Asianet Suvarna News Asianet Suvarna News

Karnataka politics: ಎಸ್‌ಟಿ ಸೋಮಶೇಖರ್ ಕಾಂಗ್ರೆಸ್‌ನತ್ತ?: ಚುರುಕಾದ ಜವರಾಯಿಗೌಡ!

ಯಶವಂತಪುರ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಪಕ್ಷ ತೊರೆದು ಕಾಂಗ್ರೆಸ್‌ಗೆ ವಲಸೆ ಹೋಗುತ್ತಾರೆ ಎಂಬ ದಟ್ಟವದಂತಿ ಬೆನ್ನಲ್ಲೇ ಈ ಕ್ಷೇತ್ರದಲ್ಲಿ ಪ್ರಬಲ ಒಡ್ಡಿಕೊಂಡು ಬಂದಿರುವ ಜೆಡಿಎಸ್‌ ಪಾಳೆಯ ಎಚ್ಚೆತ್ತುಗೊಂಡಿದೆ.

ST Somashekhar will join Congress  Jawarai gowda alert at bengaluru rav
Author
First Published Aug 21, 2023, 6:15 AM IST

ಬೆಂಗಳೂರು (ಆ.21) :  ಯಶವಂತಪುರ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಪಕ್ಷ ತೊರೆದು ಕಾಂಗ್ರೆಸ್‌ಗೆ ವಲಸೆ ಹೋಗುತ್ತಾರೆ ಎಂಬ ದಟ್ಟವದಂತಿ ಬೆನ್ನಲ್ಲೇ ಈ ಕ್ಷೇತ್ರದಲ್ಲಿ ಪ್ರಬಲ ಒಡ್ಡಿಕೊಂಡು ಬಂದಿರುವ ಜೆಡಿಎಸ್‌ ಪಾಳೆಯ ಎಚ್ಚೆತ್ತುಗೊಂಡಿದೆ.

ಸೋಮಶೇಖರ್‌ ವಿರುದ್ಧ ಸತತವಾಗಿ ಕಳೆದ ನಾಲ್ಕು ಚುನಾವಣೆಗಳಲ್ಲಿ ಎದುರಾಳಿಯಾಗಿ ಸ್ಪರ್ಧಿಸಿ ಸೋಲುಂಡಿರುವ ಜೆಡಿಎಸ್‌ನ ಟಿ.ಎನ್‌.ಜವರಾಯಿಗೌಡ ಅವರು ಮತ್ತೆ ಕ್ರಿಯಾಶೀಲವಾಗಿ ಕ್ಷೇತ್ರದಾದ್ಯಂತ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಭೇಟಿ ಆರಂಭಿಸಿದ್ದಾರೆ. ಕಾಂಗ್ರೆಸ್‌ಗೆ ವಲಸೆ ಹೋದಲ್ಲಿ ಮತ್ತೆ ಉಪ ಚುನಾವಣೆ ಎದುರಾಗುವುದರಿಂದ ಸತತ ಸೋಲಿನ ಸೇಡು ತೀರಿಸಿಕೊಳ್ಳಲು ರಣತಂತ್ರ ರೂಪಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಘರ್‌ ವಾಪಸಿ ತಡೆಗೆ ಇಂದು ಬಿಜೆಪಿ ಕೋರ್‌ ಕಮಿಟಿ ಸಭೆ

ಕಳೆದ 2013ರಿಂದ ಇದುವರೆಗೆ ಒಂದು ಉಪಚುನಾವಣೆ ಸೇರಿದಂತೆ ನಾಲ್ಕು ಚುನಾವಣೆಗಳು ನಡೆದಿದ್ದು, ಅಷ್ಟೂಬಾರಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಸೋಮಶೇಖರ್‌ ಮತ್ತು ಜವರಾಯಿಗೌಡ ಅವರು ಮುಖಾಮುಖಿಯಾಗಿದ್ದಾರೆ. ನಾಲ್ಕು ಬಾರಿಯೂ ಇಬ್ಬರ ನಡುವೆ ಭರ್ಜರಿ ಪೈಪೋಟಿ ಏರ್ಪಟ್ಟಿತ್ತು. ಜವರಾಯಿಗೌಡ ಅವರು ಸೋಮಶೇಖರ್‌ ವಿರುದ್ಧ 2013ರ ಚುನಾವಣೆಯಲ್ಲಿ 29,110 ಮತಗಳಿಂದ, 2018ರ ಚುನಾವಣೆಯಲ್ಲಿ 10,711 ಮತಗಳಿಂದ, 2019ರ ಉಪಚುನಾವಣೆಯಲ್ಲಿ 27,699 ಮತಗಳಿಂದ ಹಾಗೂ ಇತ್ತೀಚಿನ 2023ರ ಚುನಾವಣೆಯಲ್ಲಿ 15,118 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿದ್ದರೂ ಜೆಡಿಎಸ್‌ನ ಜವರಾಯಿಗೌಡ ಹೆಚ್ಚಿನ ಮತಗಳನ್ನೇ ಗಳಿಸಿದ್ದಾರೆ.

ಸುಮಾರು ಒಂದು ದಶಕದಿಂದ ಯಶವಂತಪುರ ಕ್ಷೇತ್ರದಲ್ಲಿ ಸೋಮಶೇಖರ್‌ ಮತ್ತು ಜವರಾಯಿಗೌಡ ನಡುವೆ ಹಣಾಹಣಿ ಮುಂದುವರೆದಿದೆ. ಚುನಾವಣೆ ಗೆಲ್ಲಲು ಜವರಾಯಿಗೌಡ ಹರಸಾಹಸ ಮಾಡಿದರೂ ಸಾಧ್ಯವಾಗಿಲ್ಲ. ಇವರಿಬ್ಬರ ಸ್ಪರ್ಧೆ ನಡುವೆ ಮೂರನೇ ಅಭ್ಯರ್ಥಿ ಹೆಚ್ಚು ಮತಗಳನ್ನು ಗಳಿಸಲು ಯಶಸ್ವಿಯಾಗಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳು ಬದಲಾದಲೂ ಜೆಡಿಎಸ್‌ನಿಂದ ಮಾತ್ರ ಸತತವಾಗಿ ಜವರಾಯಿಗೌಡ ಅವರಿಗೇ ಟಿಕೆಟ್‌ ನೀಡಲಾಗಿದೆ.

ಪ್ರಾಯಾಸದಲ್ಲಿ ಗೆದ್ದಿದ್ದ ಎಸ್‌ಟಿಎಸ್‌

ಇತ್ತೀಚಿನ ಚುನಾವಣೆಯಲ್ಲಿ ಜವರಾಯಿಗೌಡ ಅವರ ಪರವಾಗಿ ಕ್ಷೇತ್ರದಲ್ಲಿ ಬಲವಾದ ಅಬ್ಬರ ಕೇಳಿಬಂದಿತ್ತು. ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ ಒಕ್ಕಲಿಗ ಸಮುದಾಯದ ಮತದಾರರು ಒಗ್ಗಟ್ಟಿನಿಂದ ಜವರಾಯಿಗೌಡ ಪರವಾಗಿ ಮತ ಚಲಾಯಿಸುವ ತಂತ್ರ ರೂಪುಗೊಂಡಿತ್ತು. ಈ ಹಂತದಲ್ಲಿ ಸೋಮಶೇಖರ್‌ ಅವರೂ ಆತಂಕಕ್ಕೀಡಾಗಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಸೋಮಶೇಖರ್‌ ಅವರು ಹೆಚ್ಚು ಗಮನಹರಿಸಿ ಶ್ರಮ ಹಾಕಿದ್ದರಿಂದ ಗೆಲುವು ಸಾಧ್ಯವಾಯಿತು. ಸಚಿವರಾಗಿ ಚುನಾವಣೆ ಎದುರಿಸಿದರೂ ಗೆಲುವಿನ ಅಂತರ 15,118 ಮಾತ್ರ.

Karnataka politics: ಪುತ್ರರ ಭವಿಷ್ಯಕ್ಕಾಗಿ ಎಸ್‌ಟಿಎಸ್‌, ಹೆಬ್ಬಾರ್‌ ಘರ್‌ ವಾಪಸಿ ಯತ್ನ?

ಒಂದು ವೇಳೆ ಈಗ ಸೋಮಶೇಖರ್‌ ಅವರು ಕಾಂಗ್ರೆಸ್‌ಗೆ ವಲಸೆ ಹೋಗುವ ನಿರ್ಧಾರ ಕೈಗೊಂಡಲ್ಲಿ ಮತ್ತೆ ಉಪಚುನಾವಣೆ ಎದುರಾಗುವುದು ನಿಶ್ಚಿತ. ಐದನೇ ಬಾರಿ ಸೋಮಶೇಖರ್‌ ಮತ್ತು ಜವರಾಯಿಗೌಡ ಅವರ ನಡುವೆ ಹೋರಾಟ ನಡೆಯುವ ಸಾಧ್ಯತೆ ಹೆಚ್ಚಿದೆ.

Follow Us:
Download App:
  • android
  • ios