ಶೃಂಗೇರಿ ಕ್ಷೇತ್ರದ ಮತ ಮರು ಎಣಿಕೆ, 2023ರಲ್ಲಿ ಸೋಲು ಕಂಡಿದ್ದ ಬಿಜೆಪಿ ಅಭ್ಯರ್ಥಿ ಜೀವರಾಜ್‌ಗೆ ಈಗ ಗೆಲುವು, 2023ರ ವಿಧಾನಸಭಾ ಚುನಾವಣೆ ವೇಳೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿಡಿ ರಾಜೇಗೌಡ ಗೆಲುವು ಕಂಡಿದ್ದರು.
ಚಿಕ್ಕಮಗಳೂರು (ಮೇ.03) ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಮರು ಎಣಿಕೆ ಇದೀಗ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ., 2023ರ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿಡಿ ರಾಜೇಗೌಡ ಗೆಲುವು ದಾಖಲಿಸಿದ್ದರು. ಈ ಮೂಲಕ ಟಿಡಿ ರಾಜೇಗೌಡ ಶಾಸಕರಾಗಿದ್ದರು. ಆದರೆ ಮತ ಎಣಿಕೆಯಲ್ಲಿ ಟ್ಯಾಂಪರಿಂಗ್ ಆಗಿದೆ ಎಂಬ ಆರೋಪದಿಂದ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಹೈಕೋರ್ಟ್ ಸೂಚನೆಯಂತೆ ಅಂಚೆ ಮತಗಳ ಮರು ಎಣಿಕೆ ನಡೆದಿದ್ದು, 2023ರಲ್ಲಿ ಸೋಲು ಕಂಡಿದ್ದ ಬಿಜೆಪಿ ಅಭ್ಯರ್ಥಿ ಡಿಎನ್ ಜೀವರಾಜ್ ಗೆಲುವು ದಾಖಲಿಸಿದ್ದಾರೆ. ಬಿಜೆಪಿ ಸಂಭ್ರಮ ಜೋರಾಗಿದೆ.
2023 ಇವಿಎಂನಲ್ಲಿ ಗೆದ್ದರೂ 2026ರ ಅಂಚೆ ಮತದಾನದಲ್ಲಿ ಸೋಲು ಅನುಭವಿಸಿದ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಇದೀಗ ಮರು ಎಣಿಕೆಯಲ್ಲಿ ಸೋಲು ಕಂಡಿದ್ದಾರೆ. ಇತ್ತ ಇವಿಎಂನಲ್ಲಿ ಸೋತು ಅಂಚೆ ಮತದಾನದ ಮೂಲಕ ಜೀವರಾಜ್ ಗೆಲುವು ದಾಖಲಿಸಿದ್ದಾರೆ.
2023ರ ಫಲಿತಾಂಶ ಇವಿಎಂನಲ್ಲಿ ಒಟ್ಟು ಮತಗಳು
ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ : ಒಟ್ಟು ಮತಗಳು : 58602
ಡಿ ಎನ್ ಜೀವರಾಜ್ ಪಡೆದ ಮತಗಳು : 58278
ಫಲಿತಾಂಶ: 324 ಟಿ ಡಿ ರಾಜೇಗೌಡರ ಅಂತರ ಮತಗಳಿಂದ ಗೆಲುವು
2026ರ ಅಂಚೆ ಮತ ಮರು ಎಣಿಕೆ ಫಲಿಶಾಂತ (1822 ಮತಗಳಲ್ಲಿ)
ಡಿ ಎನ್ ಜೀವರಾಜ್ ;690 ಮತಗಳು
ಟಿ ಡಿ ರಾಜೇಗೌಡ. : 314 ಮತಗಳು
ಒಟ್ಟು :376 ಜೀವರಾಜ್ ಅಂತರದ ಮತಗಳು
2026ರಲ್ಲಿ ಇವಿಎಂ ಮತ್ತು ಅಂಚೆ ಮತಗಳ ಫಲಿತಾಂಶ
ರಾಜೇಗೌಡರ ಅಂತರ :324 ( ಇವಿಎಂನಲ್ಲಿ )
ಜೀವರಾಜ್ ಅಂತರ. : 376
ಒಟ್ಟು ಬಿಜೆಪಿ ಅಭ್ಯರ್ಥಿ ಜೀವರಾಜ್ 52 ಮತಗಳ ಅಂತರದಿಂದ ಗೆಲುವು
ಗೆಲುವಿನ ಬಳಿಕ ಮಾತನಾಡಿರುವ ಡಿಎನ್ ಜೀವರಾಜ್, ಕಳೆದ ಮೂರು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ಕೊನೆಗೂ ನ್ಯಾಯ ಸಿಕ್ಕಿದೆ. ಕಾಂಗ್ರೆಸ್ ನಾಯಕರು ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಡಿಎನ್ ಜೀವರಾಜ್ ಹೇಳಿದ್ದಾರೆ.


