Asianet Suvarna News Asianet Suvarna News

ಕರ್ನಾಟಕದ ಮೊದಲ ಗುಪ್ತವಾರ್ತೆ ಅಕಾಡೆಮಿ ಉದ್ಘಾಟನೆಗೆ ಸಜ್ಜು

ರಾಜ್ಯ ಗುಪ್ತ ವಾರ್ತೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಸೂಕ್ತ ತರಬೇತಿ ನೀಡಲು ಬೆಂಗಳೂರಿನ ಹುಳಿಮಾವಿನಲ್ಲಿ ಸ್ಥಾಪಿಸಿರುವ ರಾಜ್ಯದ ಪ್ರಥಮ ‘ರಾಜ್ಯ ಗುಪ್ತವಾರ್ತೆ ತರಬೇತಿ ಅಕಾಡೆಮಿ’ ಉದ್ಘಾಟನೆಗೆ ಸಜ್ಜುಗೊಂಡಿದೆ.

Soon Will be Inaugurate Karnataka's First State Intelligence Training Academy in Bengaluru grg
Author
First Published Oct 11, 2023, 8:30 AM IST

ಮೋಹನ ಹಂಡ್ರಂಗಿ

ಬೆಂಗಳೂರು(ಅ.11):  ನಾಡಿನ ಭದ್ರತೆಗೆ ಆತಂಕ ಸೃಷ್ಟಿಸುವ ಸಮಾಜಘಾತುಕ ಶಕ್ತಿಗಳ ಮೇಲೆ ಹದ್ದಿನ ಕಣ್ಣಿಡುವ ನಿಟ್ಟಿನಲ್ಲಿ ಬಲವಾದ ಬೇಹುಗಾರಿಕಾ ಪಡೆ ಕಟ್ಟಲು ರಾಜ್ಯ ಗುಪ್ತದಳ ವಿಭಾಗವು ಸುಸಜ್ಜಿತ ತರಬೇತಿ ಅಕಾಡೆಮಿ ಸ್ಥಾಪಿಸಿದೆ.
ರಾಜ್ಯ ಗುಪ್ತ ವಾರ್ತೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಸೂಕ್ತ ತರಬೇತಿ ನೀಡಲು ನಗರದ ಹುಳಿಮಾವಿನಲ್ಲಿ ಸ್ಥಾಪಿಸಿರುವ ರಾಜ್ಯದ ಪ್ರಥಮ ‘ರಾಜ್ಯ ಗುಪ್ತವಾರ್ತೆ ತರಬೇತಿ ಅಕಾಡೆಮಿ’ ಉದ್ಘಾಟನೆಗೆ ಸಜ್ಜುಗೊಂಡಿದೆ.

ರಾಜ್ಯ ಸರ್ಕಾರ ನೀಡಿದ ಐದು ಕೋಟಿ ರು. ಅನುದಾನದಲ್ಲಿ ಸುಮಾರು 4.30 ಎಕರೆ ಜಾಗದಲ್ಲಿ ಈ ಅಕಾಡೆಮಿಯನ್ನು ಸ್ಥಾಪಿಸಲಾಗಿದೆ. ಬೇರೆ ರಾಜ್ಯಗಳ ಗುಪ್ತ ವಾರ್ತೆ ಅಕಾಡೆಮಿಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದ ಅಕಾಡೆಮಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಆಧುನಿಕ ತಂತ್ರಜ್ಞಾನ ಒಳಗೊಂಡ ತರಬೇತಿ ಕೊಠಡಿಗಳು, ವಿಶಾಲ ಮೈದಾನ, ವಿಶ್ರಾಂತಿ ಕೊಠಡಿಗಳು, ವಸತಿ ಗೃಹಗಳು, ಸುಸಜ್ಜಿತ ಕ್ಯಾಂಟಿನ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

17 ವೈದ್ಯರು ಕಂಡುಹಿಡಿಯಲಾಗದ 3 ವರ್ಷದ ನೋವನ್ನು ಕೆಲ ಹೊತ್ತಲ್ಲೇ ಪತ್ತೆಹಚ್ಚಿದ ಚಾಟ್‌ಜಿಪಿಟಿ!

ಅಧಿಕಾರಿ-ಸಿಬ್ಬಂದಿಗೆ ತರಬೇತಿ:

ರಾಜ್ಯ ಪೊಲೀಸ್‌ ಇಲಾಖೆಯ ಏಕೈಕ ಗುಪ್ತವಾರ್ತೆ ತರಬೇತಿ ಅಕಾಡೆಮಿ ಇದಾಗಿದೆ. ಇಲ್ಲಿ ರಾಜ್ಯ ಗುಪ್ತ ವಾರ್ತೆ ವಿಭಾಗದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಗೂ ಜಿಲ್ಲೆಗಳಲ್ಲಿರುವ ಗುಪ್ತವಾರ್ತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಹಿರಿಯ ಪೊಲೀಸ್‌ ಅಧಿಕಾರಿಗಳು, ವಿಷಯ ತಜ್ಞರು ಗುಪ್ತ ವಾರ್ತೆ ಸಂಗ್ರಹ, ವಾರ್ತೆ ಸಂಗ್ರಹಿಸುವ ವಿಧಾನ, ತಂತ್ರಜ್ಞಾನ ಬಳಕೆ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ತರಬೇತಿ ನೀಡಲಿದ್ದಾರೆ.

ಊಟ-ವಸತಿ ಸೌಲಭ್ಯ:

ಈ ಅಕಾಡೆಮಿಗೆ ತರಬೇತಿಗೆ ಬರುವ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ಅವಧಿಯಲ್ಲಿ ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಅದಕ್ಕಾಗಿ ಸುಸಜ್ಜಿತ ವಸತಿ ಗೃಹಗಳು ಹಾಗೂ ಕ್ಯಾಂಟಿನ್ ಸೌಲಭ್ಯ ಕಲ್ಪಿಸಲಾಗಿದೆ. ಇದು ರಾಜ್ಯದ ವಿವಿಧ ಜಿಲ್ಲೆಗಳಿಂದ ತರಬೇತಿಗೆ ನಗರಕ್ಕೆ ಬರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ತರಬೇತಿ ಮುಗಿಯುವವರೆಗೂ ಅಕಾಡೆಮಿಯಲ್ಲಿ ಉಳಿದುಕೊಂಡು ಯಶಸ್ವಿಯಾಗಿ ತರಬೇತಿ ಪೂರೈಸಲು ಸಹಕಾರಿಯಾಗಲಿದೆ.

ತರಬೇತಿ ಶಾಲೆ ಶಿಫ್ಟ್‌:

ಇಷ್ಟು ದಿನ ಗುಪ್ತಚರ ವಿಭಾಗದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ನೀಡಲು ಶಾಂತಿನಗರದಲ್ಲಿ ರಾಜ್ಯ ಗುಪ್ತವಾರ್ತೆ ತರಬೇತಿ ಶಾಲೆ ಇತ್ತು. ಸೀಮಿತ ಸ್ಥಳದಲ್ಲಿ ತರಬೇತಿ ನಡೆಯುತ್ತಿತ್ತು. ಇದೀಗ ಹುಳಿಮಾವಿನಲ್ಲಿ ವಿಶಾಲ ಜಾಗದಲ್ಲಿ ಅಕಾಡೆಮಿ ಸ್ಥಾಪನೆಯಾಗಿರುವ ಹಿನ್ನೆಲೆಯಲ್ಲಿ ತರಬೇತಿ ಶಾಲೆಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ಹಿಂದೂ ಮಹಾಸಾಗರದಲ್ಲೂ ಚೀನಾತಂಕ: ಜಿಬೂಟಿಯಲ್ಲಿ ಚೀನಾದ ಮೊದಲ ವಿದೇಶಿ ನೌಕಾ ನೆಲೆ ಆರಂಭ

ಗುಪ್ತದಳಕ್ಕೆ ಪ್ರತ್ಯೇಕ ನೇಮಕಾತಿ:

ವೃತ್ತಿಪರ ಗುಪ್ತದಳ ಕಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತ್ಯೇಕ ನೇಮಕಾತಿ ಆರಂಭಿಸಿದೆ. ಇದಕ್ಕಾಗಿ ಪ್ರತ್ಯೇಕ ವೃಂದವನ್ನು ಸೃಷ್ಟಿಸಿರುವ ಸರ್ಕಾರ, ಮೊದಲ ಹಂತದಲ್ಲಿ 100 ಮಂದಿ ಪಿಎಸ್‌ಐಗಳ ನೇಮಕಾತಿಗೆ ಒಪ್ಪಿಗೆ ಸೂಚಿಸಿತ್ತು. ಈ ಪೈಕಿ 50 ಮಂದಿ ನೇಮಕಾತಿ ಪ್ರಕ್ರಿಯೆ ಮುಗಿದ್ದು, ಅವರೆಲ್ಲಾ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪೇಪರ್‌ ಲೆಸ್‌ ವ್ಯವಸ್ಥೆ

ರಾಜ್ಯ ಗುಪ್ತವಾರ್ತೆ ವಿಭಾಗವು ಪೇಪರ್‌ ಲೆಸ್‌ ವ್ಯವಸ್ಥೆ ಅಳವಡಿಕೊಂಡಿದೆ. ರಾಜ್ಯದ ದೈನಂದಿನ ವಿದ್ಯಮಾನಗಳ ವರದಿ ಹಾಗೂ ಮಾಹಿತಿಗಳನ್ನು ಇ-ತಂತ್ರಾಂಶದ ಮುಖಾಂತರ ಪಡೆಯಲಾಗುತ್ತಿದೆ. ಕೇಂದ್ರ ಗುಪ್ತಚರ ಇಲಾಖೆ ಮಾದರಿಯಲ್ಲಿ ರಾಜ್ಯ ಗುಪ್ತ ವಾರ್ತೆ ವಿಭಾಗವನ್ನು ಹಂತ ಹಂತವಾಗಿ ಬಲಗೊಳಿಸಲಾಗುತ್ತಿದೆ.

Follow Us:
Download App:
  • android
  • ios