ತಿರುಪತಿ (ನ.21): ಕರ್ನಾಟಕದ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ತಿರುಪತಿ ತಿಮ್ಮಪ್ಪ ದೇಗುಲಕ್ಕೆ ಡಿಜಿಟಲ್‌ ಸ್ಯಾಟಲೈಟ್‌ ನ್ಯೂಸ್‌ ಸಂಗ್ರಹಣೆ ವ್ಯವಸ್ಥೆ (ಡಿಎಸ್‌ಎನ್‌ಜಿ)ಯ ವಾಹನವನ್ನು ದೇಣಿಗೆಯಾಗಿ ನೀಡಿದ್ದಾರೆ.

ಯಾವುದೇ ಕಾರ್ಯಕ್ರಮಗಳ ನೇರಪ್ರಸಾರ ಮತ್ತು ಸಂಪೂರ್ಣ ಎಡಿಟಿಂಗ್‌ಗೆ ಅವಕಾಶ ಮಾಡಿಕೊಡುವ ಈ ವಾಹನ 1.2 ಕೋಟಿ ರು. ಮೌಲ್ಯದ್ದಾಗಿದೆ. ಈ ಅತ್ಯಾಧುನಿಕ ತಂತ್ರಜ್ಞಾನದ ಹೊಂದಿರುವ ಈ ವಾಹನವನ್ನು ಟಿಟಿಡಿ ನಿರ್ವಹಣೆಯಲ್ಲಿರುವ ಶ್ರೀ ವೆಂಕಟೇಶ್ವರ ಭಕ್ತಿ ಟೀವಿ ಚಾನೆಲ್‌ಗಾಗಿ ಬಳಕೆ ಮಾಡಲಾಗುವುದು ಎನ್ನಲಾಗಿದೆ. 

ಸಿಎಂ ಯಡಿಯೂರಪ್ಪ ಮುಂದೆ ಬೇಡಿಕೆ ಇಟ್ಟ ರಾಮುಲು :ಕುತೂಹಲದ ಭೇಟಿ

ಶುಕ್ರವಾರ ಸಚಿವ ಶ್ರೀರಾಮುಲು ಅವರ ಪರವಾಗಿ ಪ್ರತಿನಿಧಿಯೊಬ್ಬರು ತಿರುಮಲ ತಿರುಪತಿ ದೇಗುಲ ಆಡಳಿತ ಮಂಡಳಿಯ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮ ರೆಡ್ಡಿ ಅವರಿಗೆ ಹಸ್ತಾಂತರಿಸಿದರು.

ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಭಕ್ತರು ದೇಣಿಗೆ ನೀಡುತ್ತಾರೆ. ಹಾಗೆ ರಾಜಕಾರಣಿಗಳೂ ಕೋಟಿ ಕೋಟಿ ಮೌಲ್ಯದ ದೇಣಿಗೆಗಳನ್ನು ಈ ಹಿಂದೆಯೂ ನೀಡಿದ್ದಾರೆ.