ರಾಸಲೀಲೆ ಸಿಡಿ ಪ್ರಕರಣ: ರಮೇಶ್‌ ಜಾರಕಿಹೊಳಿಗೆ ಮತ್ತೊಂದು ನೋಟಿಸ್‌

ನೋಟಿಸ್‌ ಸ್ವೀಕರಿಸಿದ ಸೋದರ ಬಾಲಚಂದ್ರ ಜಾರಕಿಹೊಳಿ| ಕೊರೋನಾ ಸೋಂಕು ತಗುಲಿ ಸದ್ಯ ಹೋಮ್‌ ಕ್ವಾರಂಟೈನ್‌ನಲ್ಲಿರುವ ರಮೇಶ್‌ ಜಾರಕಿಹೊಳಿ| ಸಿಡಿ ಯಲ್ಲಿರುವ ಯುವತಿಯನ್ನು ಹಲವು ಬಾರಿ ವಿಚಾರಣೆ| ಸಿಡಿ ಕೇಸ್‌ನ ಹಿಂದಿನ ಹಲವು ರಹಸ್ಯಗಳನ್ನು ಕೆದಕಿ ಸಾಕ್ಷ್ಯ ಕಲೆ ಹಾಕಿದ ಎಸ್‌ಐಟಿ| 

SIT Notice Issued to Ramesh Jarkiholi for Attend the Hearing grg

ಬೆಂಗಳೂರು(ಏ.17): ಸಿಡಿ ಪ್ರಕ​ರಣ ಸಂಬಂಧ ವಿಶೇಷ ತನಿಖಾ ತಂಡ​ (​ಎ​ಸ್‌​ಐ​ಟಿ) ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರಿಗೆ ಈ ತಿಂಗಳ 20ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿದೆ.

ರಮೇಶ್‌ ಜಾರಕಿಹೊಳಿ ಅವರಿಗೆ ಕೊರೋನಾ ಸೋಂಕು ತಗುಲಿ ಸದ್ಯ ಹೋಮ್‌ ಕ್ವಾರಂಟೈನ್‌ನಲ್ಲಿರುವ ಹಿನ್ನೆಲೆಯಲ್ಲಿ ಶುಕ್ರವಾರ ಅವರ ಪರವಾಗಿ ಸಹೋದರ ಬಾಲಚಂದ್ರ ಜಾರಕಿಹೊಳಿ ಎಸ್‌ಐಟಿಯಿಂದ ನೋಟಿಸ್‌ ಸ್ವೀಕರಿಸಿದ್ದಾರೆ.

ರಾರಾ ಜಾರಕಿ ಎಂದವಳು ಒನ್ಸ್ ಮೋರ್ ಅಂದಳಾ ಸೀಡಿ ಲೇಡಿ..?

ಈಗಾಗಲೇ ಸಿಡಿ ಯಲ್ಲಿರುವ ಯುವತಿಯನ್ನು ಹಲವು ಬಾರಿ ವಿಚಾರಣೆ ನಡೆಸಿರುವ ಎಸ್‌ಐಟಿ ಅಧಿಕಾರಿಗಳು ಸಿಡಿ ಕೇಸ್‌ನ ಹಿಂದಿನ ಹಲವು ರಹಸ್ಯಗಳನ್ನು ಕೆದಕಿ ಸಾಕ್ಷ್ಯ ಕಲೆ ಹಾಕಿದ್ದಾರೆ. ರಮೇಶ್‌ ಜಾರಕಿಹೊಳಿ ವಿಚಾರಣೆಗೆ ಹಾಜರಾದರೆ ಅವರಿಂದ ಯಾವೆಲ್ಲ ಮಾಹಿತಿ ಕಲೆ ಹಾಕಬೇಕು ಎಂಬ ಬಗ್ಗೆ ಈಗಾಗಲೇ ಸಿದ್ಧತೆ ನಡೆಸಲಾಗಿದೆ. ರಮೇಶ್‌ ಜಾರ​ಕಿ​ಹೊಳಿ ಅವ​ರ ವಿಚಾರಣೆ ನಡೆಸಿದ ಬಳಿ​ಕ​ವ​ಷ್ಟೇ ಪ್ರಕರಣದ ತನಿಖೆ ಪ್ರಗತಿ ಸಾಧಿ​ಸ​ಲಿ​ದೆ ಎಂದು ಮೂಲ​ಗಳು ತಿಳಿ​ಸಿ​ವೆ.

ಎರಡು ದಿನ​ಗಳ ಹಿಂದಷ್ಟೇ ಯುವತಿ ಪರ ವಕೀಲ ಸೂರ್ಯ ಮುಕುಂದ​ರಾಜ್‌ ಅವರು ರಮೇಶ್‌ ಜಾರ​ಕಿ​ಹೊಳಿ ವಿಚಾ​ರಣೆ ನಡೆ​ಸು​ವ​ವ​ರೆಗೂ ತಮ್ಮ ಕಕ್ಷಿ​ದಾ​ರ​ರಾದ ಯುವತಿ ವಿಚಾ​ರ​ಣೆಗೆ ಹಾಜ​ರಾ​ಗು​ವು​ದಿಲ್ಲ ಎಂದು ಹೇಳಿಕೆ ನೀಡಿ​ದ್ದರು. ಈ ಬೆನ್ನಲ್ಲೇ ಎಸ್‌​ಐಟಿ ರಮೇಶ್‌ ಅವ​ರಿಗೆ ನೋಟಿಸ್‌ ಜಾರಿ ಮಾಡಿದೆ ಎಂದು ಹೇಳ​ಲಾ​ಗಿ​ದೆ.
 

Latest Videos
Follow Us:
Download App:
  • android
  • ios