Asianet Suvarna News Asianet Suvarna News

Belagavi: ಹೃದಯಾಘಾತದಿಂದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಲಿಂಗೈಕ್ಯ!

ತಾಲೂಕಿನ ಅರಭಾವಿಮಠದ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ. ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ (64) , ಮಠದಲ್ಲಿರುವಾಗಲೇ ಸ್ವಾಮೀಜಿಗೆ ಎದೆನೋವು ಕಾಣಿಸಿಕೊಂಡಿತ್ತು.

Sri Siddalinga Mahaswamiji passed away due to heart attack gvd
Author
First Published Oct 16, 2023, 12:30 AM IST

ಮೂಡಲಗಿ (ಅ.16): ತಾಲೂಕಿನ ಅರಭಾವಿಮಠದ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ. ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ (64) , ಮಠದಲ್ಲಿರುವಾಗಲೇ ಸ್ವಾಮೀಜಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಸೇವಕರು ಗೋಕಾಕ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಗೋಕಾಕದ ಖಾಸಗಿ ಆಸ್ಪತ್ರೆಯಲ್ಲಿ ಸ್ವಾಮೀಜಿ ನಿಧನರಾಗಿದ್ದಾರೆ. ಸ್ವಾಮೀಜಿ ನಿಧನದಿಂದ ಅಪಾರ ಭಕ್ತ ಸಮೂಹ ಶೋಕಸಾಗರಲ್ಲಿ ಮುಳುಗಿದೆ. ಇನ್ನು ಬೆಳಗಾವಿಯ ಸುಪ್ರಸಿದ್ಧ ಮಠಗಳಲ್ಲಿ ಅರಭಾವಿಯ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠವೂ ಒಂದ.

ಜಡಿಮಠದ ಶಿವಾಚಾರ್ಯ ಲಿಂಗೈಕ್ಯ: ನವಲಗುಂದ ತಾಲೂಕಿನ ಮೊರಬ ಗ್ರಾಮದ ಜಡಿಮಠದ ಪೀಠಾಧೀಶ ಶ್ರೀ ಸೋಮಶೇಖರ ಬಸಲಿಂಗಯ್ಯ ಶಿವಾಚಾರ್ಯರು (53) ಶುಕ್ರವಾರ ಲಿಂಗೈಕ್ಯರಾದರು. ಮೊರಬ ಗ್ರಾಮದಲ್ಲೇ ಅಂತ್ಯಕ್ರಿಯೆ ನಡೆಯಿತು. ಶಿರಕೋಳ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು, ಸುಳ್ಳ ಹಿರೇಮಠದ ಶ್ರೀಗಳು, ಮೊರಬದ ಮಾತೋಶ್ರೀ ಗಾಯಿತ್ರಮ್ಮ, ಸಿದ್ಧಾರೂಢ ಮಠದ ಮಲ್ಲಮ್ಮತಾಯಿ, ಹೂಲಿಮಠದ ಉಮೇಶ್ವರ ಶಿವಾಚಾರ್ಯರು, ವೀರಕ್ತಮಠದ ವೀರಯ್ಯ ಸ್ವಾಮೀಜಿ , ಹಿರೇಮಠದ ಆನಂದಸ್ವಾಮೀಜಿ, ಭಕ್ತಾದಿಗಳು ಮೊರಬ ಗ್ರಾಮದಲ್ಲಿ ನಡೆದ ಶ್ರೀಗಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಮೊದಲ ಸ್ಪರ್ಧಿ ಸ್ನೇಕ್ ಶ್ಯಾಮ್!

ಆಧ್ಯಾತ್ಮಿಕ ಲೋಕದ ಅವಧೂತ ಇನ್ನಿಲ್ಲ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪುಣ್ಯಕ್ಷೇತ್ರ, ತೀರ್ಥಕ್ಷೇತ್ರಗಳನ್ನು ಸುತ್ತಾಡಿ, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಪಿಲೇಶ್ವರ ಕೊಳ್ಳದಲ್ಲಿ ತಪವಗೈದು, ಸಗರ ನಾಡಿನ ಪುಣ್ಯಭೂಮಿಯ ದೋರನಹಳ್ಳಿ ಗ್ರಾಮವನ್ನು ತನ್ನ ಕರ್ಮಸ್ಥಾನವನ್ನಾಗಿ ಮಾಡಿಕೊಂಡ ಮಾಹಾಯೋಗಿ, ಮಾತೋಶ್ರೀ ದೇವಕ್ಕೆಮ್ಮನವರ ವರಪುತ್ರ ಪರಮಪೂಜ್ಯ ರಮಾನಂದ ಅವಧೂತರು ಭಕ್ತರನ್ನುದ್ದರಿಸಲು ಬಂದ ಮಹಾನ್ ಸಂತ. ಇಂದು ಅಪಾರ ಭಕ್ತ ವೃಂದವನ್ನು ಕತ್ತಲಲ್ಲಿ ನಿಲ್ಲಿಸಿ ಸೂರ್ಯನಂತೆ ಮರೆಯಾಗಿ ಹೋದರು. ಸರಳ ಸಾತ್ವಿಕ ಸಂತನನ್ನು ಕಳೆದುಕೊಂಡ ದೋರನಹಳ್ಳಿಯಲ್ಲಿ ಸ್ಮಶಾನ ಮೌನ ಆವರಿಸಿದೆ.

ಜೀವಂತವಿರುವಾಗಲೇ ಸಮಾಧಿ ನಿರ್ಮಾಣ: ಸಿದ್ದಾರೂಢ ದೇವಾಲಯ ಕಟ್ಟುವ ವೇಳೆ, ದೇಹ ತ್ಯಾಗ ಮಾಡಿದಾಗ ಇಲ್ಲೇ ಸಮಾಧಿ ಮಾಡಬೇಕೆನ್ನುವ ಸಂಕಲ್ಪದೊಂದಿಗೆ ತಾವು ಜೀವಂತವಿರುವಾಗಲೇ ನೆಲಮಾಳಿಗೆಯಲ್ಲಿ ಸಮಾಧಿಗಾಗಿ ಕೋಣೆಯನ್ನೇ ನಿರ್ಮಾಣ ಮಾಡಿದ್ದರು. ಸಿದ್ಧಾರೂಢ ಮಠದಲ್ಲೆ ಜ್ಞಾನ ದಾಸೋಹ ಸಂತ ರಮಾನಂದ ಅವಧೂತರ ಅಂತ್ಯಸಂಸ್ಕಾರವನ್ನು ಧಾರ್ಮಿಕ ವಿಧಿ-ವಿಧಾನಗಳ ಮೂಲಕ ನೆರವೇರಿಸಲಾಯಿತು.

ಬಿಜೆಪಿಯೇ ಮುಳುಗುತ್ತಿರುವ ಹಡಗು: ಎಂ.ಪಿ.ರೇಣುಕಾಚಾರ್ಯ

ಶ್ರೀಗಳ ಪೂರ್ವಾಶ್ರಮ: ಬೆಳಗಾವಿ ಜಿಲ್ಲೆಯ ರಾಮದುರ್ಗದ ದೇವಾಂಗ ಸಮುದಾಯದ ಸಾತ್ವಿಕ ದಂಪತಿಗಳಾದ ಲೋಕಪ್ಪ ಸೂರಮ್ಮ ದಂಪತಿಗಳ ಉದರದಲ್ಲಿ 1936ರಲ್ಲಿ ಜನಿಸಿದ ಇವರ ಮೂಲ ಹೆಸರು ರಾಮಚಂದ್ರ ಇವರ ಬಾಲ್ಯ ಜೀವನ ಮತ್ತು ಪ್ರಾಥಮಿಕ ಶಿಕ್ಷಣ ರಾಮದುರ್ಗದಲ್ಲಿ ಮುಗಿಸಿದರು. ಇವರು ಅಕ್ಕನ ಮಗಳಾದ ಹೂವಮ್ಮ ಎನ್ನುವ ಸಾಧ್ವಿಯನ್ನು 1952 ಮದುವೆಯಾಗಿ ಚಿಕ್ಕದಾಗಿ ಸಂಸಾರದಲ್ಲಿ ದಾಂಪತ್ಯದ ಬದುಕಿನಲ್ಲಿ ನಾರಾಯಣ, ಸಿದ್ದರಾಮ ಮತ್ತು ರುಕ್ಮಿಣಿ ಎನ್ನುವ ಮೂರು ಮಕ್ಕಳನ್ನು ಪಡೆದು ಸಂಸಾರ ನೌಕೆಯಲ್ಲಿ ಪ್ರಯಾಣ ಬೆಳೆಸಿ, ರಾಮಚಂದ್ರರಿಗೆ ಚಿಕ್ಕಂದಿನಿಂದಲೂ ದೈವಿಭಕ್ತಿ ಸಾಧು ಸಂತರನ್ನು ಕಂಡರೆ ಇನ್ನಿಲ್ಲದ ಪ್ರೀತಿ. 15 ವರ್ಷ ದಾಂಪತ್ಯ ಜೀವನ ನಡೆಸಿ ಇವರ ಮನಸ್ಸು ದಿನದಿಂದ ದಿನಕ್ಕೆ ಆಧ್ಯಾತ್ಮಿಕ ಕಡೆಗೆ ವಾಲುತ್ತಿತ್ತು. ಇವರು ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಗಳು. ಸಂಸಾರ ತೊರೆದು ದೇಶ ಸಂಚಾರಿಗಳಾಗಿ ನಡೆದವರು.

Follow Us:
Download App:
  • android
  • ios