ಇಂಡಿಯನ್ ಅಕಾಡೆಮಿ ಸಂಸ್ಥೆಗಳ ವಿದ್ಯಾರ್ಥಿಗಳು NSS ಯೋಜನೆಯಡಿ ಲಿಂಗರಾಜಪುರಂ ಸರ್ಕಾರಿ ಶಾಲೆಯಲ್ಲಿ ಸೇವಾ ಕಾರ್ಯಕ್ರಮ ನಡೆಸಿದರು. IA ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ, ಮಕ್ಕಳಿಗೆ ಶಿಕ್ಷಣ, ಸ್ವಚ್ಛತೆ, ಪರಿಸರ ಸಂರಕ್ಷಣೆ ಬಗ್ಗೆ ತಿಳಿಸಿದರು. ಶಾಲಾ ಗೋಡೆಗಳ ಮೇಲೆ ಚಿತ್ರ ಬಿಡಿಸಿ ಸೃಜನಶೀಲತೆ ಹೆಚ್ಚಿಸಿದರು. ಈ ಕಾರ್ಯಕ್ರಮಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರು (ಏ.10): ಇಂಡಿಯನ್ ಅಕಾಡೆಮಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ವಿದ್ಯಾರ್ಥಿಗಳು NSS ಯೋಜನೆಯಡಿ ಲಿಂಗರಾಜಪುರಂನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಸೇವಾ ಕಾರ್ಯದಲ್ಲಿ ತೊಡಗಿದ್ದು, ಸಮಾಜ ಸೇವೆಗೆ ಮೆಚ್ಚುಗೆಗೂಪಾತ್ರರಾದರು. ಈ ಕಾರ್ಯಕ್ರಮದಲ್ಲಿ IA ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಹಾಗೂ ಇಂಡಿಯನ್ ಅಕಾಡೆಮಿ ಕಾಲೇಜ್ ಆಫ್ ನರ್ಸಿಂಗ್‌ನ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ವಿದ್ಯಾರ್ಥಿಗಳು ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಶಿಕ್ಷಣದ ಮಹತ್ವ, ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಿದರು. ಮಕ್ಕಳ ಸೃಜನಶೀಲತೆಯನ್ನು ಉತ್ತೇಜಿಸಲು ಶಾಲೆಯ ಗೋಡೆಯ ಮೇಲೆ ಆಕರ್ಷಕ ಚಿತ್ರಕಲೆಯನ್ನು ಚಿತ್ರಿಸಿದರು. ಈ ಕಲಾಕೃತಿಗಳು ಶಾಲೆಯ ಸೌಂದರ್ಯವನ್ನು ಹೆಚ್ಚಿಸಿದಷ್ಟೇ ಅಲ್ಲದೆ, ಮಕ್ಕಳಲ್ಲಿ ಉತ್ಸಾಹ ಹಾಗೂ ರಚನಾತ್ಮಕತೆಯ ಚೈತನ್ಯವನ್ನು ಕೂಡ ಹೆಚ್ಚಿಸಿದವು.
ಇದನ್ನೂ ಓದಿ: ಸರ್ಕಾರಿ ಶಾಲೆಗಾಗಿ 2 ಎಕರೆ ಜಮೀನು ದಾನ: ಸ್ವಾಮೀಜಿ ಕೆಲಸಕ್ಕೆ ಭಾರೀ ಶ್ಲಾಘನೆ!
ಸ್ಥಳೀಯರು ಹಾಗೂ ಶಾಲೆಯ ಸಿಬ್ಬಂದಿಯವರು ವಿದ್ಯಾರ್ಥಿಗಳ ಸೇವಾಭಾವನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. “ಈ ಯೋಜನೆಯ ಮೂಲಕ ನಾವು ಸಮಾಜದ ಕಲ್ಯಾಣಕ್ಕೆ ನಮ್ಮಿಂದಾದಷ್ಟು ಕೊಡುಗೆ ನೀಡಿದ ಅನುಭವ ತುಂಬಾ ತೃಪ್ತಿದಾಯಕವಾಗಿದೆ,” ಎಂದು ವಿದ್ಯಾರ್ಥಿಗಳೊಬ್ಬರು ಹಂಚಿಕೊಂಡರು.
ಈ ರೀತಿಯ ಸೇವಾ ಕಾರ್ಯಗಳು ಯುವಜನತೆಯಲ್ಲಿ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ ಎಂಬುದು ಸ್ಪಷ್ಟವಾಗಿದೆ.
