* ಮಾನನಷ್ಟ ಕೇಸ್ ಹಾಕಿದ್ದಕ್ಕೆ ಬಿಡಿಎ ಅಧ್ಯಕ್ಷರಿಂದ ದ್ವೇಷ: ಬಿಡಿಎ ದಲ್ಲಾಳಿ ಗಂಭೀರ ಆರೋಪ* ನಾವು ರೈತರ ಮಕ್ಕಳು: ಅಶ್ವತ್ಥ್* ವಿಶ್ವನಾಥ್ ವಿರುದ್ಧ ನ್ಯಾಯಾಲಯದಲ್ಲಿ ನಾನು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ
ಬೆಂಗಳೂರು(ಮಾ.23): ನನ್ನ ಮೇಲಿನ ಎಸಿಬಿ ದಾಳಿಗೆ(ACB Raids) ಬಿಡಿಎ ಅಧ್ಯಕ್ಷರೂ ಆಗಿರುವ ಶಾಸಕ ಎಸ್.ಆರ್.ವಿಶ್ವನಾಥ್(SR Vishwanath) ಹಾಗೂ ಖಾಸಗಿ ಸುದ್ದಿವಾಹಿನಿಯೊಂದರ ಮುಖ್ಯಸ್ಥರ ಚಿತಾವಣೆಯೇ ಕಾರಣ. ಮೂರು ವರ್ಷದಿಂದ ನಾನು ಬಿಡಿಎಗೆ ಕಾಲಿಟ್ಟಿಲ್ಲ ಎಂದು ಬಿಡಿಎ ದಲ್ಲಾಳಿ ಮೋಹನ್(Mohan) ಗಂಭೀರ ಆರೋಪ ಮಾಡಿದ್ದಾರೆ.
ಎಸಿಬಿ ದಾಳಿ ಹಿನ್ನೆಲೆಯಲ್ಲಿ ಮಂಗಳವಾರ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡಿಎ ಅಧ್ಯಕ್ಷ ವಿಶ್ವನಾಥ್ ವಿರುದ್ಧ ನ್ಯಾಯಾಲಯದಲ್ಲಿ(Court) ನಾನು ಮಾನನಷ್ಟDefamation) ಮೊಕದ್ದಮೆ ದಾಖಲಿಸಿದ್ದೇನೆ. ಈ ದ್ವೇಷಕ್ಕೆ ಒಂದೂವರೆ ವರ್ಷದಿಂದ ಟಾರ್ಗೆಟ್ ಮಾಡಿ ನನಗೆ ವಿಶ್ವನಾಥ್ ಮತ್ತು ಸುದ್ದಿವಾಹಿನಿಯ ಮುಖ್ಯಸ್ಥರು ತೊಂದರೆ ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.
ACB Raids: ಬೆಂಗ್ಳೂರಲ್ಲಿ ಅಖಾಡಕ್ಕಿಳಿದ ಎಸಿಬಿ ಅಧಿಕಾರಿಗಳು
ವಿಶ್ವನಾಥ್ ಪಿತೂರಿ ಭಾಗವಾಗಿಯೇ ಈಗಿನ ಎಸಿಬಿ ದಾಳಿಯಾಗಿದೆ. ಹಿರಿಯ ನಾಯಕ, ಮೂರು ಬಾರಿ ಶಾಸಕನಾಗಿ ಆತ ಗೆದ್ದಿದ್ದಾನೆ. ಹೀಗಿದ್ದರೂ ನನ್ನ ಮೇಲೆ ದ್ವೇಷ ಯಾಕೆ ಎಂಬುದು ಗೊತ್ತಿಲ್ಲ? ನಾವು ಬೆಳೆದಿದ್ದೇವೆ ಎಂದು ನನ್ನ ತುಳಿಯಲು ಯತ್ನಿಸಿದ್ದಾನೆ. ಇವತ್ತಿನ ಎಲ್ಲ ಬೆಳವಣಿಗೆಗೆ ಅವರೇ ಕಾರಣರು ಎಂದು ದೂರಿದರು.
ಆ ಇಬ್ಬರೂ ಏನ್ ಮಾಡುತ್ತಾರೆ ನೋಡುತ್ತೇನೆ. ನಾನು ಕಾನೂನುಬದ್ಧವಾಗಿದ್ದೇನೆ. ಇಂಥವರು ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ. 2021ರ ಹಳೇ ಪ್ರಕರಣದಲ್ಲಿ ನನ್ನ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ನಾನು ತಪ್ಪು ಮಾಡಿದ್ದರೆ ಇಷ್ಟುದಿನಗಳು ಎಸಿಬಿಯವರು ಯಾಕೆ ಕಾಯುತ್ತಿದ್ದರು ಎಂದು ಮೋಹನ್ ಪ್ರಶ್ನಿಸಿದರು.
ನಾನು ಸಣ್ಣಪುಟ್ಟ ಬ್ಯುಸಿನೆಸ್ ಮಾಡುತ್ತೇನೆ. ಅದಕ್ಕೆ ಆದಾಯ ತೆರಿಗೆ ಪಾವತಿಸಿದ್ದೇನೆ. ನನ್ನ ಬಳಿ ನೂರು ಕೋಟಿ ಎಲ್ಲಿಂದ ಬರುತ್ತದೆ? ನನ್ನ ಮನೆಯಲ್ಲಿ ಪತ್ತೆಯಾಗಿದ್ದು ನಿನ್ನೆ ಮೊನ್ನೆ ಖರೀದಿಸಿದ ಚಿನ್ನವಲ್ಲ. ಇವತ್ತು ಚಿನ್ನಕ್ಕೆ ಬೆಲೆ ಬಂದಿದೆ. ನಾನು ಹದಿನೈದು ವರ್ಷದಿಂದ ಚಿನ್ನ ಖರೀದಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನಾನು ಬಿಡಿಎಗೆ ಮೂರು ವರ್ಷದಿಂದ ಹೋಗುತ್ತಿಲ್ಲ. ಬಿಡಿಎ(BDA) ಜತೆ ಯಾವುದೇ ವ್ಯವಹಾರ ಮಾಡಿಲ್ಲ. ನಾನು .5 ಕೋಟಿ ಆಸ್ತಿ ಹೊಂದಿದ್ದೇನೆ. ನನ್ನ ಮೇಲಿನ ಎಲ್ಲ ಆರೋಪಗಳನ್ನು ಕಾನೂನು ಪ್ರಕಾರ ಎದುರಿಸುತ್ತೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಎಸಿಬಿಗೆ ಎಲ್ಲ ದಾಖಲೆಗಳನ್ನು ಕೊಟ್ಟಿದ್ದೇನೆ ಎಂದು ಹೇಳಿದರು.
ನಾನು ತಪ್ಪು ಮಾಡಿಲ್ಲ: ತೇಜಸ್ವಿ
ನಾನು 1996ರಿಂದ ರಿಯಲ್ ಎಸ್ಟೇಟ್(Real Estate) ವ್ಯವಹಾರದಲ್ಲಿ ತೊಡಗಿದ್ದೇನೆ. ಕಾನೂನಿನ ರೀತಿಯಲ್ಲಿ ಆಸ್ತಿ ಸಂಪಾದಿಸಿದ್ದೇನೆ. ಎಸಿಬಿ ದಾಳಿ ವೇಳೆ ನನ್ನ ಮನೆಯಲ್ಲಿ ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ. ಅಧಿಕಾರಿಗಳ ತನಿಖೆಗೆ ಸಹಕರಿಸಿದ್ದೇನೆ ಎಂದು ಮತ್ತೊಬ್ಬ ಬಿಡಿಎ ದಲ್ಲಾಳಿ ತೇಜಸ್ವಿ ಹೇಳಿದ್ದಾರೆ.
ನಾವು ರೈತರ ಮಕ್ಕಳು: ಅಶ್ವತ್ಥ್
ಮುದ್ದಿನಪಾಳ್ಯದಲ್ಲಿ ನಾವು ರೈತರ ಮಕ್ಕಳು. ನಮ್ಮ ಜಮೀನು(Land) ಸಹ ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. ಅದಕ್ಕೆ ಪರಿಹಾರ ಪಡೆಯಲು ಬಿಡಿಎಗೆ ಹೋಗಿದ್ದೇನೆ. ಯಾರೋ ಬಿಡಿಎ ಅಧಿಕಾರಿಗಳು ಮಾಡೋ ತಪ್ಪಿಗೆ ನಮ್ಮನ್ನು ಹೊಣೆ ಮಾಡೋದೆಷ್ಟುಸರಿ ಎಂದು ಇನ್ನೋರ್ವ ಬಿಡಿಎ ದಲ್ಲಾಳಿ ಅಶ್ವತ್ಥ್ ಪ್ರಶ್ನಿಸಿದ್ದಾರೆ.
ದಲ್ಲಾಳಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ವಿಶ್ವನಾಥ್
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಬ್ರೋಕರ್‌ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡಿಎ ಮತ್ತು ಸಾರ್ವಜನಿಕರಿಗೆ ವಂಚನೆ ಮಾಡಿ ನಷ್ಟವನ್ನು ಉಂಟು ಮಾಡುವ ಬ್ರೋಕರ್‌ಗಳ ಮೇಲೆ ಎಸಿಬಿ ದಾಳಿ ನಡೆಸಿರುವುದು ಸ್ವಾಗತಾರ್ಹ. ನಾನು ಬಿಡಿಎ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಬಿಡಿಎ ಆವರಣದೊಳಕ್ಕೆ ಏಜೆಂಟರಿಗೆ ನಿರ್ಬಂಧ ವಿಧಿಸಿದ್ದೇನೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಏಜೆಂಟ್‌ಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ ಎಂದರು.
ACB Raids: ಬೆಂಗ್ಳೂರಲ್ಲಿ ಬೆಳ್ಳಂಬೆಳಿಗ್ಗೆ ಭ್ರಷ್ಟರ ಬೇಟೆ: 9 ಕಡೆ ದಾಳಿ
ಈ ಹಿಂದೆ ಬಿಡಿಎಗೆ ರೈತರು ಮತ್ತು ಜನಸಾಮಾನ್ಯರು ಬಂದರೆ ಯಾವುದೇ ಕೆಲಸ ಆಗುವುದಿಲ್ಲ. ಏಜೆಂಟರು ಬಂದರೆ ಕೆಲಸ ಆಗುತ್ತದೆ ಎಂಬ ಭಾವನೆ ಇತ್ತು. ಆಗಿನ ಪರಿಸ್ಥಿತಿಯೂ ಅದೇ ರೀತಿ ಇತ್ತು. ಆದರೆ, ನಾನು ಅಧ್ಯಕ್ಷನಾದ ಬಳಿಕ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದು, ಸಾರ್ವಜನಿಕರು ಮುಕ್ತವಾಗಿ ಬಿಡಿಎಗೆ ಬಂದು ಕೆಲಸ ಮಾಡಿಸಿಕೊಳ್ಳುವ ವಾತಾವರಣ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಮತ್ತಷ್ಟುಸುಧಾರಣೆಗಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸೇರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.
ಬ್ರೋಕರ್‌ಗಳ(Broker) ವಿರುದ್ಧ ನಾನು ಹೇಳಿಕೆ ಕೊಟ್ಟಿದ್ದಕ್ಕೆ ಒಬ್ಬ ಬ್ರೋಕರ್ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಆ ಬ್ರೋಕರ್ ಮೇಲೆಯೂ ಎಸಿಬಿ ದಾಳಿ ನಡೆಸಿದ್ದು, ಅವರೆಲ್ಲರ ಅಕ್ರಮಗಳೆಲ್ಲವೂ ತನಿಖೆಯಿಂದ ಹೊರಬರಲಿ ಎಂದರು.
ಇಬ್ಬರು-ಮೂವರು ಎಸ್ಕೇಪ್
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಅವರು ಏಜೆಂಟ್‌ಗಿರಿ ನಿಲ್ಲಬೇಕೆಂದು ಹೇಳಿಕೆ ನೀಡಿರುವುದಕ್ಕೆ ನನ್ನ ಸಹಮತವಿದೆ. ಏಜೆಂಟರು ಜನಸಾಮಾನ್ಯರಿಗೆ ಮತ್ತು ಬಿಡಿಎಗೆ ಕೋಟ್ಯಂತರ ರು. ಮೋಸ ಮಾಡಿದ್ದಾರೆ. ಇನ್ನೂ ಇಬ್ಬರು ಮೂವರು ಏಜೆಂಟರು ಎಸಿಬಿ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಅವರ ಮೇಲೆಯೂ ದಾಳಿ ನಡೆಸಿದರೆ ಮತ್ತಷ್ಟುಅಕ್ರಮಗಳು ಬಯಲಿಗೆ ಬರಬಹುದು ಎಂದು ವಿಶ್ವನಾಥ್ ಹೇಳಿದರು.
