ಕೊಲಂಬಿಯಾದಲ್ಲಿ ಶಾಂತಿ ಸ್ಥಾಪನೆಯ 10ನೇ ವಾರ್ಷಿಕೋತ್ಸವದಂದು ರವಿಶಂಕರ್ ಗುರೂಜಿ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದರು. ಶಾಂತಿ ಸಂಧಾನದಲ್ಲಿ ಗುರೂಜಿಗಳ ಪಾತ್ರವನ್ನು ಸ್ಮರಿಸಲಾಯಿತು ಹಾಗೂ ಯೋಗದ ಮಹತ್ವವನ್ನು ಒತ್ತಿ ಹೇಳಲಾಯಿತು.
ಕೊಲಂಬಿಯಾದ ಬೊಗೋಟಾದ ಐಕಾನಿಕ್ ಪ್ಲಾಜಾ ಲಾ ಸಂತಾ ಮಾರಿಯಾದಲ್ಲಿ ಸಾವಿರಾರು ಜನರು ಸೇರಿ, ರವಿಶಂಕರ ಗುರೂಜಿಯೊಂದಿಗೆ 11ನೇ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಿದರು. ಕೊಲಂಬಿಯಾ ದೇಶದಲ್ಲಿ ಶಾಂತಿ ಸ್ಥಾಪನೆಯಾಗಿ 10 ವರ್ಷ ತುಂಬಿದ ಸುಸಂದರ್ಭ. ಸುಮಾರು 50 ವರ್ಷಗಳಿಗೂ ಹೆಚ್ಚು ಕಾಲ ನಡೆದ ರಕ್ತಪಾತದ ನಂತರ ಕೊಲಂಬಿಯಾ ಸರ್ಕಾರ ಮತ್ತು ಫಾರ್ಕ್ (FARC) ಬಂಡುಕೋರರು, ಶಾಂತಿ ಒಪ್ಪಂದವಾದ ಮಹತ್ವದ ಘಳಿಗೆ ಇದಾಗಿತ್ತು. ಈ ಶಾಂತಿ ಸಂಧಾನದ ಪ್ರಕ್ರಿಯೆಯಲ್ಲಿ ರವಿಶಂಕರ್ ಗುರೂಜಿ ಪ್ರಮುಖ ಪಾತ್ರವಹಿಸಿದ್ದರು.
ಬೊಗೋಟಾದ ಯೋಗ ದಿನಾಚರಣೆಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ಯೋಗವೆಂದರೆ ಕೇವಲ ಶಾರೀರಿಕ ವ್ಯಾಯಾಮವಲ್ಲ. ಅದು ಮನಸ್ಸಿನ ಸ್ಥಿತಿಯಾಗಿದೆ. ಪ್ರಥಮ ಯೋಗ ಪ್ರೋಟೋಕಾಲ್ ರೂಪಿಸುವ ಸಮಿತಿಯ ನೇತೃತ್ವವನ್ನು ತಮ್ಮದಾಗಿತ್ತು. ಇಂದು ವಿಶ್ವದ ಶೇ.31ರಷ್ಟು ಜನರು ಈ ಪ್ರೋಟೋಕಾಲ್ ಅನುಸರಿಸುತ್ತಿದ್ದಾರೆ ಎಂಬುದು ಸಂತೋಷದ ವಿಚಾರ. ಆದರೆ, ಮಾನಸಿಕ ಆರೋಗ್ಯದ ಕ್ಷೇತ್ರದಲ್ಲಿ ನಮ್ಮ ಕೆಲಸ ಇನ್ನೂ ಮುಕ್ತಾಯವಾಗಿಲ್ಲ. ಇದು ಪ್ರಾರಂಭವಷ್ಟೇ ಎಂದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೊಗೋಟಾ ಸಾಂಸ್ಕೃತಿಕ ಇಲಾಖೆಯ ಸಂಸ್ಕೃತಿ ಮತ್ತು ಸಂಸ್ಕೃತಿಯ ನಿರ್ವಹಣಾ ವೀಕ್ಷಣಾಲಯದ ನಿರ್ದೇಶಕರು, 'ಇತ್ತೀಚೆಗೆ ದೇಶದಲ್ಲಿ ಹೆಚ್ಚಾದ ಉದ್ವಿಗ್ನತೆಯ ನಡುವೆ, ಇಂತಹ ದಿನಾಚರಣೆ ನಮ್ಮ ಜನತೆಗೆ ಶಾಂತಿಯ ಸಂದೇಶ ನೀಡಲು ಉತ್ತಮ ಅವಕಾಶ ಎಂದು ಅಭಿಪ್ರಾಯಪಟ್ಟರು.
ಬಹುತೇಕ ಅಸಾಧ್ಯವೆಂದೇ ಭಾವಿಸಲಾದ ಕೆಲಸವನ್ನು ರವಿಶಂಕರ ಗುರೂಜಿ 2015ರಲ್ಲಿ ಕೈಗೆತ್ತಿಕೊಂಡರು. 50 ವರ್ಷಗಳಿಗಿಂತ ಹೆಚ್ಚು ಕಾಲ ನಡೆಯುತ್ತಿದ್ದ ಘೋರ ಯುದ್ಧದ ನಡುವೆ, ಅವರು ಫಾರ್ಕ್ ನಾಯಕರೊಂದಿಗೆ 3 ದಿನಗಳ ಸಂವಾದ ನಡೆಸಿ, ಅಹಿಂಸೆಯ ಮಾರ್ಗ ಸ್ವೀಕರಿಸುವಂತೆ ಪ್ರೇರೇಪಿಸಿದರು. ಈ ಸಂವಾದ ಫಲಕಾರಿಯಾಗಿ, ಫಾರ್ಕ್ ಒಂದು ವರ್ಷದ ಏಕಪಕ್ಷೀಯ ಯುದ್ಧವಿರಾಮ ಘೋಷಿಸಿದವು. ಇದು ಶಾಂತಿ ಒಪ್ಪಂದದ ದಾರಿ ತೋರಿದ ಮೊದಲ ಹೆಜ್ಜೆಯಾಗಿತ್ತು.
ಒಂದು ದಶಕದ ನಂತರ ರವಿಶಂಕರ ಗುರೂಜಿ, ಕೊಲಂಬಿಯಾಕ್ಕೆ ಮತ್ತೆ ಭೇಟಿ ನೀಡಿದ್ದು ಅವಿಸ್ಮರಣೀಯ ಕ್ಷಣವಷ್ಟೇ ಅಲ್ಲದೆ, ಅವರು ದಕ್ಷಿಣ ಅಮೆರಿಕದ ಭವಿಷ್ಯಕ್ಕೆ ಹೊಸ ದೃಷ್ಟಿಕೋನವನ್ನು ನೀಡಲು ಬಂದಿದ್ದಾರೆ. ಬೊಗೋಟಾ, ಮೆಡೆಲಿನ್ ಹಾಗೂ ಕಾರ್ಟಾಜೆನಾದಲ್ಲಿ, ಸಂಸದರು, ಉದ್ಯಮಿಗಳು ಹಾಗೂ ಅಕಾಡೆಮಿಕ್ ವ್ಯಕ್ತಿಗಳನ್ನು ಭೇಟಿಯಾಗಿ ಧ್ಯಾನದ ಶಕ್ತಿ ಪರಿಚಯಿಸಿದರು. ಕೊಲಂಬಿಯಾ ಸಂಸತ್ತಿನಲ್ಲಿಯೂ ಭಾಷಣ ಮಾಡಿ, 'ದುಃಖವಿಲ್ಲದ, ಹೆಚ್ಚು ಪ್ರೀತಿಯಿಂದ ಕೂಡಿದ, ಸಂತೋಷದ ಹಾಗೂ ಶಾಂತಿಯುತ ಜಗತ್ತನ್ನು ನಿರ್ಮಿಸುವ ಕನಸು ಕಾಣೋಣ. ಇದು ಆದರ್ಶದ ಮಾತು ಎಂದೆನಿಸಬಹುದು ಆದರೆ ಪ್ರತಿ ಬದಲಾವಣೆ ಕನಸಿನಿಂದಲೇ ಪ್ರಾರಂಭವಾಗುತ್ತದೆ' ಎಂದರು.
ಜೂನ್ 20ರಂದು, ರವಿಶಂಕರ ಗುರೂಜಿ ಅವರ ಶಿಸ್ತು ಬದ್ಧತೆ, ಸಮರ್ಪಣೆ ಮತ್ತು ಸಮಾಜಮುಖಿ ಸೇವೆಗೆ ಕೊಲಂಬಿಯಾ ದೇಶದ ಅತ್ಯುನ್ನತ ಗೌರವಗಳಲ್ಲಿ ಒಂದಾದ ‘ಬೊಲ ಬೊಲಿವರ್ ಗವರ್ನರೇಟ್ ಯ ಸಿವಿಲ್ ಮೆರಿಟ್ ಪದಕ’ವನ್ನು ನೀಡಿ ಗೌರವಿಸಲಾಯಿತು. ಕಾರ್ಟಾಜೆನಾ ಡಿ ಇಂಡಿಯಾಸ್‌ನ ಮೇಯರ್ ಡುಮೆಕ್ ಟುರ್ಬೆ ಪಜ್ ಕೂಡ ಗುರುದೇವರ ವಿಶ್ವಶಾಂತಿ ಕಾರ್ಯಗಳಿಗೆ ಅಭಿನಂದನೆ ಸಲ್ಲಿಸಿದರು.
2016ರ ನವದೆಹಲಿಯ ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಿದ್ದ ಚಲನಚಿತ್ರ ನಿರ್ದೇಶಕಿ ಲಿಕಾ ಗವೇಯಿಶ್, 'ನನ್ನ ಸಂಗಾತಿ ಆಗಾಗ್ಗೆ ಯುದ್ಧಪ್ರದೇಶಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ಆ ಹಿನ್ನಲೆಯಲ್ಲಿ ಶಾಂತಿಯ ಪ್ರತಿಯೊಂದು ಹೆಜ್ಜೆ ಎಷ್ಟು ಅಪಾರ ಎನಿಸುತ್ತದೆ. ರವಿಶಂಕರ ಗುರೂಜಿಯವರ ಶಾಂತಿ ಕಾರ್ಯಗಳನ್ನು ಕೇಳಲು ಹೃದಯ ಸ್ಪರ್ಶಿಯಾಗಿತ್ತು. ಜಗತ್ತಿಗೆ ಇಂತಹ ಸೇವೆಯನ್ನು ಮಾಡಿದವರಿಗೆ ನಾವು ಕೃತಜ್ಞರಾಗಿರಬೇಕು' ಎಂದು ಹೇಳಿದರು.
