Asianet Suvarna News Asianet Suvarna News

ಬೆಂಗ​ಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ನಿಷೇಧದ ಮೊದಲ ದಿನವೇ 137 ಕೇಸ್‌, 68,500 ರು.ದಂಡ ವಸೂಲಿ

 ಬೆಂಗ​ಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಸಂಚಾರ ನಿಷೇಧಿಸಲಾಗಿದೆ. ನಿಯಮ ಜಾರಿಗೆ ಬಂದ ಮೊದಲ ದಿನವಾದ ಮಂಗಳವಾರ 137 ಉಲ್ಲಂಘನೆ ಪ್ರಕರಣ ಪತ್ತೆಯಾಗಿದ್ದು, 68,500 ರು. ದಂಡ ವಸೂಲಿಯಾಗಿದೆ.

Bengaluru Mysuru Expressway Ban on two wheelers and autos  68500 fines were collected on the first day gow
Author
First Published Aug 2, 2023, 8:43 AM IST

ರಾಮ​ನ​ಗರ (ಜು.2): ಬೆಂಗ​ಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಸಂಭ​ವಿ​ಸು​ತ್ತಿ​ರುವ ಅಪ​ಘಾ​ತ​ಗ​ಳನ್ನು ನಿಯಂತ್ರಿ​ಸುವ ನಿಟ್ಟಿ​ನಲ್ಲಿ ಮಂಗ​ಳ​ವಾ​ರ​ದಿಂದ ಜಾರಿಗೆ ಬಂದ ದ್ವಿಚಕ್ರ, ತ್ರಿಚಕ್ರ ಸೇರಿ ವಿವಿಧ ಬಗೆಯ ವಾಹ​ನ​ಗಳ ಸಂಚಾ​ರ​ ನಿಷೇ​ಧ​ವನ್ನು ಕಟ್ಟು​ನಿ​ಟ್ಟಾಗಿ ಜಾರಿಗೆ ತರ​ಲಾ​ಗಿದ್ದು, ನಿಯಮ ಉಲ್ಲಂಘಿ​ಸಿ​ದ​ವರು 500 ರು. ದಂಡ ಪಾವ​ತಿ​ಸಿ​ದರು. ಈ ಮಧ್ಯೆ, ಮೊದಲ ದಿನವೇ 137 ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ಒಟ್ಟೂ, 68,500 ರು. ದಂಡ ವಸೂಲಿ ಮಾಡಲಾಗಿದೆ.

ಹೆದ್ದಾರಿ ಉದ್ದಕ್ಕೂ ನಿಗಾ ವಹಿ​ಸಿ​ರುವ ಪೊಲೀ​ಸರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿ​ಕಾರದ ಸಿಬ್ಬಂದಿ ಹೆದ್ದಾ​ರಿಯ ಎಂಟ್ರಿ-ಎಕ್ಸಿಟ್‌ಗಳಲ್ಲಿ ಬೀಡು ಬಿಟ್ಟಿ​ದ್ದರು. ಹೆದ್ದಾರಿ ಪ್ರವೇ​ಶಿ​ಸಲು ಮುಂದಾದ ಬೈಕ್‌, ರಿಕ್ಷಾ ಹಾಗೂ ಟ್ರ್ಯಾಕ್ಟರ್‌ ಚಾಲ​ಕರಿಗೆ ನಿಯಮ ಉಲ್ಲಂಘನೆ ಮಾಡ​ದಂತೆ ಅರಿವು ಮೂಡಿ​ಸಿ​, ವಾಹ​ನ​ಗ​ಳನ್ನು ಸರ್ವಿಸ್‌ ರಸ್ತೆಗೆ ಡೈವರ್ಚ್‌ ಮಾಡುವ ಕೆಲಸ ಮಾಡಿದರು. ಪ್ರವೇಶ ನಿಷೇಧ ಕುರಿತು ಕೆಲವರಿಗೆ ಮಾಹಿತಿ ಕೊರತೆ ಇತ್ತು. ಹೀಗಾಗಿ, ಮೊದಲ ದಿನ ಬೆಳಗ್ಗೆ 8 ರಿಂದ 11ಗಂಟೆ​ವ​ರೆಗೆ ಹೆದ್ದಾರಿ ಪ್ರವೇಶಿಸುವವರಿಗೆ ಎಚ್ಚರಿಕೆ ನೀಡಿ, ಸವೀರ್‍ಸ್‌ ರಸ್ತೆಯಲ್ಲಿ ಕಳುಹಿಸುತ್ತಿದ್ದರು. ಅದನ್ನು ಮೀರಿಯೂ ಕೆಲವರು ಹೆದ್ದಾರಿ ಪ್ರವೇಶಿಸಿದರೆ ಅಂತವರಿಗೆ ನಿರ್ಗಮನ ಸ್ಥಳಗಳಲ್ಲಿ 500 ರು.ದಂಡ ಹಾಕಲಾಯಿತು.

Bengaluru-Mysuru Expressway ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ರೆ ಡಿ.ಎಲ್ ಕ್ಯಾನ್ಸಲ್: ಎಡಿಜಿಪಿ ಅಲೋಕ್‌

ಹೆದ್ದಾ​ರಿ​ಯಲ್ಲಿ ಮಧ್ಯಾ​ಹ್ನದ ನಂತರ ಬೈಕ್‌ ಸಂಚಾರ ಬಹು​ತೇಕ ವಿರ​ಳ​ವಾ​ಗಿತ್ತು. ಬೈಕ್‌, ಆಟೋ, ಟ್ರ್ಯಾಕ್ಟರ್‌ಗಳು ಸರ್ವಿಸ್‌ ರಸ್ತೆ​ಯ​ಲ್ಲಿಯೇ ಸಂಚಾರ ಮಾಡಿ​ದವು. ಇದರಿಂದಾಗಿ ಸವೀರ್‍ಸ್‌ ರಸ್ತೆಯ ಕೆಲವೆಡೆ ಟ್ರಾಫಿಕ್‌ ಜಾಮ್‌ ಉಂಟಾಯಿತು.

ಇದೇ ವೇಳೆ, ಪ್ರಾಧಿಕಾರದ ಕ್ರಮಕ್ಕೆ ರೈತರು ಹಾಗೂ ಸ್ಥಳೀ​ಯರು ಆಕ್ರೋ​ಶ ವ್ಯಕ್ತಪಡಿಸಿದ್ದಾರೆ. ಹೈವೇಗಾಗಿ ನಮ್ಮ ಜಮೀನು ಕೊಟ್ಟಿದ್ದೇವೆ. ನಮಗೂ ಇಂತಹ ರಸ್ತೆಯಲ್ಲಿ ಓಡಾಡಬೇಕು ಅಂತ ಆಸೆ ಇರುತ್ತೆ. ನಮ್ಮ ಹೆಂಡತಿ-ಮಕ್ಕಳು ಈ ರಸ್ತೆಯಲ್ಲಿ ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಅಂದ್ರೆ ನಾವು ಏನು ಮಾಡೋದು?. ನಮಗೆ ಕಾರು ಕೊಳ್ಳಲು ಸಾಧ್ಯವಿಲ್ಲ ಎಂದು ಸ್ಥಳೀ​ಯ ಬೈಕ್‌ ಸವಾ​ರರೊಬ್ಬರು ಅಳಲು ತೋಡಿಕೊಂಡರು.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಮೊದಲ ಫೈನ್‌ ಕಟ್ಟಿದ ಬೈಕ್‌ ಸವಾರ ಇವರೇ..?

ಸರ್ವಿಸ್‌ ರಸ್ತೆಯಲ್ಲಿ ಮೋರಿ ನೀರು ರಸ್ತೆಗೆ ಹರಿಯುತ್ತಿದ್ದು, ಮಣ್ಣು ಕೂತು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಸರ್ವಿಸ್‌ ರಸ್ತೆಯ ಕಾಮಗಾರಿ ಇನ್ನೂ ಅಲ್ಲಲ್ಲಿ ಬಾಕಿಯಿದೆ ಎಂದು ಕಿಡಿ ಕಾರಿದರು.

Follow Us:
Download App:
  • android
  • ios