ಸಕಲೇಶಪುರ[ಡಿ.29]: ಮಗನೊಬ್ಬ ಹೆತ್ತ ತಾಯಿಯ ಕೈ ಕತ್ತರಿಸಿದ ಹೃದಯ ವಿದ್ರಾವಕ ದುರ್ಘಟನೆ ಹಾಸನ ಜಿಲ್ಲೆ ಸಕಲೇಸಪುರ ತಾಲೂಕಿನಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಶುಕ್ರವಾರ ಸಂತೆ ಸಮೀಪದ ಯಡೆವರ ಹಳ್ಳಿಯ ಲಲಿತಮ್ಮ (58) ಅವರ ಕೈಯನ್ನು ಪುತ್ರ ದಿಲೀಪ ಮಚ್ಚಿನಿಂದ ಕತ್ತರಿಸಿದ್ದಾನೆ. ಎರಡನೇ ಮದುವೆಗೆ ತಾಯಿ ಒಪ್ಪಿಗೆ ನೀಡುತ್ತಿಲ್ಲ ಎಂಬ ಕಾರಣಕ್ಕೆ ಈ ಕೃತ್ಯ ಮಾಡಿದ್ದಾನೆ. ಸಕಲೇಶಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಹಾಸನದ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

ಆರೋಪಿಯನ್ನು ಶುಕ್ರವಾರ ಸಂತೆ ಸಮೀಪ ಪೊಲೀಸರು ಬಂಧಿಸಿದ್ದು, ಯಸಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.