ಸಂಸದ ಚೌಟ ಪತ್ರಕ್ಕೆ ಸ್ಪಂದನೆ, ರಸ್ತೆ ಸಂಪರ್ಕ ಕಡಿತ ಬೆನ್ನಲ್ಲೇ ಬೆಂಗಳೂರು-ಮಂಗಳೂರು ಹೆಚ್ಚುವರಿ ರೈಲು ಸಂಚಾರ!
ರಸ್ತೆ ಸಂಪರ್ಕ ಕಡಿತ ಹಿನ್ನೆಲೆ ಹೆಚ್ಚುವರಿ ರೈಲು ಸೇವೆ ಒದಗಿಸುವಂತೆ ಸಂಸದ ಚೌಟ ಬರೆದ ಪತ್ರಕ್ಕೆ ರೈಲ್ವೇ ಇಲಾಖೆ ಸ್ಪಂದನೆ ನೀಡಿದೆ. ಬೆಂಗಳೂರು-ಮಂಗಳೂರು ಮಧ್ಯೆ ಹೆಚ್ಚುವರಿ ರೈಲು ಓಡಿಸಲು ಆದೇಶಿಸಲಾಗಿದೆ.
ಮಂಗಳೂರು (ಜು.19): ಕರಾವಳಿ, ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಹಿನ್ನೆಲೆ ಮಂಗಳೂರು-ಉಡುಪಿ ಭಾಗಗಳಿಗೆ ಬೆಂಗಳೂರಿನಿಂದ ಸಂಪರ್ಕ ಕಡಿತಗೊಂಡಿದೆ. ಗುಡ್ಡ ಕುಸಿತದಿಂದ ಮಂಗಳೂರು-ಬೆಂಗಳೂರು ನಡುವೆ ರಸ್ತೆ ಸಂಪರ್ಕ ಕಡಿತ ಹಿನ್ನೆಲೆ ಹೆಚ್ಚುವರಿ ರೈಲು ಸೇವೆ ಒದಗಿಸುವಂತೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಬರೆದ ಪತ್ರಕ್ಕೆ ರೈಲ್ವೇ ಇಲಾಖೆ ಸ್ಪಂದನೆ ನೀಡಿದೆ. ಬೆಂಗಳೂರು-ಮಂಗಳೂರು ಮಧ್ಯೆ ಹೆಚ್ಚುವರಿ ರೈಲು ಓಡಿಸಲು ಆದೇಶಿಸಲಾಗಿದೆ.
ಶಿರಾಡಿ ಘಾಟ್ ಸಂಪೂರ್ಣ ಬಂದ್ ಆಗಿದ್ದು, ಮಡಿಕೇರಿ ಹೆದ್ದಾರಿ ರಾತ್ರಿ ವೇಳೆ ಬಂದ್ ಮಾಡಲಾಗಿದೆ. ಸದ್ಯ ಏಕೈಕ ತೆರೆದಿರುವ ಚಾರ್ಮಾಡಿ ಹೆದ್ದಾರಿಯಲ್ಲಿಯೂ ಭಾರೀ ಟ್ರಾಫಿಕ್ ಜಾಂ ಇದೆ. ಈ ಹಿನ್ನೆಲೆ, ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟರು ರೈಲ್ವೇ ಇಲಾಖೆಗೆ ಮಂಗಳೂರು-ಬೆಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆ ಒದಗಿಸುವಂತೆ ಪತ್ರ ಬರೆದಿದ್ದಾರೆ. ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಮತ್ತು ಮೈಸೂರು ಡಿಆರ್‌ಎಮ್ ಅವರಿಗೆ ಕಳುಹಿಸಿದ ಈ ಪತ್ರದ ಮೇಲೆ ಸ್ಪಂದನೆ ಆಗಿದ್ದು, ಹೆಚ್ಚುವರಿ ರೈಲು ಸೇವೆಯನ್ನು ತುರ್ತಾಗಿ ಪ್ರಾರಂಭಿಸಲು ಆದೇಶಿಸಲಾಗಿದೆ.
ವರುಣಾರ್ಭಟಕ್ಕೆ ಬೆಂಗಳೂರಿನ ಸಂಪರ್ಕ ಕಡಿದುಕೊಂಡ ಮಂಗಳೂರು, ಯಾರ್ ಕೇಳ್ತ ...
ಸಂಸದರ ಪತ್ರಕ್ಕೆ ತುರ್ತಾಗಿ ಕೆಲವೇ ಗಂಟೆಗಳಲ್ಲಿ ಸ್ಪಂದಿಸಿದ ರೈಲ್ವೆ ಇಲಾಖೆಯು ನಾಲ್ಕು ದಿನಗಳ ಕಾಲ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಹಾಗೂ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಿಂದ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ವಿಶೇಷ ರೈಲನ್ನು ನೀಡಿ ಆದೇಶ ನೀಡಿದೆ.
ರಸ್ತೆ ಸಂಪರ್ಕ ಕಡಿತದಿಂದ ಉಂಟಾದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ವಿಶೇಷ ರೈಲನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಜನರ ಅವಶ್ಯಕತೆಗಳನ್ನು ಪರಿಗಣಿಸಿ ಮುಂದುವರಿಸಲಾಗುವುದು. ಈ ವಿಶೇಷ ರೈಲುಗಳ ಓಡಾಟ ಹೆಚ್ಚುವರಿ ಪ್ರಯಾಣಿಕರ ಸಂಚಾರದ ಒತ್ತಡವನ್ನು ಕಡಿಮೆ ಮಾಡಲಿದ್ದು, ಪ್ರಯಾಣಿಕರು ಅನುಕೂಲಕರವಾಗಿ ಪ್ರಯಾಣಿಸಬಹುದಾಗಿದೆ.
ವಿಶ್ವದ ಅತಿದೊಡ್ಡ ಮಾವು ಬೆಳೆಗಾರ ಮುಕೇಶ್ ಅಂಬಾನಿ, ಇದರ ಹಿಂದಿದೆ ಒಂದು ರೋಚಕ ಕಥೆ!
ವಿಶೇಷ ರೈಲುಗಳ ವಿವರ:
- ಜು. 19ರಂದು ರೈಲು ಸಂಖ್ಯೆ 06547 ಎಸ್‌ಬಿಸಿ ಬೆಂಗಳೂರಿನಿಂದ ಹೊರಡಲಿದೆ.
- ಜು.20ರಂದು ರೈಲು ಸಂಖ್ಯೆ 06548 ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ತೆರಳಲಿದೆ.
- ಜು.21 ಹಾಗೂ 22ರಂದು ರೈಲು ಸಂಖ್ಯೆ 06549 ಯಶವಂತಪುರದಿಂದ ಮಂಗಳೂರು ಜಂಕ್ಷನ್‌ಗೆ ಬರಲಿದೆ.
- ಜು.21 ಹಾಗೂ 22 ರಂದು ರೈಲು ಸಂಖ್ಯೆ 06550 ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ತೆರಳಲಿದೆ.
ರೈಲು ಸಂಚಾರವೂ ಸುಲಭವಲ್ಲ: ಇನ್ನು ಹೆಚ್ಚುವರಿ ರೈಲು ಬಿಟ್ಟರೂ ಕರಾವಳಿಗೆ ರೈಲು ಸಂಚಾರ ಸುಲಭವಲ್ಲ. ಸಕಲೇಶಪುರದಿಂದ ಹೊರಟು ಕುಕ್ಕೆಸುಬ್ರಹ್ಮಣ್ಯ ದಾಟಬೇಕಾದರೆ ಅದು ಜೀವ ಕೈನಲ್ಲಿ ಹಿಡಿದೇ ಸಾಗಬೇಕು ಏಕೆಂದರೆ ಗುಂಡ್ಯ ಬಳಿ ಮಳೆ ಅವಾಂತರದಿಂದ ಗುಡ್ಡ ಕುಸಿಯವುದು ಸಾಮಾನ್ಯವಾಗಿದೆ. ಒಂದು ವೇಳೆ ರೈಲು ಹಳಿಯ ಮೇಲೆ ಗುಡ್ಡ ಕುಸಿದರೆ, ಕಲ್ಲುಬಂಡೆ ನಿಂತರೆ ಅಲ್ಲೂ ಸಂಚಾರ ಬಂದ್ ಆಗಲಿದೆ.