ಅಂಜನಾದ್ರಿ ಅಭಿವೃದ್ಧಿ: ಶೀಘ್ರ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ

ಆಂಧ್ರ, ಮಹಾರಾಷ್ಟ್ರ ಹಾಗೂ ಗೋವಾ ಕ್ಯಾತೆ ಬಳಿಕ ಕಿಷ್ಕಿಂಧೆಯ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಜೂ.15 ಅಥವಾ 16ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಬೆಂಗಳೂರಲ್ಲಿ ಸಭೆ ನಡೆಯುವ ನಿರೀಕ್ಷೆ ಇದೆ.

soon meeting led by cm basavaraj bommai for development of anjanadri hill gvd

ಕೊಪ್ಪಳ (ಜೂ.10): ಆಂಧ್ರ, ಮಹಾರಾಷ್ಟ್ರ ಹಾಗೂ ಗೋವಾ ಕ್ಯಾತೆ ಬಳಿಕ ಕಿಷ್ಕಿಂಧೆಯ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಜೂ.15 ಅಥವಾ 16ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಬೆಂಗಳೂರಲ್ಲಿ ಸಭೆ ನಡೆಯುವ ನಿರೀಕ್ಷೆ ಇದೆ. ಈ ಕುರಿತು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಿಗೂ ಮೌಖಿಕ ಮಾಹಿತಿ ರವಾನೆ ಮಾಡಲಾಗಿದ್ದು, ಅಧಿಕೃತ ಸೂಚನೆ ನೀಡುವುದಷ್ಟೇ ಬಾಕಿ ಇದೆ. ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸಭೆ ನಡೆಸುವ ಕುರಿತು ಸೂಚಿಸಿದ್ದಾರೆ.

ಈ ಹಿಂದೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ನಿಗದಿಯಾಗಿದ್ದ ಸಭೆಯನ್ನು ಬೊಮ್ಮಾಯಿ ಅವರೇ ಮುಂದೂಡಲು ಸೂಚಿಸಿದ್ದರು. ಅಂಜನಾದ್ರಿಯನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಮಾಡಬೇಕಾಗಿರುವುದರಿಂದ ಈ ಕುರಿತು ನಾನೇ ಸಭೆ ನಡೆಸುತ್ತೇನೆ ಎನ್ನುವ ಕಾರಣ ನೀಡಿದ್ದರು. ಬಜೆಟ್‌ ಬಳಿಕ ಸಭೆ ನಡೆಸುವುದಾಗಿ ಹೇಳಿದ್ದು, ಈಗ ಕೊನೆಗೂ ಸಭೆಗೆ ಮಹೂರ್ತ ಫಿಕ್ಸ್‌ ಆಗುತ್ತಿದೆ.

ಆಂಜನೇಯ ಜನ್ಮಸ್ಥಳ ವಿವಾದ, ಆಂಧ್ರ ಆಯ್ತು ಈಗ ಮಹಾರಾಷ್ಟ್ರ ಕಿರಿಕ್

120 ಕೋಟಿ: ಅಂಜನಾದ್ರಿಯನ್ನು ಅಂತಾರಾಷ್ಟ್ರೀಯ ಪ್ರವಾಸಿತಾಣವನ್ನಾಗಿ ಮಾಡುವುದಾಗಿ ಘೋಷಣೆ ಮಾಡಿರುವ ಸಿಎಂ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಘೋಷಿಸಿದ .100 ಕೋಟಿ ಹಾಗೂ ಯಡಿಯೂರಪ್ಪ ಅವರು ಸಿಎಂ ಆಗಿದ್ದ ವೇಳೆ ಬಜೆಟ್‌ನಲ್ಲಿ ಘೋಷಿಸಿದ್ದ .20 ಕೋಟಿ ಸೇರಿ ಸುಮಾರು .120 ಕೋಟಿ ಬಳಕೆ ಮಾಡಿಕೊಂಡು ಅಭಿವೃದ್ಧಿ ಕುರಿತು ಚರ್ಚೆ ನಡೆಯಲಿದೆ.

ಜಿಲ್ಲಾಡಳಿತದಿಂದ ಪ್ರಸ್ತಾವನೆ: ಸಿಎಂ ಬೊಮ್ಮಾಯಿ ಅವರು ಅಂಜನಾದ್ರಿ ಅಭಿವೃದ್ಧಿ ಕುರಿತು ಸಭೆ ಕರೆದಿರುವುದರಿಂದ ಜಿಲ್ಲಾಡಳಿತ ಈ ಕುರಿತು ಖಾಸಗಿ ಏಜೆನ್ಸಿ ಮೂಲಕ ಸಿದ್ಧ ಮಾಡಿದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿದೆ. ಪ್ರಸ್ತಾವನೆಯ ಪ್ರಕಾರ ರೋಪ್‌ವೇ ನಿರ್ಮಾಣ ಮಾಡುವುದು ಖಚಿತ. ಆದರೆ, ಇದನ್ನು ಪಿಪಿಪಿ ಯೋಜನೆ ಮೂಲಕ ಮಾಡಬೇಕೇ ಅಥವಾ ರಾಜ್ಯ ಸರ್ಕಾರದಿಂದ ಮಾಡಬೇಕೇ ಎನ್ನುವ ಕುರಿತು ಚರ್ಚಿಸಿ ನಿರ್ಧಾರ ಮಾಡಲಾಗುತ್ತದೆ. ಆದರೆ, ಸರ್ಕಾರದಿಂದಲೇ ಮಾಡುವುದು ಸೂಕ್ತ ಎನ್ನುವ ಮಾತು ಬಲವಾಗಿದೆ. ಯೋಜನೆಗಾಗಿ 700 ಎಕ್ರೆ ಭೂಮಿಸ್ವಾಧೀನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ: ಆಂಜನೇಯ ಹುಟ್ಟಿದ ಸ್ಥಳವೆಂದು ಪ್ರಸಿದ್ಧವಾಗಿರುವ ಕೊಪ್ಪಳ ಜಿಲ್ಲೆ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ 100 ಕೋಟಿ ರು, ನಿಗದಿಪಡಿಸಿದ್ದು, ಪ್ರವಾಸಿಗಳ ಮೂಲಭೂತ ಸೌಕರ್ಯ, ರೋಪ್‌ವೇ ಒಳಗೊಂಡ ಕಾಮಗಾರಿ ಅನುಷ್ಠಾನ ಮಾಡಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು. ಬಿಜೆಪಿಯ ಎನ್‌. ರವಿಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೂಲ ಸೌಕರ್ಯ ಒದಗಿಸಲು ಬೆಟ್ಟದ ಕೆಳಗಡೆ 13.34 ಗುಂಟೆ ಜಮೀನು ವಶ ಪಡಿಸಿಕೊಂಡು ಅದಕ್ಕೆ ತಗುಲುವ ವೆಚ್ಚ 5.50 ಕೋಟಿ ರು.ಗಳನ್ನು ಬಿಡುಗಡೆ ಮಾಡಬೇಕೆಂಬ ಪ್ರಸ್ತಾವನೆ ಪರಿಶೀಲಿಸಲಾಗುತ್ತಿದೆ.

Koppal: ಹನುಮನ ನಾಡು ಅಂಜನಾದ್ರಿ ಬೆಟ್ಟದಲ್ಲಿ ಯೋಗ ಕಾರ್ಯಕ್ರಮ

ಅದೇ ರೀತಿ ಆಯೋಧ್ಯೆಗೆ ಬಂದ ಭಕ್ತರು ರಾಮನ ಬಂಟ ಆಂಜನೇಯ ಹುಟ್ಟಿದ ಸ್ಥಳಕ್ಕೂ ಭೇಟಿ ನೀಡಲು ವಿಮಾನ ಯಾನ ಸೇವೆ ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಪ್ರತಿ ವರ್ಷ ದೇವಾಲಯಗಳ ಪ್ರವಾಸದ ವಿಶೇಷ ಪ್ಯಾಕೇಜ್‌ ಆರಂಭಿಸಲಾಗುವುದು ಎಂದರು. ‘ದೇಗುಲ ಪ್ರವಾಸೋದ್ಯಮ’ಕ್ಕೆ ಒತ್ತು ನೀಡಿ ‘ದೈವ ಸಂಕಲ್ಪ’ ಯೋಜನೆ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಗ್ರೂಪ್‌ ‘ಎ’ವರ್ಗದ 25 ದೇವಾಲಯಗಳನ್ನು ಗುರುತಿಸಿ ಆಯಾ ದೇವಾಲಯಗಳಿಂದ ಬರುವ ಆದಾಯದಿಂದ ದೇವಾಲಯಗಳಲ್ಲಿ ಯೋಜಿತ ರೀತಿಯಲ್ಲಿ ಅಭಿವೃದ್ಧಿ ಮಾಡಲು ‘ಮಾಸ್ಟರ್‌ ಪ್ಲಾನ್‌’ ರೂಪಿಸಲಾಗುವುದು ಎಂದು ಸಚಿವರು ತಿಳಿಸಿದರು.

Latest Videos
Follow Us:
Download App:
  • android
  • ios