Asianet Suvarna News Asianet Suvarna News

ಮುಂದಿನ 3 ತಿಂಗಳು ರಾಜ್ಯದ ಈ ಜಿಲ್ಲೆಗಳ ಮಾರ್ಗದಲ್ಲಿ ಸಂಚರಿಸುವ 18 ರೈಲುಗಳ ಸಂಚಾರ ರದ್ದು

ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ಸುರಂಗ ಮಾರ್ಗದಲ್ಲಿ ಸುರಕ್ಷತಾ ಕಾರ್ಯ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ಸಂಚರಿಸುವ 18 ರೈಲುಗಳ ಸಂಚಾರವನ್ನು ಡಿಸೆಂಬರ್‌, ಜನವರಿ ಹಾಗೂ ಫೆಬ್ರವರಿ ತಿಂಗಳುಗಳ ವಿವಿಧ ದಿನಾಂಕಗಳಂದು ರದ್ದುಗೊಳಿಸಲಾಗಿದೆ.

South Western Railway  has cancelled  several trains because  extension of work gow
Author
First Published Dec 2, 2023, 9:22 AM IST

ಬೆಂಗಳೂರು (ನ.2): ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮತ್ತು ಬಸಂಪಲ್ಲಿ ನಿಲ್ದಾಣಗಳ ನಡುವಿನ ಸುರಂಗ ಮಾರ್ಗದಲ್ಲಿ ಸುರಕ್ಷತಾ ಕಾರ್ಯ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ಸಂಚರಿಸುವ 18 ರೈಲುಗಳ ಸಂಚಾರವನ್ನು ಡಿಸೆಂಬರ್‌, ಜನವರಿ ಹಾಗೂ ಫೆಬ್ರವರಿ ತಿಂಗಳುಗಳ ವಿವಿಧ ದಿನಾಂಕಗಳಂದು ರದ್ದುಗೊಳಿಸಲಾಗಿದೆ. ಮೂರು ತಿಂಗಳ ಕಾಲ ಸುರಕ್ಷತಾ ಕ್ರಮಗಳ ಅಳವಡಿಕೆ ಕಾರ್ಯ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈಲು ಸಂಚಾರ ರದ್ದುಗೊಳಿಸಲಾಗಿದೆ. ಅದರ ಜತೆಗೆ 6 ರೈಲುಗಳನ್ನು ಭಾಗಶಃ ರದ್ದು ಮಾಡಲಾಗಿದ್ದು, 30 ರೈಲುಗಳ ಮಾರ್ಗ ಬದಲಿಸಿ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗ ಕ್ರಮ ಕೈಗೊಂಡಿದೆ.

ಸಂಚಾರ ರದ್ದುಗೊಳ್ಳುತ್ತಿರುವ ರೈಲುಗಳ ವಿವರ, ದಿನಾಂಕ

*ಕೊಯಮತ್ತೂರು-ಹಜರತ್‌ ನಿಜಾಮುದ್ದೀನ್‌ ಕೊಂಗು ಎಕ್ಸ್‌ಪ್ರೆಸ್‌: ಡಿ.10, 17, 24, 31, ಜ.7, 14, 21, 28, ಫೆ.4

*ಡಾ। ಎಂಜಿಆರ್‌ ಚೆನ್ನೈ ಸೆಂಟ್ರಲ್‌-ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್‌: ಡಿ.6, 13, 20, 27, ಜ.3, 10, 17, 24, 31, ಫೆ.7

*ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರು-ಅಗ್ಥೋರಿ ಪಾರ್ಸೆಲ್‌ ಎಕ್ಸ್‌ಪ್ರೆಸ್‌: ಡಿ.7, 14, 21, 28, ಜ.4, 11, 18, 25, ಫೆ.1, 8

*ಯಶವಂತಪುರ-ಡಾ। ಅಂಬೇಡ್ಕರ್‌ ನಗರ ಎಕ್ಸ್‌ಪ್ರೆಸ್‌: ಡಿ.12, 19, 26, ಜ.2, 9, 16, 23, 30, ಫೆ.6

*ಯಶವಂತಪುರ-ಮಚೇಲಿಪಟ್ಟಣ ಕೋಂಡವೀಡು ಎಕ್ಸ್‌ಪ್ರೆಸ್‌: ಡಿ.9, 12, 14, 16, 19, 21, 23, 25, 28, 30, ಜ.2, 4, 6, 9, 11, 13, 16, 18, 20, 23, 25, 27, 30, ಫೆ.1, 3, 5, 8

*ಯಶವಂತಪುರ-ಸಿಕಂದರಾಬಾದ್ ಗರೀಬ್‌ ರಥ ಎಕ್ಸ್‌ಪ್ರೆಸ್‌: ಡಿ.9, 11, 14, 16, 18, 21, 23, 25, 28, 30, ಜ.1, 4, 6, 8, 11, 13, 15, 18, 22, 25, 27, 29, ಫೆ.1, 3, 5, 8

*ಸಾಯಿನಗರ ಶಿರಡಿ-ಡಾ. ಎಂಜಿಆರ್‌ ಚೆನ್ನೈ ಸೆಂಟ್ರಲ್‌: ಡಿ.8, 15, 22, 29, ಜ.5, 12, 19, 26, ಫೆ.2, 9

*ಹಜರತ್‌ ನಿಜಾಮುದ್ದೀನ್‌-ಕೊಯಮತ್ತೂರು ಎಕ್ಸ್‌ಪ್ರೆಸ್‌: ಡಿ.13, 20, 27, ಜ.3, 10, 17, 24, 31, ಫೆ.7

*ಅಗ್ತೋರಿ-ಎಸ್‌ಎಂವಿಟಿ ಬೆಂಗಳೂರು ಪಾರ್ಸೆಲ್‌ ಎಕ್ಸ್‌ಪ್ರೆಸ್‌: ಡಿ.11, 18, 25, ಜ.1, 8, 15, 22, 29, ಫೆ.5, 12

*ಡಾ। ಅಂಬೇಡ್ಕರ್‌ನಗರ-ಯಶವಂತಪುರ ಎಕ್ಸ್‌ಪ್ರೆಸ್‌: ಡಿ.10, 17, 24, 31, ಜ.7, 14, 21, 28, ಫೆ.4

*ಮಚಲಿಪಟ್ಟಣ-ಯಶವಂತಪುರ ಎಕ್ಸ್‌ಪ್ರೆಸ್‌: ಡಿ.8, 11, 13, 15, 18, 20, 22, 25, 27, 29, ಜ.1, 3, 5, 8, 10, 12, 15, 17, 19, 22, 24, 26, 29, 31, ಫೆ.2, 5, 7

*ಸಿಕಂದರಾಬಾದ್-ಯಶವಂತಪುರ ಗರೀಬ್‌ ರಥ ಎಕ್ಸ್‌ಪ್ರೆಸ್‌: ಡಿ.8, 10, 13, 15, 17, 20, 22, 24, 27, 29, 31, ಜ.3, 5, 7, 10, 12, 14, 17, 19, 21, 24, 26, 28, 31, ಫೆ.2, 4, 7

*ಧರ್ಮಾವರಂ-ಕೆಎಸ್‌ಆರ್‌ ಬೆಂಗಳೂರು: ಡಿ.12ರಿಂದ ಫೆ. 8ರವರೆಗೆ

*ಗುಂತಕಲ್‌-ಹಿಂದೂಪುರ ಡೆಮು: ಡಿ.7ರಿಂದ ಫೆ.8ರವರೆಗೆ

*ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯ-ಕೆಎಸ್‌ಆರ್‌ ಬೆಂಗಳೂರು ಮೆಮು ಸ್ಪೆಷಲ್‌: ಡಿ.8ರಿಂದ ಫೆ.8ರವರೆಗೆ

*ಕೆಆರ್‌ಎಸ್‌ ಬೆಂಗಳೂರು-ಧರ್ಮಾವರಂ ಮೆಮು: ಡಿ.8ರಿಂದ ಫೆ.8ರವರೆಗೆ

*ಹಿಂದೂಪುರ-ಗುಂತಕಲ್‌ ಡೆಮು: ಡಿ.8ರಿಂದ ಫೆ.9ರವರೆಗೆ

*ಕೆಎಸ್‌ಆರ್ ಬೆಂಗಳೂರು-ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮೆಮು: ಡಿ.8ರಿಂದ ಫೆ.2ರವರೆಗೆ

Follow Us:
Download App:
  • android
  • ios