SIR ರಾಮನಗರದಲ್ಲಿ ನಡೆದ ರೀತಿಯಲ್ಲೇ ಬೆಂಗಳೂರಿನ ಗುರಪ್ಪನಪಾಳ್ಯ, ಜಯನಗರ, ತುಮಕೂರು ಜಿಲ್ಲೆಯ ಕುಣಿಗಲ್‌ ಮತ್ತು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲೂ ಎಸ್‌ಐಆರ್‌ ಅರ್ಜಿ ತುಂಬುವ ವೇಳೆ ಕಾನೂನು ಉಲ್ಲಂಘನೆ ಆರೋಪ ಕೇಳಿಬಂದಿದೆ.

ಬೆಂಗಳೂರು (ಜು.3): ರಾಮನಗರದಲ್ಲಿ ನಡೆದ ರೀತಿಯಲ್ಲೇ ಬೆಂಗಳೂರಿನ ಗುರಪ್ಪನಪಾಳ್ಯ, ಜಯನಗರ, ತುಮಕೂರು ಜಿಲ್ಲೆಯ ಕುಣಿಗಲ್‌ ಮತ್ತು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲೂ ಎಸ್‌ಐಆರ್‌ ಅರ್ಜಿ ತುಂಬುವ ವೇಳೆ ಕಾನೂನು ಉಲ್ಲಂಘನೆ ಆರೋಪ ಕೇಳಿಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರು ಅಪಾರ್ಟ್‌ಮೆಂಟ್, ಧಾರ್ಮಿಕ ಸ್ಥಳಗಳಲ್ಲಿ ಅರ್ಜಿ ಸಾಮೂಹಿಕ ಭರ್ತಿ

 ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಜನರನ್ನು ಒಗ್ಗೂಡಿಸಿ ಫಾರ್ಮ್‌ ತುಂಬಲಾಗಿದೆ. ಇನ್ನು ಕುಣಿಗಲ್‌ನ ಬಡಾವಣೆಯೊಂದರಲ್ಲಿ ಬಿಎಲ್‌ಒಗಳು ಇಲ್ಲದೇ ಮಹಿಳೆಯರು ಸಾಮೂಹಿಕವಾಗಿ ಎಸ್‌ಐಆರ್‌ ಅರ್ಜಿ ತುಂಬಿದ್ದಾರೆ. ಮತ್ತೊಂದೆಡೆ ತೀರ್ಥಹಳ್ಳಿ ಸಮೀಪದ ಗಾರ್ಡರಗದ್ದೆಯಲ್ಲಿ ಮತದಾರರಿಗೆ ನ್ಯಾಯಬೆಲೆ ಅಂಗಡಿಗೆ ಬರುವಂತೆ ಪೋಸ್ಟರ್ ಅಂಟಿಸಿರುವುದು ವಿವಾದಕ್ಕೆ ಕಾರಣವಾಗಿದೆ. 

ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು, ಆಗುಂಬೆ ಭಾಗದಲ್ಲಿ ಮಳೆಯಾಗುತ್ತಿದೆ. ಇದರಿಂದಾಗಿ ಒಂದೇ ಕಡೆ ಸೇರಿದಲ್ಲಿ ಅನುಕೂಲ ಆಗಬಹುದು ಎಂಬ ಕಾರಣಕ್ಕೆ ಕೆಲವು ಸಾರ್ವಜನಿಕರು ಈ ಪೋಸ್ಟರ್ ಹಾಕಿದ್ದರು. ಇದರಲ್ಲಿ ಬಿಎಲ್ಒಗಳಿಂದ ಯಾವುದೇ ರೀತಿಯ ಕರ್ತವ್ಯಚ್ಯುತಿ ಆಗಿಲ್ಲ ಎಂದಿದ್ದಾರೆ.

ಕಲ್ಯಾಣ ಮಂಟಪದಲ್ಲಿ ಫಾರ್ಮ್‌ ವಿತರಣೆ ಕಾನೂನು ಬಾಹಿರ

ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಪ್ರಕ್ರಿಯೆಗೆ ಬಿಎಲ್‌ಓಗಳೇ ಮನೆ-ಮನೆಗೆ ಹೋಗಿ ಗಣತಿ ನಮೂನೆ ನೀಡಬೇಕು. ಯಾರೇ ಆಗಲಿ ಕಲ್ಯಾಣ ಮಂಟಪ ಮತ್ತಿತರ ಕಡೆ ಮಾಡುವಂತಿಲ್ಲ. ಶಾಸಕರು ಹೇಳಿದರು ಎಂದು ಕಲ್ಯಾಣ ಮಂಟಪ ಮತ್ತಿತರೆ ಕಡೆ ವಿತರಣೆ ಆಗಬಾರದು. ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಬೇಕಾದರೆ ಬಿಎಲ್‌ಎಗಳು ಜನರಿಂದ ಸಂಗ್ರಹಿಸಿ ಬಿಎಲ್‌ಓಗಳಿಗೆ ನೀಡಲು ಅವಕಾಶವಿದೆ.

ಡಿ.ಕೆ.ಶಿವಕುಮಾರ್‌, ಸಿಎಂ