ಅನಿರುದ್ಧ ಜತ್ಕರ್‌ ನಿರ್ದೇಶನದ ‘ಬಾಳೆ ಬಂಗಾರ’ ಸಾಕ್ಷ್ಯಚಿತ್ರ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-2021ರ ಸಾಕ್ಷ್ಯಚಿತ್ರ ವಿಭಾಗದಲ್ಲಿ ತೀರ್ಪುಗಾರರ ವಿಶೇಷ ಉಲ್ಲೇಖಕ್ಕೆ ಪಾತ್ರವಾಗಿರುವ ಹಿನ್ನೆಲೆಯಲ್ಲಿ ಸಂತೋಷ ವ್ಯಕ್ತಪಡಿಸಿರುವ ನಟ ಅನಿರುದ್ಧ ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿಯ ಸಾಕ್ಷ್ಯಚಿತ್ರ ವಿಭಾಗದ ನಿಯಮ ಬದಲಾವಣೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರು (ಆ.25): ಅನಿರುದ್ಧ ಜತ್ಕರ್‌ ನಿರ್ದೇಶನದ ‘ಬಾಳೆ ಬಂಗಾರ’ ಸಾಕ್ಷ್ಯಚಿತ್ರ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-2021ರ ಸಾಕ್ಷ್ಯಚಿತ್ರ ವಿಭಾಗದಲ್ಲಿ ತೀರ್ಪುಗಾರರ ವಿಶೇಷ ಉಲ್ಲೇಖಕ್ಕೆ ಪಾತ್ರವಾಗಿರುವ ಹಿನ್ನೆಲೆಯಲ್ಲಿ ಸಂತೋಷ ವ್ಯಕ್ತಪಡಿಸಿರುವ ನಟ ಅನಿರುದ್ಧ ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿಯ ಸಾಕ್ಷ್ಯಚಿತ್ರ ವಿಭಾಗದ ನಿಯಮ ಬದಲಾವಣೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

‘ಪದ್ಮಶ್ರೀ ಭಾರತಿ ವಿಷ್ಣುವರ್ಧನ್‌ ಜೀವನ ಕತೆ ಆಧರಿಸಿದ ಬಾಳೆ ಬಂಗಾರ ಸಾಕ್ಷ್ಯ ಚಿತ್ರಕ್ಕೆ ರಾಷ್ಟ್ರ ಪಶಸ್ತಿ ಬಂದಿರುವುದು ಬಹಳ ಸಂತೋಷವಾಗಿದೆ. ಈ ಸಾಕ್ಷ್ಯ ಚಿತ್ರ ಕಲಾವಿದೆಯೊಬ್ಬರ ಜೀವನ ಕತೆಯನ್ನು ಆಧರಿಸಿದ ಸುದೀರ್ಘ ಸಾಕ್ಷ್ಯ ಚಿತ್ರ ಎಂಬ ವಿಚಾರಕ್ಕೆ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್, ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್ ಮತ್ತು ಕಲಾಮ್‌ ಬುಕ್‌ ಆಫ್‌ ವಲ್‌ರ್‍್ಡ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಹಾಗಾಗಿ ನಾನು ರಾಜ್ಯ ಪ್ರಶಸ್ತಿಗೂ ಈ ಸಾಕ್ಷ್ಯಚಿತ್ರವನ್ನು ಕಳುಹಿಸಿದ್ದೆ. ಆದರೆ ನನ್ನ ಅರ್ಜಿಯನ್ನು ಅಲ್ಲಿ ಸ್ವೀಕರಿಸಲಿಲ್ಲ. ಯಾಕೆಂದರೆ ರಾಜ್ಯ ಪ್ರಶಸ್ತಿಯಲ್ಲಿ ಸಾಕ್ಷ್ಯ ಚಿತ್ರ ಮತ್ತು ಕಿರುಚಿತ್ರವನ್ನು ಒಂದೇ ವಿಭಾಗದಲ್ಲಿ ಹಾಕಿದ್ದಾರೆ. 

ನಾವು ಬಿಜೆಪಿ ಬಿಡೋದಿಲ್ಲ: ಎಸ್‌ಟಿಎಸ್‌, ಹೆಬ್ಬಾರ್‌, ಬೈರತಿ

ಅದರ ಅವಧಿ 30 ನಿಮಿಷ ಮಾತ್ರ. ಯಾರೇ ಒಬ್ಬ ಸಾಧಕನ ಬಗ್ಗೆ ಸಾಕ್ಷ್ಯಚಿತ್ರ ಮಾಡಬೇಕಾದರೆ 30 ನಿಮಿಷ ಸಾಲುವುದಿಲ್ಲ. ಆದ್ದರಿಂದ ಆ ನಿಯಮವನ್ನು ಬದಲಾಯಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕೈ ಮುಗಿದು ಮನವಿ ಮಾಡುತ್ತಿದ್ದೇನೆ’ ಎಂದು ಅನಿರುದ್ಧ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಸಾಕ್ಷ್ಯಚಿತ್ರದ ನಿರ್ಮಾಪಕಿ ಕೀರ್ತಿ ಅನಿರುದ್ಧ ಮತ್ತು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಹಿರಿಯ ಸಾಧಕರು, ಇತಿಹಾಸವನ್ನು ಪರಿಚಯಿಸುವಂತಹ ಸಾಕ್ಷ್ಯಚಿತ್ರಗಳು ಹೆಚ್ಚಾಗಬೇಕು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಚಾರ್ಲಿ 777 ಸೇರಿ ಕನ್ನಡಕ್ಕೆ 4 ರಾಷ್ಟ್ರೀಯ ಚಿತ್ರ ಪ್ರಶಸ್ತಿ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-2021 ಘೋಷಣೆಯಾಗಿದ್ದು, ಕನ್ನಡಕ್ಕೆ ನಾಲ್ಕು ಪ್ರಶಸ್ತಿಗಳು ದೊರೆತಿವೆ. ರಕ್ಷಿತ್‌ ಶೆಟ್ಟಿನಟನೆ, ನಿರ್ಮಾಣದ, ಕಿರಣ್‌ರಾಜ್‌ ನಿರ್ದೇಶನದ ‘777 ಚಾರ್ಲಿ’ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ, ಜೇಕಬ್‌ ವರ್ಗೀಸ್‌ ನಿರ್ದೇಶನದ ಸಾಕ್ಷ್ಯಚಿತ್ರ ‘ಆಯುಷ್ಮಾನ್‌’ ನಾನ್‌-ಫೀಚರ್‌ ವಿಭಾಗದಲ್ಲಿ ಅತ್ಯುತ್ತಮ ಅನ್ವೇಷಣಾ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಅನಿರುದ್ಧ ಜತ್ಕರ್‌ ನಿರ್ದೇಶನದ ‘ಬಾಳ ಬಂಗಾರ’ ಸಾಕ್ಷ್ಯಚಿತ್ರ ನಾನ್‌-ಫೀಚರ್‌ ವಿಭಾಗದಲ್ಲಿ ತೀರ್ಪುಗಾರರ ವಿಶೇಷ ಉಲ್ಲೇಖ ಪಡೆದರೆ, ಸಿನಿಮಾ ವಿಮರ್ಶೆ ವಿಭಾಗದಲ್ಲಿ ಹಿರಿಯ ಪತ್ರಕರ್ತ ಬಿ.ಎನ್‌. ಸುಬ್ರಹ್ಮಣ್ಯ ತೀರ್ಪುಗಾರರ ವಿಶೇಷ ಉಲ್ಲೇಖಕ್ಕೆ ಪಾತ್ರರಾಗಿದ್ದಾರೆ.

‘777 ಚಾರ್ಲಿ’ ಮತ್ತು ‘ಆಯುಷ್ಮಾನ್‌’ ರಜತ ಕಮಲ ಪ್ರಶಸ್ತಿಗೆ ಭಾಜನವಾಗಿವೆ. ‘777 ಚಾರ್ಲಿ’ಯ ನಿರ್ದೇಶಕ, ನಿರ್ಮಾಪಕರಿಗೆ ರಜತ ಕಮಲ ಪ್ರಶಸ್ತಿ ಮತ್ತು 1 ಲಕ್ಷ ರು. ನಗದು ಬಹುಮಾನ ದೊರೆಯಲಿದೆ. ‘ಆಯುಷ್ಮಾನ್‌’ ಚಿತ್ರದ ನಿರ್ದೇಶಕ, ನಿರ್ಮಾಪಕರಿಗೆ ರಜತಕಮಲ ಮತ್ತು 50000 ರು. ನಗದು ಬಹುಮಾನ ದೊರೆಯಲಿದೆ. ‘777 ಚಾರ್ಲಿ’ ಸಿನಿಮಾ ಧರ್ಮ ಎಂಬ ಯುವಕ ಮತ್ತು ಚಾರ್ಲಿ ಎಂಬ ನಾಯಿಯ ನಡುವಿನ ಭಾವನಾತ್ಮಕ ಕಥಾ ಹಂದರವನ್ನು ಹೊಂದಿದ್ದು, ಬಾಕ್ಸ್‌ ಆಫೀಸಿನಲ್ಲಿಯೂ ಉತ್ತಮ ಗಳಿಕೆ ಮಾಡಿ ಗೆದ್ದಿತ್ತು. ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ರಾಷ್ಟಾ್ರದ್ಯಂತ ಮೆಚ್ಚುಗೆ ದೊರಕಿತ್ತು. ಆ ಮೂಲಕ ರಕ್ಷಿತ್‌ ಶೆಟ್ಟಿ ಅವರೂ ಪ್ಯಾನ್‌ ಇಂಡಿಯಾ ಸ್ಟಾರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಕಾಂಗ್ರೆಸ್‌ಗೆ ಎಷ್ಟು ಜನರ ಬರ್ತಾರೆಂದು ಕಾಲವೇ ಹೇಳುತ್ತದೆ: ಡಿಕೆಶಿ

‘ಆಯುಷ್ಮಾನ್‌’ ಸಾಕ್ಷ್ಯಚಿತ್ರ ನಿರ್ದೇಶನ ಮಾಡಿದ್ದ ಜೇಕಬ್‌ ವರ್ಗೀಸ್‌ ಅವರು ಈ ಹಿಂದೆ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಪೃಥ್ವಿ’ ಸಿನಿಮಾ ನಿರ್ದೇಶನ ಮಾಡಿದ್ದರು. ಸವಾರಿ, ಚಂಬಲ್‌ ಸಿನಿಮಾ ನಿರ್ದೇಶಿಸಿದ್ದರು. ಅನಂತರ ಚಿತ್ರರಂಗದಿಂದ ದೂರವೇ ಇದ್ದ ಅವರು ಇದೀಗ ಸಾಕ್ಷ್ಯಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ‘ಬಾಳ ಬಂಗಾರ’ ಸಾಕ್ಷ್ಯಚಿತ್ರ ಭಾರತಿ ವಿಷ್ಣುವರ್ಧನ್‌ ಅವರ ಜೀವನ ಆಧರಿಸಿದ ಚಿತ್ರ. ಈ ಚಿತ್ರ ಭಾರತಿ ವಿಷ್ಣುವರ್ಧನ್‌ ಮತ್ತು ವಿಷ್ಣುವರ್ಧನ್‌ ಅವರ ಜೀವನ ಕತೆ ನಿರೂಪಿಸುತ್ತದೆ. ಈ ಚಿತ್ರವನ್ನು ಅನಿರುದ್ಧ ಜಟ್ಕರ್‌ ನಿರ್ದೇಶನ ಮಾಡಿದ್ದಲ್ಲದೆ ನಿರೂಪಣೆಯನ್ನೂ ಮಾಡಿದ್ದರು.