ಫೋಟೋಶೂಟ್ ಮಾಡಿಸುವವರಿಗೆ ಸಂತಸದ ಸುದ್ದಿ, ಮಂಗಳೂರು ರೈಲು ನಿಲ್ದಾಣಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ

ದಕ್ಷಿಣ ರೈಲ್ವೆಯು  ರೈಲುಗಳಲ್ಲಿ ವೀಡಿಯೊಗ್ರಫಿ ಮತ್ತು ಛಾಯಾಗ್ರಹಣಕ್ಕೆ ಅವಕಾಶ ಕಲ್ಪಿಸಿದೆ. ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳಲ್ಲಿಯೂ ಕೂಡ ಈ ಅವಕಾಶ ಮಾಡಿ ಕೊಟ್ಟಿದೆ.

Southern Railway allows film shooting and photography at Mangaluru Central and Junction stations Kannada News gow

ಮಂಗಳೂರು (ಮೇ.31): ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗವು ರೈಲುಗಳಲ್ಲಿ ವೀಡಿಯೊಗ್ರಫಿ ಮತ್ತು ಛಾಯಾಗ್ರಹಣಕ್ಕೆ ಅವಕಾಶ ಕಲ್ಪಿಸಿದೆ. ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳಲ್ಲಿಯೂ ಕೂಡ ಈ ಅವಕಾಶ ಮಾಡಿ ಕೊಟ್ಟಿದೆ. ಮದುವೆ ಮತ್ತು ಇತರ ವಾಣಿಜ್ಯ ಉದ್ದೇಶಗಳಿಗಾಗಿ ಸ್ಟಿಲ್ ಫೋಟೋಗ್ರಫಿಗಾಗಿ ದಿನಕ್ಕೆ  5,000 ರೂ ಪರವಾನಗಿ ಶುಲ್ಕ  ಶೈಕ್ಷಣಿಕ ಉದ್ದೇಶಕ್ಕೆ ಪರವಾನಗಿ 2,500  ರೂ ಶುಲ್ಕ ಮತ್ತು ವೈಯಕ್ತಿಕ ಬಳಕೆಗಾಗಿ 3,500 ರೂ ಶುಲ್ಕ ವಿಧಿಸಲಾಗಿದೆ.

ರೈಲು ನಿಂತಾಗ ಅಥವಾ ಚಲಿಸುವಾಗ ವಾಣಿಜ್ಯ ಉದ್ದೇಶಕ್ಕಾಗಿ ಸ್ಟಿಲ್ ಫೋಟೋಗ್ರಫಿಗಾಗಿ ದಿನಕ್ಕೆ  1,500 ರೂ ಪರವಾನಗಿ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಶೈಕ್ಷಣಿಕ ಉದ್ದೇಶಕ್ಕಾಗಿ  ಪರವಾನಗಿ ಶುಲ್ಕ  750 ರೂ ಮತ್ತು ವೈಯಕ್ತಿಕ ಬಳಕೆಗಾಗಿ ಶುಲ್ಕವು ದಿನಕ್ಕೆ 1,000 ರೂ. ನಿಗದಿಪಡಿಸಲಾಗಿದೆ. ರೈಲು ನಿಲ್ದಾಣದಲ್ಲಿ ಮತ್ತು ರೈಲಿನಲ್ಲಿ ಸ್ಟಿಲ್ ಫೋಟೋಗ್ರಫಿಯ ಸಂಯೋಜನೆಯನ್ನು ಒಳಗೊಂಡಿದ್ದರೆ. ಅದಕ್ಕೆ ಬೇರೆ ರೀತಿಯ ಶುಲ್ಕ ವಿಧಿಲಾಗುತ್ತದೆ.

ಕೊಟ್ಟೂರು ಮೂಲಕ ವಿಶೇಷ ರೈಲು ಓಡಾಟ ಆರಂಭ, ರಾಜ್ಯದ ಯಾವೆಲ್ಲ ಜಿಲ್ಲೆಯಲ್ಲಿ ಹಾದು ಹೋಗಲಿದೆ ಈ ಟ್ರೈನ್

 ಫೋಟೋಗ್ರಫಿಯ ತೆಗೆಯಲು ಉದ್ದೇಶಿಸಿದ ದಿನಾಂಕಕ್ಕಿಂತ ಏಳು ದಿನಗಳ ಮೊದಲು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಅನುಮತಿ ಕೋರಿ ಅರ್ಜಿಗಳನ್ನು ಸಲ್ಲಿಸಬೇಕು. ರೋಲಿಂಗ್ ಸ್ಟಾಕ್ ಗಳಲ್ಲಿ ಸ್ಟಿಲ್ ಫೋಟೋಗ್ರಫಿಗೆ ಯಾವುದೇ ಅನುಮತಿಯನ್ನು ನೀಡಲಾಗುವುದಿಲ್ಲ. ಅಂದರೆ ರೈಲ್ವೆ ವರ್ಕ್‌ಶಾಪ್, ಅಥವಾ ಕೋಚಿಂಗ್ ಡಿಪೋ, ಅಥವಾ ಕೋಚಿಂಗ್ ಯಾರ್ಡ್ ಅಥವಾ ಗೂಡ್ಸ್ ಯಾರ್ಡ್‌ನಲ್ಲಿ ಸ್ಟಿಲ್ ಫೋಟೋಗ್ರಫಿ ತೆಗೆದುಕೊಳ್ಳಲು ಯಾವುದೇ ಅನುಮತಿಯನ್ನು ನೀಡಲಾಗುವುದಿಲ್ಲ. ಚಾಲನೆಯಲ್ಲಿರುವ ಇಂಜಿನ್‌ಗಳ ಬಳಿ ಅಥವಾ ಫುಟ್‌ಬೋರ್ಡ್ ಅಥವಾ ರೈಲಿನ ಮೇಲ್ಛಾವಣಿಯಲ್ಲಿ ಪ್ರಯಾಣಿಸುವಾಗ ಯಾವುದೇ ಛಾಯಾಗ್ರಹಣವನ್ನು ತೆಗೆದುಕೊಳ್ಳುವಂತಿಲ್ಲ.

ಗಮನಿಸಿ, ಜೂ. 1ರಂದು ಕನ್ಯಾಕುಮಾರಿ ಎಕ್ಸ್‌ಪ್ರೆಸ್‌ ಹಾಗೂ ತಿರುಪತಿ ಡೈಲಿ ಎಕ್ಸ್‌ಪ್ರೆಸ್‌ ಸಂಚಾರ ವಿಳಂಬ

ಸ್ಟಿಲ್ ಛಾಯಾಗ್ರಹಣವು ರೈಲ್ವೆ ಆವರಣ ಮತ್ತು ನಿರ್ದಿಷ್ಠ ರೈಲುಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಅರ್ಜಿದಾರರು ಸಂಬಂಧಿತ ಸುರಕ್ಷತೆ ಮತ್ತು ಭದ್ರತಾ ನಿಯಮಗಳನ್ನು ಕಡ್ಡಾಯವಾಗಿ ಗಮನಿಸಬೇಕು. ಅನುಮತಿಯನ್ನು ಪಡೆದಿರುವ ವ್ಯಕ್ತಿಗಳು ರೈಲ್ವೆ ಆವರಣದಲ್ಲಿ ಅಥವಾ ರೈಲಿನಲ್ಲಿ ಪ್ರಯಾಣಿಸುವಾಗ ಅಗತ್ಯ ಪ್ರಯಾಣ ಪ್ರಾಧಿಕಾರ ಅಥವಾ ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಹೊಂದಿರಬೇಕು. ಛಾಯಾಗ್ರಹಣವನ್ನು ರೈಲ್ವೆ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಕೈಗೊಳ್ಳಬೇಕು.

Latest Videos
Follow Us:
Download App:
  • android
  • ios