನ್ಯಾಯ ಕೊಡಿಸಿ, ಕೂಡಲ ಶ್ರೀ

ಕೃಷಿ ಮೂಲಕ ಅನ್ನ ನೀಡುವ ಪಂಚಮಸಾಲಿ ಸಮುದಾಯವು ಇತ್ತೀಚೆಗೆ ಸಂಘಟನೆಯಾಗಿದ್ದರಿಂದ ಪಂಚಮಸಾಲಿ ಸಮುದಾಯದ(Panchamasali community) ಶಕ್ತಿ ಜನಪ್ರತಿನಿಧಿಗಳಿಗೆ ತಿಳಿದಿದೆ. ನಮ್ಮ ಬೇಡಿಕೆಗೆ ಸ್ಪಂದನೆ ದೊರೆಯಲಿದೆ. ಪಂಚಮಸಾಲಿ ಸಮಾಜ ಸ್ವಾಭಿಮಾನ, ಭೂದಾನಕ್ಕೆ ಹೆಸರುವಾಸಿಯಾದ ಸಮಾಜ. ನಾನು ರಾಜ್ಯಾದ್ಯಾಂತ ಸುತ್ತಿದ್ದೇನೆ. ಎಲ್ಲಿ ನೋಡಿದರೂ ಶಾಲೆಗೆ ಭೂದಾನ ಮಾಡಿದವರು ಬಹುತೇಕರು ಪಂಚಮಸಾಲಿ ಸಮಾಜದವರೇ ಆಗಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಾ.ಎನ್‌.ಟಿ. ಶ್ರೀನಿವಾಸ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗುವೆ. ಕೂಡ್ಲಿಗಿಯನ್ನು ಮಾದರಿ ಕ್ಷೇತ್ರವಾಗಿಸುವೆ. ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ಪರಿಸರ ಸೇರಿ ಎಲ್ಲ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿಯಾಗಿದೆ ಎಂದರು.

ಹುನುಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ, ಕೂಡ್ಲಿಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ. ಗುರುಸಿದ್ದನಗೌಡ ಮಾತನಾಡಿದರು. ಉಪನ್ಯಾಸಕ ಕೊಟ್ರಪ್ಪನವರ ನಾಗರಾಜ ಪ್ರಾಸ್ತಾವಿಕ ನುಡಿದರು. ಸಮುದಾಯದ ತಾಲೂಕು ಅಧ್ಯಕ್ಷ ಹೊಂಬಾಳೆ ರೇವಣ್ಣ ಅಧ್ಯಕ್ಷತೆ ವಹಿಸಿದ್ದರು.

ಮುಖಂಡ ಹೊಸಮನೆ ಚಿದಾನಂದಪ್ಪ, ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ, ಕೆಪಿಸಿಸಿ ಮಹಿಳಾ ಘಟಕದ ಸದಸ್ಯೆ ನಾಗಮಣಿ ಜಿಂಕಲ…, ಜಿ.ಎಂ.ಬಸಣ್ಣ, ಕೊಟ್ಟೂರು ತಾಲೂಕು ಅಧ್ಯಕ್ಷ ಟ್ಯೂಟೊರಿಯಲ… ಶಿವಣ್ಣ, ಮುಖಂಡರಾದ ಟಿ.ಜಿ. ಮಲ್ಲಿಕಾರ್ಜುನ ಗೌಡ, ಬಣವಿಕಲ… ಎರಿಸ್ವಾಮಿ, ಮರುಳಸಿದ್ದಪ್ಪ, ಹುಲಿಕೆರೆ ರಮೇಶ್‌ ಗೌಡ ಮತ್ತಿತರರಿದ್ದರು.

 

ಪಂಚಮಸಾಲಿ ಮೀಸಲು ವರದಿ ಪ್ರತಿ ನೀಡಿ: ಹೈಕೋರ್ಟ್‌

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಯಲ್ಲಿ ಹೆಚ್ಚು ಅಂಕ ಪಡೆದ ಪಂಚಮಸಾಲಿ ಸಮುದಾಯದ ವಿದ್ಯಾರ್ಥಿಗಳು ಹಾಗೂ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರನ್ನು ಸನ್ಮಾನಿಸಲಾಯಿತು.

Follow Us:
Download App:
  • android
  • ios