ವೇತನ ಗೊಂದಲ, ಪೊಲೀಸರಿಗೆ ಶೀಘ್ರ ಸಿಹಿ ಸುದ್ದಿ..!
ಕರ್ನಾಟಕ ರಾಜ್ಯ ಪೊಲೀಸರಿಗೆ ಶೀಘ್ರ ಸಿಹಿ ಸುದ್ದಿ ಸಿಗಲಿದೆ. ವೇತನ ಹೆಚ್ಚಳದ ಬಗ್ಗೆ ಇರುವಂತಹ ಗೊಂದಲಗಳು ಶೀಘ್ರ ಪರಿಹಾರವಾಗಲಿದ್ದು, ಪರಿಷ್ಕೃತ ವೇತನ ಶೀಘ್ರ ಜಾರಿಯಾಗಲಿದೆ. ಈ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಏನ್ ಹೇಳಿದ್ರು, ಯಾವಾಗಿಂದ ವೇತನ ಹೆಚ್ಚಳ ಜಾರಿಯಾಗುತ್ತೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು(ನ.01): ಪೊಲೀಸರ ವೇತನ ಹೆಚ್ಚಿಸುವ ಔರಾದ್ಕರ್ ಸಮಿತಿ ನೀಡಿರುವ ಶಿಫಾರಸು ಜಾರಿಗೆ ಸರ್ಕಾರ ಬದ್ಧವಾಗಿದ್ದು, ಕಾರಣಾಂತರಗಳಿಂದ ವಿಳಂಬವಾಗಿದೆ. ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವರದಿಯನ್ನು ಸರ್ಕಾರ ಒಪ್ಪಿಕೊಂಡಿದ್ದು, ಕಾನೂನಿನ ಪ್ರಕಾರವೇ ಅನುಷ್ಠಾನಮಾಡಲಾಗುವುದು. ಈ ಬಗ್ಗೆ ಯಾರಿಗೂ ಗೊಂದಲ ಬೇಡ ಎಂದಿದ್ದಾರೆ.
ಪ್ರತ್ಯೇಕ ಬಸ್ ಪಥ ಕಾಮಗಾರಿ ವಿಳಂಬ: ಪ್ರಾಯೋಗಿಕ ಬಸ್ ಸಂಚಾರ ಯಾವಾಗಿಂದ..?
ಈ ಸಮಿತಿ ಇನ್ನೊಂದು ವರದಿ ನೀಡುವ ಸಾಧ್ಯತೆ ಇದೆ. ಎಲ್ಲ ಇಲಾಖೆಗೂ ಒಂದೇ ಕಾನೂನು ಇದೆ. ಅದೇ ರೀತಿ ಒಂದೇ ಮಾದರಿಯ ವೇತನ ನೀಡಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ, ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.
ಪೊಲೀಸ್ ನೇಮಕಾತಿ ವಯಸ್ಸು ಹೆಚ್ಚಳ ಮನವಿಗೆ ಸಿಎಂ ಸ್ಪಂದನೆ.
ರಾಘವೇಂದ್ರ ಔರಾದ್ಕರ್ ವರದಿ ಜಾರಿ ವಿಳಂಬದಿಂದ ಅಸಮಾಧಾನಗೊಂಡಿರುವ ಪೊಲೀಸ್ ಸಿಬ್ಬಂದಿ ಸಮಾಧಾನಪಡಿಸುವ ನಿಟ್ಟಿನಲ್ಲಿ ಸರ್ಕಾರ ಈ ಆದೇಶ ಕೈಗೊಂಡಿತ್ತು. ಆದರೆ ಪೇದೆಯಿಂದ ಹಿಡಿದು ಪೊಲೀಸ್ ಇನ್‌ಸ್ಪೆಕ್ಟರ್‌ವರೆಗೆ ಅನ್ವಯವಾಗುವಂತೆ ನಿಗದಿಪಡಿಸಿ ಹೊರಡಿಸಿರುವ ಮಾಸಿಕ ಕಷ್ಟಪರಿಹಾರ ಹಾಗೂ ವಿಶೇಷ ಭತ್ಯೆ ಹೆಚ್ಚಳ ಕುರಿತ ಆದೇಶವು ನಿಯೋಜನೆ ಮೇರೆಗೆ ವಿವಿಧ ಇಲಾಖೆ ಹಾಗೂ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಅನ್ವಯಯಿಸುವುದಿಲ್ಲ ಎಂಬ ಅಂಶಗಳನ್ನೊಳಗೊಂಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.