Asianet Suvarna News Asianet Suvarna News

ಮೈಸೂರು ದಸರಾ ಲೆಕ್ಕಪತ್ರ, ಯಾವುದಕ್ಕೆ ಎಷ್ಟು ಖರ್ಚು? ಇಲ್ಲಿದೆ ಸಂಪೂರ್ಣ ಮಾಹಿತಿ

* ದಸರಾ ಖರ್ಚಿನ ಮಾಹಿತಿ ಬಿಡುಗಡೆ ಮಾಡಿದ ಸಚಿವ ಸೋಮಶೇಖರ್‌
* ಮೈಸೂರು ದಸರಾಗೆ .4.22 ಕೋಟಿ,
* ಮಂಡ್ಯ, ಚಾಮರಾಜನಗರ, ಹಾಸನ ದಸರಾಗೆ .1.2 ಕೋಟಿ ವೆಚ್ಚ

ST somashekar gives information about-mysuru dasara 2021 expenditure rbj
Author
Bengaluru, First Published Nov 2, 2021, 1:11 AM IST

ಮೈಸೂರು, (ನ.02): ಈ ಬಾರಿ ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲಾದ ಮೈಸೂರು ದಸರಾ (Mysuru Dasara) ಮಹೋತ್ಸವಕ್ಕೆ ಒಟ್ಟು .4.22 ಕೋಟಿ ವೆಚ್ಚ ಮಾಡಲಾಗಿದೆ. ಇದರಲ್ಲಿ ಆನೆಗಳ ನಿರ್ವಹಣೆಗೆ .50 ಲಕ್ಷ, ಅರಮನೆಗೆ ಗೌರವ ಸಂಭಾವನೆಯಾಗಿ ಮಾಡಿದ .40 ಲಕ್ಷ ವೆಚ್ಚ ಕೂಡ ಸೇರಿದೆ.

ಮೈಸೂರು (Mysuru) ದಸರಾಗಾಗಿ ಸರ್ಕಾರ ನೀಡಿದ್ದ 6 ಕೋಟಿ ಅನುದಾನದಲ್ಲಿ ಮಂಡ್ಯ (Mandya), ಚಾಮರಾಜನಗರ ಮತ್ತು ಹಾಸನ(Hassan) ಜಿಲ್ಲೆಗೆ ಒಟ್ಟು .1.20 ಕೋಟಿ ನೀಡಲಾಗಿದ್ದು, ಮೈಸೂರು ದಸರಾಗೆ .4.22 ಕೋಟಿ ವೆಚ್ಚ ಮಾಡಲಾಗಿದೆ. ಒಟ್ಟಾರೆ . 5,42,07,679 ವೆಚ್ಚವಾಗಿದ್ದು, ಸುಮಾರು .57 ಲಕ್ಷ ಅನುದಾನ ಉಳಿದಿದೆ.

ಮೈಸೂರು ಝೋನಿಂದ ಆನೆ ದತ್ತು ಪಡೆದ ಸಚಿವ ಸೋಮಶೇಖರ್‌

ಮೈಸೂರು ಅರಮನೆ ಮಂಡಳಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಟಿ ಸೋಮವಾರ(ST Somashekar) ಸುದ್ದಿಗೋಷ್ಠಿ ನಡೆಸಿ ದಸರಾ ಖರ್ಚುವೆಚ್ಚಗಳ ಮಾಹಿತಿ ನೀಡಿದ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಮೈಸೂರು ದಸರಾ ಆಮಂತ್ರಣ ಪತ್ರಿಕೆ, ಮುದ್ರಣ ಇತ್ಯಾದಿಗಳಿಗೆ .5,91,960, ಗಣ್ಯರು ಮತ್ತು ಕಲಾವಿದರ ಸಾರಿಗೆ ವ್ಯವಸ್ಥೆಗೆ .29,16,416, ಜಂಬೂಸವಾರಿ ಮೆರವಣಿಗೆಗೆ . 37,50,772, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಕಲಾವಿದರ ಸಂಭಾವನೆಗೆ . 1,03,64,272 ಖರ್ಚಾಗಿದೆ ಎಂದು ತಿಳಿಸಿದರು.

ಇನ್ನು ಸ್ತಬ್ಧ ಚಿತ್ರ ನಿರ್ಮಾಣಕ್ಕೆ 18,85,102, ದಸರಾ ಕಾರ್ಯಕ್ರಮಗಳ ವೇದಿಕೆ ಮತ್ತು ವಿದ್ಯುತ್‌ ಕಾಮಗಾರಿಗಳ ವ್ಯವಸ್ಥೆಗಾಗಿ . 93.80 ಲಕ್ಷ, ವೆಬ್‌ ಕ್ಯಾಸ್ಟಿಂಗ್‌ ಗೆ . 11,09,200 ವೆಚ್ಚವಾಗಿದೆ. ದೂರದರ್ಶನದಲ್ಲಿ ಜಂಬೂಸವಾರಿ ನೇರಪ್ರಸಾರ ಮಾಡಿದ್ದಕ್ಕೆ . 6,22,513, ದಸರಾ ಆನೆಗಳು ಹಾಗೂ ಕಾವಾಡಿಗರ ವಿಮೆಗೆ 24 ಸಾವಿರ ಭರಿಸಲಾಗಿದೆ ಎಂದು ಅವರು ವಿವರಿಸಿದರು.

ದಸರಾ ಸಂಬಂಧ ಉಪ ಸಮಿತಿ ಸಭೆಗೆ ಲೇಖನ ಸಾಮಾಗ್ರಿಗೆ 3245, ಉನ್ನತ ಮಟ್ಟದ ಸಮಿತಿ ಸಭೆ ಶಿಷ್ಟಾಚಾರಕ್ಕೆ ಹೋಟೆಲ್‌ ಮತ್ತು ಇತರೆ ವೆಚ್ಚಗಳಿಗೆ  47250, ದಸರಾ ಸಂಬಂಧ ನಡೆದ ವಿವಿಧ ಸಭೆಗಳಿಗೆ ಕಾಫಿ, ಟೀಗೆ 40,878, ಬಿಎಸ್‌ಎನ್‌ಎಲ್‌ಗೆ . 78,668, ಉನ್ನತ ಮಟ್ಟದ ಸಭೆಗೆ ಮತ್ತು ವಿಶೇಷಾಧಿಕಾರಿಗಳ ಕಚೇರಿಗೆ ಲೇಖನ ಸಾಮಾಗ್ರಿ ಖರೀದಿಗೆ  90,919, ಜಂಬೂ ಸವಾರಿ ನೇರ ವೀಕ್ಷಣೆ ವಿವರಣೆ ಬಿತ್ತರಿಸಲು ಆಕಾಶವಾಣಿಗೆ 67 ಸಾವಿರ ಪಾವತಿಸಲಾಗಿದೆ. 

ದಸರಾ ಕಾರ್ಯಕ್ರಮಗಳ ಫೋಟೋ, ವೀಡಿಯೋಗ್ರಾಫಿಗೆ .95 ಸಾವಿರ, ಸ್ವಚ್ಛತೆ ನಿರ್ವಹಣೆಗೆ  10,76,072, ವಾರ್ತಾ ಇಲಾಖೆಗೆ  64,412, ದಸರಾ ರಂಗೋತ್ಸವ ಕಾರ್ಯಕ್ರಮಕ್ಕೆ ಅಂದಾಜು 10 ಲಕ್ಷ ವೆಚ್ಚವಾಗಿದೆ ಎಂದು ಅವರು ತಿಳಿಸಿದರು.

ಕಲಾವಿದರಿಗೆ ವೇದಿಕೆ ಮೇಲೆಯೇ ಸನ್ಮಾನಿಸಿ ನೇರವಾಗಿ ಚೆಕ್‌ ವಿತರಣೆ ಮಾಡಲಾಗಿದೆ. ಶಾಶ್ವತ ದೀಪಾಲಂಕಾರ ಪ್ರದರ್ಶನ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು. ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಈ ಕುರಿತು ಮುಖ್ಯಮಂತ್ರಿ ಸಭೆ ನಡೆಸಲಿದ್ದಾರೆ. ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಮೈಸೂರಿಗೆ ಶೀಘ್ರದಲ್ಲೇ ಭೇಟಿ ನೀಡಿ, 365 ದಿನ ಪ್ರವಾಸೋದ್ಯಮ ಚಟುವಟಿಕೆ ಸಂಬಂಧ ಕ್ರಮ ವಹಿಸಲಿದ್ದಾರೆ ಎಂದರು.

ಈ ಬಾರಿಯ ಮೈಸೂರು ವಿಶ್ವವಿಖ್ಯಾತ ದಸರಾ ಮಹೋತ್ಸವನ್ನು ಹಿರಿಯ ರಾಜಕೀಯ ನಾಯಕ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು  ಉದ್ಘಾಟಿಸಿದ್ದರು. ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಿದ್ದರು.

ಮೈಸೂರು ರಾಜಮನೆತನದ ಆನೆಗಳು ಗುಜರಾತ್‌ಗೆ ಶಿಫ್ಟ್
ಮೈಸೂರು ಅರಮನೆಗೂ ಕೊರೋನಾ ಎಫ್ಟೆಕ್ಟ್ ತಟ್ಟಿದ ಹಿನ್ನೆಲೆಯಲ್ಲಿ ರಾಜಮನೆತನದ 4 ಆನೆಗಳನ್ನು ಗುಜರಾತ್‌ಗೆ ಕಳುಹಿಸಲಾಗಿದೆ.30 ವರ್ಷಗಳಿಂದ ಇದ್ದ ಆನೆಗಳು ಭಾರವಾದವಾ..? ನಿರ್ವಹಣೆ ಮಾಡಲಾಗದೇ ಕೊರೋನಾ ನೆಪ ಹೇಳಲಾಗುತ್ತಿದ್ಯಾ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

Follow Us:
Download App:
  • android
  • ios