ಬೆಂಗಳೂರು (ಅ. 16): ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಉತ್ತರ ಕರ್ನಾಟಕದ ಜನ ನಲುಗಿ ಹೋಗಿದ್ದಾರೆ. ಎಲ್ಲೆಲ್ಲೂ ಪ್ರವಾಹ ಭೀತಿ, ಮನೆಗಳಿಗೆ ನುಗ್ಗಿದ ನೀರು, ಬೆಳೆ ನಾಶ, ರೈತನ ಕಣ್ಣೀರು. ಇದು ಸಾಮಾನ್ಯವಾಗಿ ಕಂಡು ಬರುವ ದೃಶ್ಯವಾಗಿದೆ. ಮಹಾರಾಷ್ಟ್ರದ ಜಲಾಶಯಗಳಿಂದ ಹೆಚ್ಚು ನೀರು ಹರಿದು ಬರುತ್ತಿರುವುದರಿಂದ ಭೀಮಾ ನದಿ ಸೇರಿ ಉತ್ತರ ಕರ್ನಾಟಕದ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 

ಪ್ರವಾಹದಿಂದ ವಿಜಯಪುರ, ಕಲ್ಬುರ್ಗಿ, ಯಾದಗಿರಿ ಭಾಗದಲ್ಲಿ ನೂರಾರು ಮನೆಗಳು ಜಖಂ ಆಗಿವೆ. ಬೆಳೆಗಳು ಕೊಚ್ಚಿ ಹೋಗಿವೆ. ಈಗಾಗಲೇ ನದಿ ತೀರದ 10 ಸಾವಿರಕ್ಕೂ ಹೆಚ್ಚು ಮಂದಿ ಸ್ಥಳಾಂತರಗೊಂಡಿದ್ದಾರೆ. 9 ಸಾವಿರ ಮಂದಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ ಒದಗಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲಾವಾರು ಚಿತ್ರಣ ಹೀಗಿದೆ.